ಚಾಮರಾಜನಗರ: ಪ್ರಪಂಚದಲ್ಲಿರುವ ಎಲ್ಲಾ ಧರ್ಮಗಳು ಶಾಂತಿ, ನೆಮ್ಮದಿ ಹಾಗೂ ಸಾಮರಸ್ಯ ಜೀವನ ತತ್ವವನ್ನು ಸಾರುತ್ತದೆ. ಯೇಸು ಕ್ರಿಸ್ತನು ಸಹ ಶಾಂತಿ ಪ್ರಿಯನಾಗಿ, ಸಮಾಜಕ್ಕೆ ಒಳಿತು ಬಯಸುವ ಮೂಲಕ ಕೈಸ್ತ ಧರ್ಮವನ್ನು ಸ್ಥಾಪನೆ ಮಾಡಿದರು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ತಾಲೂಕಿನ ಮಸಗಾಪುರದಲ್ಲಿ ಚಾಮರಾಜನಗರ ಪ್ರಾದೇಶಿಕ ಪರಿಷತ್ತು ವತಿಯಿಂದ ನಡೆದ ಏರಿಯಾ ಕ್ರಿಸ್ಮಸ್ ಸಮಾರಂಭವನ್ನು ಉದ್ಗಾಟಿಸಿ, ಏರಿಯಾದ ಧರ್ಮಗುರುಗಳನ್ನು ಅಭಿನಂದಿಸಿ, ಕ್ರಿಸ್‍ಮಸ್ ಹಬ್ಬದ ಶುಭಾಶಯ ಕೋರಿ ಅವರು ಮಾತನಾಡಿದರು.

ಚಾಮರಾಜನಗರ ಪ್ರಾದೇಶಿಕ ಪರಿಷತ್ತು ಕ್ರಿಸ್‍ಮಸ್ ಹಬ್ಬವನ್ನು 15 ದಿನಗಳ ಮುಂಚಿತವಾಗಿ ಆಯೋಜನೆ ಮಾಡುವ ಮೂಲಕ ಯೇಸುವಿನ ಆರಾಧನೆಯನ್ನು ಮಾಡಿ ಜಗತ್ತಿಗೆ ಪ್ರೀತಿಯನ್ನು ಕರುಣಿಸು ಎಂದು ಪ್ರಾರ್ಥಿಸಿಕೊಳ್ಲುತ್ತಿರುವುದು ವಿಶೇಷವಾಗಿದೆ. ಯೇಸು ಹುಟ್ಟಿ 2023 ವರ್ಷಗಳಾಗಿದೆ. ಯೇಸುಕ್ರಿಸ್ತ ಸಾರಿದ ತತ್ವಗಳು ಇಂದಿಗೂ ಪ್ರಸ್ತುತವಾಗಿದೆ. ಯಾವುದೇ ಧರ್ಮ ಜಾತಿ ಇರಲಿ ಮೊದಲು ನಾವು ಮಾನವರಾಗಿ ವರ್ತನೆ ಮಾಡೋಣ. ಈ ಭಾಗದಲ್ಲಿ ಕೈಸ್ತರ ಸಮುದಾಯದವರು ಬಹಳ ಹೆಚ್ಚಿನ ರೀತಿಯಲ್ಲಿ ನನ್ನನ್ನು ಪ್ರೋತ್ಸಾಹಿಸಿ, ನಾಲ್ಕನೇ ಬಾರಿ ಗೆಲುವಿನಲ್ಲಿ ಶ್ರಮ ವಹಿಸಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹೀಗೆ ಇರಲಿ. ಭಗವಾನ್ ಯೇಸು ಕ್ರಿಸ್ತ ನಿಮ್ಮೆಲ್ಲರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಕೆಎಸ್‍ಡಿನ ಧರ್ಮಾಧ್ಯಕ್ಷರಾದ ರೈಟ್. ರೆವ. ಹೇಮಚಂದ್ರಕುಮಾರ್ ಮಾತನಾಡಿ, ಯೇಸು ಕ್ರಿಸ್ತರು 2023 ವರ್ಷಗಳ ಹಿಂದೆ ಜನ್ಮತಾಳಿ ಶಾಂತಿ ಮತ್ತು ಪ್ರೀತಿಯನ್ನು ಜಗತ್ತಿಗೆ ಸಾರಿ ಕೈಸ್ತರ ಧರ್ಮವನ್ನು ಸ್ಥಾಪನೆ ಮಾಡಿದ್ದರು. ಅವರ ಅಂದು ಹೇಳಿದ ಹಾಗು ದಾಖಲು ಮಾಡಿದ ವಿಚಾರಗಳು 2 ಸಾವಿರ ವರ್ಷಗಳು ಕಳೆದರು ಸಹ ನಿಜವಾಗುತ್ತಿದೆ. ಪ್ರಸ್ತುತ ಈಗ ನಡೆಯುತ್ತಿರುವ ವಿದ್ಯಾಮಾನಗಳ ಕುರಿತು ಭವಿಷ್ಯ ನುಡಿದಿದ್ದರು. ನೀರು ಮತ್ತು ಕಟ್ಟಿಗೆಯನ್ನು ಹಣಕೊಟ್ಟು ಖರೀದಿಸುವ ಕಾಲ ಬರುತ್ತದೆ ಎಂದು ಹೇಳಿದ್ದರು. ಈಗ ನಮ್ಮ ಕಾಲದಲ್ಲಿಯೇ ಖರೀದಿ ಮಾಡುತ್ತಿವೆ. ಪ್ರಪಂಚಕ್ಕೆ ಶಾಂತಿಯನ್ನು ಸಾರಿದ ಯೇಸು ಕ್ರಿಸ್ತನ ಅನುಯಾಯಿಗಳಾದ ನಾವೆಲ್ಲರು ಪ್ರೀತಿಯನ್ನು ಹಂಚಬೇಕಾಗಿದೆ. ಕತ್ತಲಿನಿಂದ ಬೆಳಕಿನಡೆಗೆ ಹೋಗುವ ಮೂಲಕ ಬಡವರಿಗೆ ಸಹಾಯ ಮಾಡಿ ಅವರನ್ನು ನಮ್ಮೋಟ್ಟಿಗೆ ಕರೆದುಕೊಂಡು ಹೋಗುವ ಪ್ರಯತ್ನವನ್ನು ಯೇಸುವಿನ ಸಂಕಲ್ಪದೊಂದಿಗೆ ಮಾಡೋಣ ಎಂದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ಉಮೇಶ್, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್ ಮಾತನಾಡಿ, ಚಾಮರಾಜನಗರ ಪ್ರಾಧೇಶಿಕ ಪರಿಷತ್ ಏರಿಯಾ ಕ್ರಿಸ್ಮ್‍ಸ್ ಆಚರಣೆ ಮಾಡುವ ಮೂಲಕ ಯೇಸುವಿನ ಸಂದೇಶವನ್ನು ಸಾರುವ ಸಹಬಾಳ್ವೆಗೆ ಹೆಚ್ಚಿನ ಅದ್ಯತೆ ನೀಡಿದ್ದಾರೆ.
ಯೇಸು ಕ್ರಿಸ್ತ ಜಗತ್ತಿಗೆ ಪ್ರೀತಿಯ ಸಂದೇಶವನ್ನು ನೀಡಿದ್ದಾರೆ ಎಂದರು ಕಾರ್ಯಕ್ರಮದಲ್ಲಿ ಸಿಎಸ್‍ಎಸ್‍ನ ಕಾರ್ಯದರ್ಶಿ ವಿಲಿಯ್ ಕ್ಯಾರಿ, ಖಜಾಂಚಿ ವೆಲ್ಸನ್ ಪಾಲಣ್ಣ, ಚಾಮರಾಜನಗರ ವಲಯ ಅಧ್ಯಕ್ಷ ಪ್ರಕಾಶ್ ದಾಸರ, ಉಪಾಧ್ಯಕ್ಷರಾದ ದೆಬೋರ್ ಶಾಂತ ಕುಮಾರಿ, ಕಾರ್ಯದರ್ಶಿ ತಾ.ಪಂ. ಮಾಜಿ ಸದಸ್ಯ ಎಸ್. ರಾಜು, ಖಜಾಂಚಿ ಶ್ಯಾಮಲ್ ಅಪ್ಪಾಜಿ ಎಲ್ಲಾ ಏರಿಯಾ ಸಭಾ ಪಾಲಕರು ಮತ್ತು ಕ್ರೈಸ್ತ ಬಂಧುಗಳು ಇದ್ದರು.