ಕಂದಾಯ ಅದಾಲತ್ ನಡೆಸುವಂತೆ ಜಿಲ್ಲಾಡಳಿತಕ್ಕೆ ಮನವಿ

ಚಾಮರಾಜನಗರ: ಕಂದಾಯ ಇಲಾಖೆ ವತಿಯಿಂದ 1985 ರಲ್ಲಿ ಘೋಷಣೆ ಮಾಡಿದ್ದ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ತುರ್ತಾಗಿ ಆರಂಭಿಸುವಂತೆ ರಾಜ್ಯ ನಿರುದ್ಯೋಗಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅವರಿಗೆ ರಾಜ್ಯ ನಿರುದ್ಯೋಗಿಗಳ ಸಂಘದ ಅಧ್ಯಕ್ಷ ಕೂಡ್ಲೂರು ಶ್ರೀಧರ್ ಮೂರ್ತಿ ಮನವಿ ಸಲ್ಲಿಸಿದ್ದರು.

1985ರಲ್ಲಿ ಜಾರಿಯಾದ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ತಹಸೀಲ್ದಾರ್ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರು ಮನೆಮನೆಗೆ ತೆರಳಿ, ಜಮೀನು ಖಾತೆಯಾಗದಿದ್ದರೆ ಖಾತೆಗೆ ಕ್ರಮವಹಿಸುವುದು, ಪೌತಿಖಾತೆ ಮಾಡಿಕೊಡುವ ಕೆಲಸ ಮಾಡಿಕೊಡುತ್ತಿದ್ದರು.

ಆ ಸಂದರ್ಭದಲ್ಲಿ ಕೆಲವರು ಮಾತ್ರ ಕಂದಾಯ ಅದಾಲತ್ ಸೌಲಭ್ಯ ಪಡೆದುಕೊಂಡರು, ಈಚಿನ ಕೆಲವರ್ಷಗಳಲ್ಲಿ ಕಂದಾಯ ಅದಾಲತ್ ಆಯೋಜನೆಯಾಗಿಲ್ಲ. ಹಾಲಿಇರುವ ಕುಟುಂಬಗಳ ಜಮೀನು ಖಾತೆಯಾಗದೇ ಮುತ್ತಜ್ಜ, ಅಜ್ಜ ಸೇರಿದಂತೆ ಇತರರ ಹೆಸರಿನಲ್ಲಿವೆ. ಇದರಿಂದ ಖಾತೆಯಾಗದೇ, ಸರಕಾರಿಸೌಲಭ್ಯ ಪಡೆಯದೇ ಅತಂತ್ರರಾಗಿದ್ದಾರೆ.

ಕೂಡಲೇ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಂದಾಯ ಅದಾಲತ್ ಆಯೋಜನೆ ಮಾಡಿ, ಸಾರ್ವಜನಿಕರಿಗೆ ಖಾತೆಮಾಡಲು ಇಲಾಖೆಯಿಂದ ಕ್ರಮವಹಿಸಬೇಕು ಎಂದು ರಾಜ್ಯ ನಿರುದ್ಯೋಗಿಗಳ ಸಂಘದ ಅಧ್ಯಕ್ಷ ಕೂಡ್ಲೂರು ಶ್ರೀಧರ್ ಮೂರ್ತಿ ಮನವಿ ಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಂ.ಜಯಶಂಕರ್, ವಿಜಯ್, ಶಂಕರ್‍ಮೂರ್ತಿ,ಸಿದ್ದರಾಜು, ಧನಂಜಯ ಹಾಜರಿದ್ದರು.

Leave a Reply

Your email address will not be published. Required fields are marked *