ಕನ್ನಡ ಉಳಿಸಿ- ಬೆಳಸುವುದು ನಮ್ಮೆಲ್ಲರ ಕರ್ತವ್ಯ: ಶಿಲ್ಪಾನಾಗ್

ಚಾಮರಾಜನಗರ: ಜಿಲ್ಲೆಯ ಅಭಿವೃದ್ದಿ ಜನರ ಅಭಿವೃದ್ದಿಯಾಗಿದ್ದು, ಜಿಲ್ಲೆಯ ಅಭಿವೃದ್ದಿಯಲ್ಲಿ ಸಂಘ,ಸಂಸ್ಥೆಗಳು, ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದರು.

ನಗರದ ರೋಟರಿ ಭವನದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಕರ್ನಾಟಕ ಏಕೀಕರಣ ಮಹೋತ್ಸವ ಮತ್ತು ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ ಅಂಗವಾಗಿ ರಾಷ್ಟ್ರಕವಿ ಕುವೆಂಪು ಅವರ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ. ನಮ್ಮ ಜಿಲ್ಲೆ, ನಮ್ಮ ಹೆಮ್ಮೆಯಾಗಿದ್ದು, ಜಿಲ್ಲೆಯ ಅಭಿವೃದ್ದಿ ಯೋಜನೆ ರೂಪಿಸಲಾಗಿದೆ. ನನ್ನ ಅವಧಿಯಲ್ಲಿ ಜಿಲ್ಲೆಯನ್ನು ಮುಂದುವರಿದ ಜಿಲ್ಲೆಯಾಗಿಸಲು ಚಿಂತಿಸಲಾಗಿದೆ. ಜಿಲ್ಲೆಯಲ್ಲಿ ಒಳ್ಳೆಯ ವಾತಾವರಣವಿದ್ದು, ಜಿಲ್ಲೆಗೆ  ರಾಜ್ಯ ಮಟ್ಟದಉನ್ನತ ಅಧಿಕಾರಿಗಳನ್ನು ಆಹ್ವಾನಿಸಲಾಗುತ್ತಿದೆ. ಎಲ್ಲ ಸಮಸ್ಯೆಗಳಿಗೂ ದೂರ ಗ್ರಾಮಗಳಿಂದ ನಮ್ಮ ಬಳಿ ಬರಬಾರದು ಸ್ಥಳೀಯ ಮಟ್ಟದಲ್ಲಿ  ಜನರ ಸಮಸ್ಯೆ ಬಗೆಹರಿಯಬೇಕು. ಚಾಮರಾಜನಗರ ಅಭಿವೃದ್ದಿ ಜನರ ಅಭಿವೃದ್ದಿಯಾಗಬೇಕು ಎಂದರು.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ಏಕೀಕರಣ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ಕುವೆಂಪು ಅವರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣವಾಯಿತು. ೧೯೬೫. ನ ೧ ರಂದು ಕರ್ನಾಟಕ ಏಕೀಕರಣವಾಯಿತು. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ಒಂದು ದೊಡ್ಡ ರಾಜ್ಯವಾಗಿದೆ. ರಾಜ್ಯ ೧೯ ಗಡಿ ಜಲ್ಲೆಗಳ ಪೈಕಿ ಚಾಮರಾಜನಗರ ಜಿಲ್ಲೆಯಲ್ಲಿ ಕನ್ನಡ ಗಟ್ಟಿಯಾಗಿರಲು ವಾಟಾಳ್‌ನಾಗರಾಜ್ ಅವರ ಹೋರಾಟವೇ ಕಾರನವಾಗಿದೆ ಎಂದರು.

ಚಾಮರಾಜನಗರ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೋ. ಎಂ.ಆರ್.ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಮಹಾಸಭಾದ ಗೌರವಾಧ್ಯಕ್ಷ ಶಾ.ಮುರಳಿ ಪ್ರಶಸ್ತಿ ಪತ್ರ ವಿತರಿಸಿದರು. ಅಬ್ಕಾರಿ ಉಪ ಆಯುಕ್ತ ಆರ್.ನಾಗಶಯನ ವಿಚಾರ ಮಂಡನೆ ಮಾಡಿದರು.

ಸನ್ಮಾನ : ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ಗ್ರಾಮೀಣ ಕೈಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಎ.ರಾಜೇಂದ್ರಪ್ರಸಾದ್, ಪೌರಾಯುಕ್ತ ಎಸ್.ವಿ.ರಾಮದಾಸ್, ರೋಟರಿ ಸಂಸ್ಥೆ ಅಧ್ಯಕ್ಷ ಸಿ.ಎಸ್. ಚಂದ್ರಪ್ರಭಾಜೈನ್,  ನಗರಸಭಾ ಮಾಜಿ ಸದಸ್ಯ ಗಣೇಶ್‌ದೀಕ್ಷಿತ್,  ಬಸವನಪುರ ರಾಜಶೇಖರ್, ಸುರೇಶ್ ಗೌಡ, ಪುಟ್ಟಸ್ವಾಮಿಗೌಡ, ಕಾರ್ಯದರ್ಶಿ ಅಬ್ದುಲ್‌ಅಜೀಜ್ ದೀನಾ, ಮಹಾಸಭಾ ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜ್‌ಗೋಪಾಲ್, ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು, ಚಾ.ಹ.ರಾಮು, ನಿಜಧ್ವನಿಗೋವಿಂದರಾಜು,  ಪ್ರಕಾಶ್ ಮೂಡ್ಲುಪುರ, ನಂಜುಂಡಸ್ವಾಮಿ, ತಾಂಡವಮೂರ್ತಿ, ಲಿಂಗರಾಜು, ರಾಜಪ್ಪ, ಚಾ.ಸಿ.ಸಿದ್ದರಾಜು ಇತರರು ಹಾಜರಿದ್ದರು,

Leave a Reply

Your email address will not be published. Required fields are marked *