ಚಾಮರಾಜನಗರ: ತಾಲೂಕಿನ ಕೊತ್ತಲವಾಡಿ ಹಾಲು ಉತ್ಪಾದಕರ ಸಹಕಾರ ಸಂಘವು 2022-23 ಸಾಲಿನಲ್ಲಿ ಉತ್ತಮ ವಹಿವಾಟು ನಡೆಸಿ 4.52 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ. ಹಾಲು ಉತ್ಪಾದಕರಿಗೆ 2.06 ಲಕ್ಷ ರೂ.ಗಳ ಬೋನಸ್ ಅನ್ನು ಸದ್ಯದಲ್ಲಿಯೇ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಮಾದಪ್ಪ ತಿಳಿಸಿದರು.
ಗ್ರಾಮದ ಸಂಘದ ಕಚೇರಿಯ ಅವರಣದಲ್ಲಿ ನಡೆದ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಡೇರಿಯೂ 1,52 ಕೋಟಿ ರೂ.ಗಳ ಹಾಲು ಖರೀದಿ ಮಾಡಿದ್ದು, 1.71 ಕೋಟಿ ರೂಗಳ. ವ್ಯಾಪಾರ ಲಾಭವನ್ನು ಗಳಿಸಿದೆ, ಉತ್ಪಾದಕರು ಗುಣಮಟ್ಟದ ಹಾಲು ನೀಡಿದ ಪರಿಣಾಮ ಇಷ್ಟೋಂದು ದೊಡ್ಡ ಮಟ್ಟದಲ್ಲಿ ಲಾಭ ಪಡೆಲು ಸಾಧ್ಯವಾಗಿದೆ. ಬಿಎಂಸಿ ಕೇಂದ್ರವಾಗಿದ್ದು, ಇನ್ನು ಹೆಚ್ಚಿನ ಗುಣಮಟ್ಟದ ಹಾಲು ನೀಡುವ ಮೂಲಕ ಸಂಘವನ್ನು ಹೆಚ್ಚು ಪ್ರಗತಿಯನ್ನು ಹೊಂದಿ ಆದರ ಲಾಭವನ್ನು ತಾವುಗಳು ಪಡೆದುಕೊಳ್ಳಲು ಮುಂದಾಗಬೇಕು ಎಂದು ಮಾದಪ್ಪ ತಿಳಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಶಾಂತಪ್ಪ ಮಾತನಾಡಿ, ಗ್ರಾಮದಲ್ಲಿ ಡೇರಿ ನಿರ್ಮಾಣ ವಾಗಿರುವುದು ಗ್ರಾಮದ ಅಭಿವೃದ್ದಿಗೆ ಪೂರಕವಾಗಿದೆ. ಸಹಕಾರ ಸಂಘಗಳು ಆಯಾ ಗ್ರಾಮಗಳ ರೈತರ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದೇವೆ. ಗ್ರಾಮಗಳಲ್ಲಿ ದೇವಸ್ಥಾನಗಳು, ಕೆರೆ, ಕಟ್ಟೆಗಳು ನಿರ್ಮಾಣವಾಗುವಂತೆ ಡೇರಿ, ಕೃಷಿ ಪತ್ತಿನ ಸಹಕಾರ ಸಂಘ ಸೇರಿದಂತೆ ಇತರೇ ಸಹಕಾರಿ ಸಂಘಗಳು ಸ್ಥಾಪನೆ ಮಾಡಿದರೆ, ಆ ಗ್ರಾಮಗಳು ಹೆಚ್ಚಿನ ಪ್ರಗತಿ ಹೊಂದುತ್ತದೆ ಎಂದರು.
ಸಂಘ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರಮೂರ್ತಿ ವಾರ್ಷಿಕ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಚಾಮುಲ್ ಸಹಾಯಕ ವ್ಯವಸ್ಥಾಪಕ ಡಾ. ಎನ್. ಅಮರ್, ಮಾರ್ಗ ಸಮಾಲೋಚಕ ಎನ್.ಎಂ. ಹೇಮಂತ್‍ಕುಮಾರ್, ಸಂಘದ ಉಪಾಧ್ಯಕ್ಷ ಎನ್. ಪ್ರಸಾದ್, ನಿರ್ದೇಶಕರಾದ ಕೆ.ಎಸ್. ಸೋಮಪ್ಪ, ಸುರೇಶ್, ಶೇಖರಪ್ಪ, ಮಾದಪ್ಪ, ಚಿಕ್ಕಮಾದಶೆಟ್ಟಿ, ಮಂಟೇಲಿಂಗಶೆಟ್ಟಿ, ಚಿಕ್ಕಮಾದಯ್ಯ, ರತ್ನಮ್ಮ, ಚಿಕ್ಕಮಹದೇವಮ್ಮ, ಪುಟ್ಟಸಿದ್ದಮ್ಮ, ನೌಕರರಾದ ಕೆ.ಎಂ. ಮಣಿಕಂಠ, ಎಲ್. ಮಾದಪ್ಪ, ಮಹದೇವಸ್ವಾಮಿ, ವೃಷಬೇಂದ್ರಪ್ಪ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.