ಜಿಲ್ಲಾ ಕಾಂಗ್ರೆಸ್ ಸಮಿತಿ ಕಛೇರಿಯಲ್ಲಿ ಇಂದಿರಾಗಾಂಧಿ ಜನ್ಮ ದಿನಾಚರಣೆ

ಚಾಮರಾಜನಗರದ: ಭಾನುವಾರ ನಗರದ ಜಿಲ್ಲಾ ಕಾಂಗ್ರಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 106ನೆ ಜನ್ಮ ದಿನಾಚರಣೆ ಆಚರಿಸಲಾಯಿತು.

ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಪುಪ್ರ್ಪಾಚನೆ ಸಲ್ಲಿಸಿ ನಂತರ ಮಾತನಾಡಿ, ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ ನೀಡಿದ ಕಾರ್ಯಕ್ರಮಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದವು ದೀನಾ ದಲಿತರು ಹಿಂದುಳಿದ ವರ್ಗಗಳ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೂಂಡು ಅವರು 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೋಳಿಸಿದರು. ನೇರ, ದಿಟ್ಟ, ಉಕ್ಕಿನ ಮಹಿಳೆ ಎಂದೇ ಖ್ಯಾತಿ ಪಡೆದಿದ್ದ ಇಂದಿರಾಗಾಂಧಿ ಅವರ ಜನಪರ ಕಾರ್ಯಕ್ರಮಗಳು ಇಂದಿಗೂ ಜನಮಾಸದಲ್ಲಿ ಉಳಿದಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ,ಮರಿಸ್ವಾಮಿ ಮಾತನಾಡಿ, ದೇಶದ ಬಡತನ ನಿರ್ಮೂಲನೆಗೆ ಹಾಗೂ ಆರ್ಥಿಕ ಅಭಿವೃದ್ದಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಶ್ರಮ ಬಹಳಷ್ಟಿದೆ ಇಂದಿರಾ ಗಾಂಧಿ ಅವರು ದೇಶದ ಕಂಡ ಸಮರ್ಥ ಪ್ರಧಾನಿಗಳಲ್ಲಿ ಒಬ್ಬರಾಗಿದ್ದರು, ದೇಶವನ್ನು ಮುನ್ನಡೇಸುವ ಜೂತೆಗೆ ನೆರೆ ದೇಶಗಳೂಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ, ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿದ್ದರು, ಇಂದಿರಾ ಗಾಂಧಿ ಅವರ ಆದರ್ಶವನ್ನು ಮೈಗೂಡಿಸಿಕೂಂಡು ಅವರ ಹಾದಿಯಲ್ಲಿ ಯುವಜನತೆ ಮುನ್ನಡೆಯಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ, ಕಾರ್ಯದರ್ಶಿ ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್‍ಮುನ್ನಾ, ಮಾಜಿ ಜಿ,ಪಂ ಸದಸ್ಯ ಸೋಮನಾಯಕ್, ನಗರಸಭಾ ಸದಸ್ಯ ಚಿನ್ನಮ್ಮ, ಗ್ರಾ,ಪಂ ಅಧ್ಯಕ್ಷ ರೋಪೇಶ್, ಪರಿಶಿಷ್ಟ ಜಾತಿ ಎಸ್ಸಿ ವಿಭಾಗದ ಅಧ್ಯಕ್ಷ ಸೋಮಣ್ಣ, ಗ್ರಾಮಾಂತರಮಹಿಳಾವಿಭಾದಅಧ್ಯಕ್ಷೆಶಕುಂತಲಾ,ನಾಗರತ್ನ,ಪದ್ಮಾ ಪುರುಷೋತ್ತಮ್,ಭಾಗ್ಯಮ್ಮ, ನಸ್ರುಲ್ಲಾಖಾನ್, ಅಬ್ಬಾಸ್, ನಯಾಜ್‍ಪಾಷ್, ಮರಿಯಾಲದಹುಂಡಿಕುಮಾರ್, ಸ್ವಾಮಿ, ಸಿ,ಆರ್,ಮಹೇಶ್, ಸೈಯದ್‍ಮೂಸಯದ್, ಮಹಮದ್ ನವೀದ್, ಇಂಬ್ರಾನ್ ಅಹಮದ್, ಸೇವಾದಳದ ಜಿಲ್ಲಾಧ್ಯಕ್ಷ ಜಯರಾಜು, ಶೇಷಣ್ಣ, ರೇವಣ್ಣ, ಪಟೇಲ್‍ಮಹದೇವಸ್ವಾಮಿ, ಎನ್,ಎಸ್,ಯು,ಐ,ಸ್ವಾಮಿ, ಮೋಹನ್ ಅಕ್ಷಯ್, ಸೇರಿದಂತೆ ಪಕ್ಷದ ಕರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *