ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಗುಂಡ್ಲುಪೇಟೆ ಪಟ್ಟಣದಲ್ಲಿ ೨೭೭ ಫಲಾನುಭವಿಗಳು, ಕಸಬಾ ಹೋಬಳಿ ೪೨೪, ಬೇಗೂರು ೨೬೫, ಹಂಗಳ ೩೪೦, ತೆರಕಣಾಂಬಿ ೫೦೮ ಫಲಾನುಭವಿಗಳು ಆಧಾರ್ ಲಿಂಕ್ ಮಾಡಿಸಲು ಬಾಕಿ ಇದ್ದು ಬ್ಯಾಂಕ್, ಅಂಚೆ ಕಚೇರಿಯ ಉಳಿತಾಯ ಖಾತೆಗೆ ಆಧಾರ್ ಸಂಖ್ಯೆಯನ್ನು ಆಗಸ್ಟ್ ೨೦ ರೊಳಗಾಗಿ ಲಿಂಕ್ ಮಾಡಿಸುವಂತೆ ತಹಶೀಲ್ದಾರ್ ಅವರು ತಿಳಿಸಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ಮೈತ್ರಿ ಹಾಗೂ ಮನಸ್ವಿನಿ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ನೇರಹಣ ವರ್ಗಾವಣೆ ಮೂಲಕ ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ ಮೂಲಕ ಆಧಾರ್ ಆಧಾರಿತ ಪಿಂಚಣಿ ಪಾವತಿ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಆಧಾರ್ ಲಿಂಕ್ ಮಾಡಿಸಲು ಸೂಚಿಸಿದ್ದರೂ ಸಹ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಟ್ಟು ೧೮೧೪ ಫಲಾನುಭವಿಗಳು ಎನ್.ಪಿ.ಸಿ.ಐ ಪೋರ್ಟ್ಲ್ನಲ್ಲಿ ಆಧಾರ್ ಸೀಡಿಂಗ್ ಮಾಡಲು ಬಾಕಿ ಉಳಿದಿರುತ್ತವೆ.
ಫಲಾನುಭವಿಗಳು ಅಂಚೆ ಕಚೇರಿಯ ಉಳಿತಾಯ ಖಾತೆಗೆ ಆಧಾರ್ ಸಂಖ್ಯೆಯನ್ನು ಆಗಸ್ಟ್ ೨೦ ರೊಳಗಾಗಿ ಲಿಂಕ್ ಮಾಡಿಸುವಂತೆ ಗುಂಡ್ಲುಪೇಟೆ ತಹಶೀಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.