ಚಾಮರಾಜನಗರ: ಕೇಂದ್ರ ಸರ್ಕಾರದ ಕಾರ್ಮಿಕ ಉದ್ಯೋಗ ಮಂತ್ರಾಲಯವು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಕ್ರೂಢೀಕರಿಸುವ ಸಲುವಾಗಿ ಅಪಘಾತ ಪರಿಹಾರಕ್ಕಾಗಿ ನೋಂದಣಿಯಾದ ಅರ್ಹ ಫಲಾನುಭವಿಗಳ ನಾಮನಿರ್ದೇಶಿತರು ಹಾಗೂ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರದ ಯೋಜನೆಯಾದ ಇ-ಶ್ರಮ್ ಪೋರ್ಟಲ್ನಲ್ಲಿ 379 ವರ್ಗಗಳ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ್ ಪೋರ್ಟಲ್ ಮೂಲಕ ನೋಂದಾಯಿಸಲಾಗುತ್ತಿದೆ. ದಿನಾಂಕ:31-03-2022ರವರೆಗೆ ನೋಂದಣಿಯಾದ ಮತ್ತು ದಿನಾಂಕ:31-03-2022ರೊಳಗೆ ಅಪಘಾತಗೊಂಡು ಮರಣ ಹೊಂದಿದ, ಶಾಶ್ವತ ದುರ್ಬಲತೆಗೆ ಒಳಗಾದ ಅಸಂಘಟಿತ ಕಾರ್ಮಿಕರಿಗೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ 2 ಲಕ್ಷ ಪರಿಹಾರ ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ. ಗಳ ಅಪಘಾತ ಪರಿಹಾರವನ್ನು ಮಂಜೂರು ಮಾಡಲಾಗುವುದು.
ಇ-ಶ್ರಮ್ ಯೋಜನೆಯಡಿ ನೋಂದಾಯಿಸಿ ಮರಣ ಹೊಂದಿದ್ದಲ್ಲಿ ಆಧಾರ್ ಕಾರ್ಡ್, ಇ-ಶ್ರಮ್ ಕಾರ್ಡ್, ಮರಣ ಪ್ರಮಾಣ ಪತ್ರ, ಮರಣ ಕಾರಣದ ವೈದ್ಯಕೀಯ ಪ್ರಮಾಣ ಪತ್ರ, ಎಫ್.ಐ.ಆರ್ ವರದಿ, ಮರಣೋತ್ತರ ಪರೀಕ್ಷೆಯ ವರದಿ, ಫಲಾನುಭವಿಯು ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ನ್ಯಾಯಾಲಯವು ನೀಡಿದ ಗುರುತ್ವದ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು.
ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ಅಥವಾ ಭಾಗಶಃ ಅಂಗವೈಕಲ್ಯ ಹೊಂದಿದ್ದಲ್ಲಿ ಆಧಾರ್ ಕಾರ್ಡ್, ಇ-ಶ್ರಮ್ ಕಾರ್ಡ್, ಅಪಘಾತ ಕಾರಣದಿಂದ ಉಂಟಾದ ಅಂಗವೈಕಲ್ಯವನ್ನು ಸೂಚಿಸುವ ಡಿಸ್ಟಾರ್ಜ್ ಸಾರಾಂಶವನ್ನು ಒಳಗೊಂಡಿರುವ ಆಸ್ಪತ್ರೆಯ ವರದಿ, ರಾಜ್ಯ/ಯುಟಿ ಸರ್ಕಾರದ ಅಧೀಕೃತ ಸಿಬ್ಬಂದಿಯಿಂದ ನೀಡಲಾದ ಅಂಗವೈಕಲ್ಯ ಪ್ರಮಾಣ ಪತ್ರ ಅಥವಾ (ಶಾಶ್ವತ) ವಿಕಲಾಂಗ ವ್ಯಕ್ತಿಗಳ ಸಬಲೀಕರಣದ ಇಲಾಖೆಯಿಂದ ನೀಡಲಾದ ಅನನ್ಯ ಅಂಗವೈಕಲ್ಯ ಗುರುತಿನ ಚೀಟಿ, ಎಮ್/ಒ ಭಾರತ ಸರ್ಕಾರದ ಸಾಮಾಜಿಕ ನ್ಯಾಯಾ ಮತ್ತು ಸಬಲೀಕರಣ ವತಿಯಿಂದ ನೀಡಲಾದ ಪ್ರಮಾಣ ಪತ್ರ ಹೊಂದಿರುವವರು ಕಾರ್ಮಿಕ ಇಲಾಖೆಯಲ್ಲಿ ಅರ್ಜಿ ಪಡೆದು ಸಲ್ಲಿಸಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಸವಿತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.