ಗೃಹಲಕ್ಷ್ಮಿ ಯೋಜನೆ : ಸಹಾಯಧನ ಪಡೆಯಲು ಕೆ.ವೈ.ಸಿ ಮಾಡಿಸಲು ಸಲಹೆ

ಚಾಮರಾಜನಗರ: ಚಾಮರಾಜನಗರ ತಾಲೂಕು ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2 ಸಾವಿರ ರೂ ಪಾವತಿಯಾಗದ ಫಲಾನುಭವಿಗಳು ಆಧಾರ್ ಸಂಖ್ಯೆ ಸೀಡಿಂಗ್ ಮತ್ತು ಪಡಿತರ ಚೀಟಿಗೆ ಇ-ಕೆವೈಸಿ ಮಾಡಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ ನೋಂದಣಿಯಾದ ಫಲಾನುಭವಿಗಳಿಗೆ ಈಗಾಗಲೇ 2 ಸಾವಿರ ರೂ.ಗಳ ಮಾಸಿಕ ಸಹಾಯಧನವನ್ನು ಪಾವತಿಸಲಾಗಿದೆ. ಬ್ಯಾಂಕ್ ಖಾತೆಗೆ ಹಣ ಜಮೆ ಆಗದಿರುವ ಫಲಾನುಭವಿಗಳ ಆಧಾರ್ ಸಂಖ್ಯೆ ಸೀಡಿಂಗ್ ಮತ್ತು ಪಡಿತರ ಚೀಟಿಗೆ ಇ-ಕೆ.ವೈ.ಸಿ ಮಾಡಿಸದೇ ಇರುವ ಪಟ್ಟಿಯನ್ನು ಹತ್ತಿರದ ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಾಗಲೇ ಕಳುಹಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿ ನೊಂದಾಯಿಸಿಕೊಂಡು ಸಹಾಯಧನ ಪಡೆಯದೇ ಇರುವ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಸಲ್ಲಿಸಿದ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಸೀಡಿಂಗ್ ಮತ್ತು ಪಡಿತರ ಚೀಟಿಗೆ ಇ-ಕೆ.ವೈ.ಸಿ ಮಾಡಿಸಬೇಕು. ಹೊಸದಾಗಿ ಪಡಿತರ ಚೀಟಿ ಮಾಡಿಸಿ ಗೃಹಲಕ್ಷ್ಮಿಗೆ ನೊಂದಣಿಯಾಗದಿದ್ದರೆ ಮಾಹಿತಿಯನ್ನು ಕೂಡ ಸಮೀಪದ ಅಂಗನವಾಡಿ ಕಾರ್ಯಕರ್ತೆಯರಿಗೆ ಒದಗಿಸಿದ್ದಲ್ಲಿ ಗೃಹಲಕ್ಷ್ಮೀ ಯೋಜನೆಯ ಸಹಾಯಧನ ಪಾವತಿಸಲು ಕ್ರಮವಹಿಸಲಾಗುವುದು ಎಂದು ಚಾಮರಾಜನಗರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *