ಚಾಮರಾಜನಗರ: : ತಾಲೂಕಿನ ಕೋಡಿಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಗತ್ ಯುವ ಸೇನೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಭುವನೇಶ್ವರಿ ಭಾವಚಿತ್ರಕ್ಕೆ ಶಾಲಾ ಮುಖ್ಯ ಶಿಕ್ಷಕ ಸೋಮಸುಂದರ್ ಅವರು ಪುμÁ್ಪರ್ಚನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೋಮಸುಂದರ್ ಕನ್ನಡ ನಾಡು, ನುಡಿ ನೆಲ, ಜಲ ಭಾμÉಯ ಉಳಿವಿಗಾಗಿ ಕನ್ನಡಿಗರಾದ ನಾವುಗಳು ಕನ್ನಡ ಭಾμÉಯನ್ನು ಹೆಚ್ಚಾಗಿ ಬಳಸುವ ನಿಟ್ಟಿನಲ್ಲಿ ಅನ್ಯ ಭಾಷಿಕರು ಸಹ ಕನ್ನಡವನ್ನ ಪ್ರೀತಿಸುವಂತೆ ಹಾಗೂ ಗೌರವಿಸುವ ರೀತಿಯಲ್ಲಿ ಕನ್ನಡ ಭಾμÉ ಹೆಚ್ಚು ಮಾನ್ಯತೆ ಪಡೆಯಬೇಕು ಎಂದರು.
ಭಗತ್ ಯುವ ಸೇನೆ ಅಧ್ಯಕ್ಷ ಕಾಂತರಾಜು ಮಾತನಾಡಿ ನಮ್ಮ ಸಂಘದ ವತಿಯಿಂದ ಪ್ರತಿವರ್ಷವು ಸಹ ಮಹನೀಯರ ಜಯಂತಿಗಳು ,ಶಾಲಾ ಮಕ್ಕಳ ಕಲಿಕೆಗೆ ಪೆÇ್ರೀತ್ಸಾಹ ಜೊತೆಗೆ ಇನ್ನೂ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಹ ಸಮಾಜಮುಖಿ ಕಾರ್ಯಗಳಿಗೆ ಒತ್ತು ನೀಡಲಾಗುವುದು ಎಂದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ ಸಾಮಾನ್ಯ ಜ್ಞಾನ ಹಾಗೂ ಕನ್ನಡದ ಪ್ರಥಮಗಳ ಕುರಿತ ವಿಶೇಷ ರಸಪ್ರಶ್ನೆ ಆಯೋಜಿಸಿ ವಿಜೇತರಾದ ಮಕ್ಕಳಿಗೆ ನೋಟ್ ಬುಕ್,ಲೇಖನ ಸಾಮಗ್ರಿ ವಿತರಿಸಿ ಪ್ರೋತ್ಸಾಹಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಮ್ಸಿ ಅಧ್ಯಕ್ಷ ಮಹೇಶ್, ಸಹ ಶಿಕ್ಷಕರಾದ ಪ್ರಕಾಶ್, ಅತಿಥಿ ಶಿಕ್ಷಕರಾದ ಮನೋಜ್, ಪುಷ್ಪಲತಾ, ತೇಜಾವತಿ, ಶಾರದಾ,, ವಿಜಯ್,ಮನು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.