ಕನ್ನಡ ಅಭಿಮಾನವನ್ನು ಬೆಳೆಸುವ, ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ :ತಹಶಿಲ್ದಾರ್ ಐ ಇ ಬಸವರಾಜು

ಚಾಮರಾಜನಗರ : ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ, ಪರಂಪರೆಗೆ ಪ್ರಾಚೀನ ಇತಿಹಾಸ ವಿದೆ. ಕನ್ನಡದ ಅಭಿಮಾನವನ್ನು ಬೆಳೆಸುವ ಹಾಗೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತಾಲ್ಲೂಕು ತಹಸಿಲ್ದಾರ್ ಐ ಇ ಬಸವರಾಜು ತಿಳಿಸಿದರು.

ಅವರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದ ಆವರಣದಲ್ಲಿ ಕನ್ನಡದ ಧ್ವಜಾರೋಹಣ ನೆರವೇರಿಸಿ ದೀಪ ಬೆಳಗಿಸಿ ಅವರು ಮಾತನಾಡಿದರು.

ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಸರ್ವರಿಗೂ ಶುಭಾಶಯ ಕೋರಿ 68ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಕಾರ್ಯಕ್ರಮ ಎಲ್ಲಾ ಕಡೆ ಹಬ್ಬದಂತೆ ನಡೆಯುತ್ತಿದೆ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕನ್ನಡ ಸಾಹಿತ್ಯ ಸಂಸ್ಕೃತಿ ಕಲೆ, ಸಂಗೀತ, ನಾಟಕ ರಂಗ ಭೂಮಿ, ಗಾದೆ ಒಗಟುಗಳು ಜನಪದ ಹಾಗೂ ಕನ್ನಡ ಸಂಸ್ಕೃತಿ ಉಳಿಸಿ ಬೆಳಸುವ ದಿಕ್ಕಿನಲ್ಲಿ ಕಾರ್ಯ ಮಾಡೋಣ ಕನ್ನಡ ಪತ್ರಿಕೆ, ಪುಸ್ತಕಗಳನ್ನು ಓದುವ ಕೊಳ್ಳುವ ಗುಣ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯ ಸಂಚಾಲಾಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿ ಆಧ್ಯಾತ್ಮಿಕ ಜ್ಞಾನವನ್ನು ಕನ್ನಡದಲ್ಲಿ ಸರಳೀ ಕರಿಸಿ ಚಿತ್ರಗಳ ಮೂಲಕ ಜನಸಾಮಾನ್ಯರಿಗೂ ಅರ್ಥ ಮಾಡುವ ಹಾಗೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಜಾಗೃತಿಮೂಡಿಸುತ್ತಿದೆ ಎಂದರು.

ಕಲಾ ಸರಸ್ವತಿ ನಾಟ್ಯ ಸಂಸ್ಥೆಯ ಅಕ್ಷತಾ ಜೈನರವರ ವಿದ್ಯಾರ್ಥಿಗಳು ಕನ್ನಡ ಗೀತೆಗಳ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಸಮಾಜಸೇವಕ ಡಾ ಪರಮೇಶ್ವರ್ ನಂಜುಂಡಸ್ವಾಮಿ ಓಂ ಶಾಂತಿ ನ್ಯೂಸ್ ಸರ್ವಿಸಸ್ ನ ಬಿಕೆ ಆರಾಧ್ಯ,ಗೀತಾ,ಶ್ರೀನಿವಾಸ್ ಆಶಾ, ಶಿವಕುಮಾರ್ ಸುರೇಶ್ ಗೌಡ್ರು, ಸರಳ, ಸುಧಾ, ಸತೀಶ್, ಶಿವಕಮಲ್ ಜಯಲಕ್ಷ್ಮಿ ನಿರ್ಮಲ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *