ಬಿಳಿಗೆರೆ : ಅನ್ವೇಷಣಾ ಶಿಕ್ಷಣ ಸಂಸ್ಥೆಯು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸದುದ್ದೇಶದಿಂದ ಎಂಟು ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಎಸ್ಯಾಟ್ ಪರೀಕ್ಷೆಯನ್ನು ಆಯೋಜಿಸಿದೆ.
ಅನ್ವೇಷಣಾ ಶಿಕ್ಷಣ ಸಂಸ್ಥೆಯು ಪ್ರತಿವರ್ಷದಂತೆ ಈ ವರ್ಷವೂ ನವೆಂಬರ್ 24 ರಂದು ನಡೆಸುವ ಸಂಸ್ಥಾಪಕರ ದಿನದ ಅಂಗವಾಗಿ ನವೆಂಬರ್ ತಿಂಗಳನ್ನು ಪ್ರತಿಬಾನ್ವೇಷಣಾ ಮಾಸ ಎಂದು ಪ್ರತಿವರ್ಷ ಆಚರಿಸುತ್ತಿದ್ದು, ನವೆಂಬರ್ 5 ರಂದು ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ತಾಲ್ಲೂಕುಗಳ ಸುತ್ತಮುತ್ತಲ ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭೆಯನ್ನು ಹುಡುಕಿ ಹೊರತೆಗೆದು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ಕಾರ್ಯಕ್ರಮವನ್ನು ಸಂಸ್ಥೆಯು ಹಮ್ಮಿಕೊಳ್ಳುತ್ತಿದೆ.
ಎಂಟು ಮತ್ತು ಹತ್ತನೇ ತರಗತಿ ವಿದ್ರ್ಯಾಥಿಗಳಿಗೆ ನಡೆಯುವ ಈ ಪರೀಕ್ಷೆಯಲ್ಲಿ ಶೇ95 ಅಂಕ ಪಡೆದ ವಿದ್ಯಾರ್ಥಿಗಳು ಒಂಬತ್ತು ಮತ್ತು ಹನ್ನೊಂದನೇ ತರಗತಿ ಪ್ರವೇಶ ಶುಲ್ಕದಲ್ಲಿ ಶೇ25 ರಷ್ಟು ವಿನಾಯಿತಿಯನ್ನು ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರಾದ ಹೆಚ್ ಕೆ ಚಂದ್ರಮೋಹನ್ ಅವರು ತಿಳಿಸಿದ್ದಾರೆ.
ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್ 5 ರಂದೇ ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರವೇಶ ಶುಲ್ಕದಲ್ಲಿ ಶೇ 5 ರಷ್ಟು ವಿನಾಯಿತಿಯನ್ನು ನೀಡಲಾಗುವುದೆಂದು ಸಹ ತಿಳಿಸಿದ್ದಾರೆ. ಅಲ್ಲದೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್ 19 ರಂದು ಇಂಗ್ಲೀಷ್ ತರಬೇತಿ ಕಾರ್ಯಾಗಾರ ಹಾಗೂ ಸರಳ ಗಣಿತ ಕಲಿಕೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಆಸಕ್ತ ವಿದ್ಯಾರ್ಥಿಗಳು ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಹೆಸರನ್ನು ನೊಂದಾಯಿಸಿಕೊಳ್ಳಲು 9901136782, 8495098544 ಈ ನಂಬರುಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 9341060515, 9900000968 ಹಾಗೂ 9110400147 ಸಂಪರ್ಕಿಸಬಹುದು.