ಚಾಮರಾಜನಗರ: ಎಸ್.ಬಿ.ಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ನಿರುದ್ಯೋಗ ಯುವಕ ಯುವತಿಯರಿಗೆ ಸ್ವ ಉದ್ಯೋಗಕ್ಕೆ ಸಹಾಯವಾಗುವ ವಿವಿಧ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ದ್ವಿ ಚಕ್ರ ವಾಹನ ರಿಪೇರಿ, ಸಿ.ಸಿ ಟಿವಿ ಮತ್ತು ಸೆಕ್ಯೂರಿಟಿ ಅಳವಡಿಕೆ ಹಾಗೂ ರಿಪೇರಿ ತರಬೇತಿಯನ್ನು ನಗರದ ಬಳಿಯ ಸಂತೇಮರಹಳ್ಳಿ ರಸ್ತೆಯ ಮಾದಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟಲ್ ಕಟ್ಟಡದ ಎಸ್.ಬಿ.ಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಪ್ರಾರಂಭಿಸಲಾಗುತ್ತದೆ.
ಆಸಕ್ತಿಯುಳ್ಳ ಗ್ರಾಮೀಣ ಅಭ್ಯರ್ಥಿಗಳು ಕೂಡಲೇ ನಗರದ ಬಿ. ರಾಚಯ್ಯ ಜೋಡಿ ರಸ್ತೆಯ ಲೀಡ್ ಬ್ಯಾಂಕ್ ಕಟ್ಟqದಲ್ಲಿರುವ ಎಸ್.ಬಿ.ಐ ಗ್ರಾಮೀಣ ತರಬೇತಿ ಸಂಸ್ಥೆಯ ಕಚೇರಿಯಲ್ಲಿ ಅರ್ಜಿ ಪಡೆದು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ. ೦೮೨೨೬-೨೦೦೨೧೪, ಮೊ.ಸಂ. ೯೬೦೬೦೯೮೮೭೮ ಸಂಪರ್ಕಿಸುವಂತೆ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.