ಕಂದಾಯ ಅಧಿಕಾರಿಗಳ ಸಭೆ: ತ್ವರಿತ ಕಾರ್ಯ ಪ್ರಗತಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ

ಚಾಮರಾಜನಗರ: ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯನ್ನು ನಡೆಸಿದರು.

ತಹಶೀಲ್ದಾರ್ ಕಚೇರಿಗಳು, ಉಪವಿಭಾಗಾಧಿಕಾರಿಗಳ ಕಚೇರಿ ನ್ಯಾಯಾಲಯ ಪ್ರಕರಣಗಳ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಯವರು ಇ-ಆಫೀಸ್ ತಂತ್ರಾಂಶ ಅನುμÁ್ಠನ ಹಾಗೂ ಇ-ಆಫೀಸ್ ಬಳಸುತ್ತಿರುವ ಕಡತಗಳ ವಿಲೇವಾರಿ, ಜಿಲ್ಲಾ ಜನತಾ ದರ್ಶನದ ದೂರುಗಳ ನಿರ್ವಹಣೆ ಬಗ್ಗೆ ವಿವರಗಳೊಂದಿಗೆ ಮಾಹಿತಿ ಪಡೆದು ಪ್ರಗತಿ ಪರಿಶೀಲಿಸಿದರು.

ಸಾಮಾಜಿಕ ಭದ್ರತೆ ಯೋಜನೆಗಳು, ಸಕಾಲ ಯೋಜನೆಗಳ ವಿವರಗಳನ್ನು ಪರಿಶೀಲಿಸಿದರು. ಕೃಷಿ ಭೂಮಿ, ಆರ್.ಟಿ.ಸಿ ಮಿಸ್ ಮ್ಯಾಚ್, ಸರ್ಕಾರಿ ಭೂಮಿಗಳ ವಿವರ, ಒತ್ತುವರಿ ವಿವರ, ಹೊಸ ಕಂದಾಯ ಗ್ರಾಮ ಹಾಗೂ ಇತರೆ ಕಂದಾಯ ವಿಷಯಗಳ ಸಂಬಂಧ ಸಭೆಯಲ್ಲಿ ಚರ್ಚಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪ ವಿಭಾಗಾಧಿಕಾರಿ ಮಹೇಶ್ ಕಂದಾಯ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *