ಚಾಮರಾಜನಗರ: ವಿಕಲಚೇನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2023-24ನೇ ಸಾಲಿಗೆ ಜಿಲ್ಲೆಯ ಅಂಗವಿಕಲರಿಗೆ ವಿವಾಹ ಪ್ರೋತ್ಸಾಹ ಧನದ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ತಾಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ಅರ್ಜಿ ಪಡೆದು ನವೆಂಬರ್ 5ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ (ದೂ.ಸಂ. 08226-223688), ಚಾಮರಾಜನಗರ ಎಂ.ಆರ್.ಡಬ್ಲ್ಯೂ ರಾಜೇಶ್ (ಮೊ.ಸಂ. 8073716208), ಕೊಳ್ಳೇಗಾಲ ಎಂ.ಆರ್.ಡಬ್ಲ್ಯೂ ಕವಿರತ್ನ (ಮೊ.ಸಂ 7892715408), ಗುಂಡ್ಲುಪೇಟೆ ಎಂ.ಆರ್.ಡಬ್ಲ್ಯೂ ಮಂಜುಳ (ಮೊ.ಸಂ.9742423332), ಯಳಂದೂರು ಎಂ.ಆರ್.ಡಬ್ಲ್ಯೂ ಮಹದೇವಮ್ಮ (ಮೊ.ಸಂ 9740164149) ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.