ಚಾಮರಾಜನಗರ: ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಯಳಂದೂರು ಪಟ್ಟಣಕ್ಕೆ ಇಂದು ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲಿಸಿದರು. ಪಟ್ಟಣದ ಇಂದಿರಾ ಕ್ಯಾಂಟೀನ್, ಪದವಿ ಕಾಲೇಜಿಗೂ ಭೇಟಿ ನೀಡಿ ವೀಕ್ಷಿಸಿದರು.

ಯಳಂದೂರು ಪಟ್ಟಣದಲ್ಲಿ ನಗರಾಭಿವೃದ್ದಿ ಇಲಾಖೆಯಿಂದ ಕೈಗೊಳ್ಳಲಾಗಿರುವ ನಗರೋತ್ಥಾನ 4ನೇ ಹಂತದ ಯೋಜನೆಗಳ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಪಟ್ಟಣದ ಗೌತಮ ಬಡಾವಣೆ ಹತ್ತಿರವಿರುವ ಪೌರಕಾರ್ಮಿಕರ ಬೀದಿಯಿಂದ ಹಾಸ್ಟೆಲ್ವರೆಗೆ ಹೊಸದಾಗಿ ನಿರ್ಮಿಸಲಾಗಿರುವ ಆರ್.ಸಿಸಿ ಚರಂಡಿ ಕಾಮಗಾರಿ, ಎಲೆಕೆರೆ ಬೀದಿ ಶೌಚಾಲಯದಿಂದ ಕಾರಾಪುರ ಮಠದ ಹತ್ತಿರವಿರುವ ಸ್ಮಶಾನದವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ, ಬಿಸಿಎಂ ಹಾಸ್ಟೆಲ್ ನಿಂದ ಕುಂಬಾರಗುಂಡಿ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ಕಡೆಗೆ ನಿರ್ಮಾಣವಾಗಿರುವ ಆರ್.ಸಿಸಿ ಚರಂಡಿ ಕಾಮಗಾರಿ, ಇಂದಿರಾ ಕ್ಯಾಂಟಿನ್ ನಿಂದ ಪಟ್ಟಣ ಪಂಚಾಯಿತಿ ಕಚೇರಿವರೆಗೆ ಚರಂಡಿ ಎತ್ತರಿಸಿ ಕವರಿಂಗ್ ಸ್ಲಾಬ್ ಅಳವಡಿಸಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ಯಳಂದೂರು ಪಟ್ಟಣದ ಇಂದಿರಾ ಕ್ಯಾಂಟೀನ್ಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಆಹಾರÀದ ಗುಣಮಟ್ಟ, ಟೋಕನ್ ವಿತರಣೆ, ನೈರ್ಮಲ್ಯ, ಪುಸ್ತಕ ನಿರ್ವಹಣೆ ಪರಿಶೀಲಿಸಿದರು.
ಇದೇ ವೇಳೆ ಸ್ಥಳೀಯ ಸಂಸ್ಥೆಗಳ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸಭೆ ನಡೆಸಿದರು.
ಪಟ್ಟಣದ ಪದವಿ ಕಾಲೇಜಿಗೆ ಭೇಟಿ ನೀಡಿ ಕಟ್ಟಡ ತರಗತಿಯ ಕೊಠಡಿಗಳು, ಗ್ರಂಥಾಲಯ ವೀಕ್ಷಿಸಿದರು. ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿಯವರು ಸಂವಾದ ನಡೆಸಿದರು.
ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ತಹಶೀಲ್ದಾರ್ ಜಯಪ್ರಕಾಶ್, ಇತರೆ ಅಧಿಕಾರಿಗಳು ಇದ್ದರು.