ಕೋಳಿಪಾಳ್ಯ ಸರಕಾರಿ ಪ್ರೌಢಶಾಲೆಯಲ್ಲಿ ಶೌಚಾಲಯ ಕಟ್ಟಡ ಉದ್ಘಾಟನೆ

ಚಾಮರಾಜನಗರ: ತಾಲೂಕಿನ ಕೋಳಿಪಾಳ್ಯ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶ್ರೀ ಶ್ರೀನಿವಾಸನ್ ಸರ್ವೀಸ್ ಟ್ರಸ್ಟ್ (ಟಿ.ವಿ.ಎಸ್) ಮತ್ತು ಪುಣಜನೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಿರ್ಮಿಸಿರುವ 3 ನೂತನ ಪ್ರತ್ಯೇಕ ಶೌಚಾಲಯ ಕಟ್ಟಡವನ್ನು ಗ್ರಾ.ಪಂ. ಅಧ್ಯಕ್ಷೆ ಸಿ.ವಿ.ಬಾಯಿ ಗಣೇಶ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಶ್ರೀ ಶ್ರೀನಿವಾಸನ್ ಸರ್ವೀಸ್ ಟ್ರಸ್ಟ್ ವತಿಯಿಂದ ಶೇ 90 ಗ್ರಾಪಂ ವತಿಯಿಂದ ಶೇ 10 ಅನುದಾನ 7.50 ಲಕ್ಷ ರೂ.ವೆಚ್ಚದಲ್ಲಿ ಶಾಲೆಯಲ್ಲಿ ಬಾಲಕ, ಬಾಲಕಿಯರಿಗೆ ಹಾಗೂ ಅಂಗವಿಕಲರಿಗೆ 3 ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿದ್ದು, ಮಕ್ಕಳು ಇದರ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು,

ಸರಕಾರಿ ಶಾಲೆಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಸರಕಾರ ಒದಗಿಸುತ್ತಿದ್ದು, ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಶ್ರೀ ಶ್ರೀನಿವಾಸನ್ ಸರ್ವೀಸ್ ಟ್ರಸ್ಟ್ ವ್ಯವಸ್ಥಾಪಕ ಸುಬ್ರಹ್ಮಣ್ಯ, ಸಹಾಯಕ ವ್ಯವಸ್ಥಾಪಕ ಮಹದೇವಸ್ವಾಮಿ, ಗ್ರಾಪಂ ಸದಸ್ಯರಾದ ಮಹೇಶ್‍ನಾಯಕ, ನಾಗನಾಯಕ, ಲಲಿತಾಬಾಯಿ, ಗ್ರಾಪಂ ಮಾಜಿ ಅಧ್ಯಕ್ಷ ಶಾಮೀರ್ ಪಾಷಾ, ಪಿಡಿಒ ಸಿದ್ದರಾಜು, ಲೆಕ್ಕಾಧಿಕಾರಿ ಮಹದೇವಸ್ವಾಮಿ, ಶಾಲಾಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *