ಡಾ. ಪರಮೇಶ್ವರಪ್ಪ ಹುಟ್ಟುಹಬ್ಬ : ಮಾನಸಧಾರೆ ಹಾರೈಕೆ ಕೇಂದ್ರಕ್ಕೆ ತಟ್ಟೆ, ಲೋಟ ವಿತರಣೆ

ಚಾಮರಾಜನಗರ: ಸಮಾಜ ಸೇವಕ ಡಾ.ಪರಮೇಶ್ವರಪ್ಪ ಅವರ 65 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಸ್ನೇಹ ಬಳಗದಿಂದ ನಗರದ ಹೊರ ವಲಯದಲ್ಲಿರುವ ಮಾನಸಿಕ ಅಸ್ವಸ್ಥರ ಹಗಲು ಹಾರೈಕೆ ಕೇಂದ್ರ ಮಾನಸಧಾರೆಯಲ್ಲಿರುವ ರೋಗಿಗಳಿಗೆ ತಟ್ಟೆ ಹಾಗೂ ಲೋಟಗಳನ್ನು ವಿತರಣೆ ಮಾಡಿದರು.

ಮಾನಸಧಾರೆ ಹಾರೈಕೆ ಕೇಂದ್ರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಡಾ. ಪರಮೇಶ್ವರಪ್ಪ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡುವ ಜೊತೆಗೆ ಮಾನಸಿಕ ಅಸ್ವಸ್ಥರಿಗೆ ಊಟದ ವ್ಯವಸ್ಥೆಯನ್ನು ಮಾಡಿ, ಹಗಲು ವೇಳೆಯಲ್ಲಿ ಅವರನ್ನು ಹಾರೈಕೆಮಾಡಲು ಸೇವಾ ಕೇಂದ್ರ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯಗಿದೆ. ಇಂಥವರ ಆರೋಗ್ಯ ಬೇಗ ಸುಧಾರಣೆಗೊಂಡು ಅವರಿಗೆÀ ಉತ್ತಮ ಚಿಕಿತ್ಸೆ, ಹಾರೈಕೆ ದೊರೆತು ಎಲ್ಲರಂತೆ ಸಮಾಜದಲ್ಲಿ ಬದುಕುವಂತಹ ವಾತಾವರಣವನ್ನು ಭಗವಂತ ಕುರುಣಿಸಲಿ ಎಂದು ಡಾ. ಪರಮೇಶ್ವರಪ್ಪ ಅಶಿಸಿದರು.

ಹುಟ್ಟುಹಬ್ಬವನ್ನು ಆಡಂಬರದಿಂದ ಆಚರಣೆ ಮಾಡಿಕೊಳ್ಳುವ ಬದಲು ಇಂಥ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡರೆ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ದೊರೆಯುತ್ತದೆ. ಕಳೆದ 15 ವರ್ಷಗಳಿಂದ ನನ್ನ ಹುಟ್ಟುಹಬ್ಬವನ್ನು ಸಮಾಜಸೇವೆಯನ್ನು ಮಾಡುವ ಮೂಲಕ ಆಚರಿಸಿಕೊಂಡು ಬರುತ್ತಿದ್ದೇನೆ. ಅಲ್ಲದೇ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಇರುವಷ್ಟು ದಿನಗಳು ಸಮಾಜಕ್ಕೆ ಹಾಗೂ ನೊಂದ ಜನರಿಗೆ ಸೇವೆ ಮಾಡುವ ಉದ್ದೇಶ ನನ್ನದಾಗಿದೆ. ಸ್ನೇಹ ಬಳಗದವರು ಸಹ ಅದೇ ಹಾದಿಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದು ಡಾ. ಪರಮೇಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಮುಖ್ಯ ಸಂಚಾಲಕರಾದ ಬಿ.ಕೆ. ದಾನೇಶ್ವರಿಜೀ ಅವರು ಡಾ. ಪರಮೇಶ್ವರಪ್ಪ ಅವರನ್ನು 65ನೇ ಹುಟ್ಟುಹಬ್ಬದ ಅಂಗವಾಗಿ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ 65 ಬಿಲ್ವಪತ್ರ ಸಸಿಗಳನ್ನು ಕೊಡುಗೆಯಾಗಿ ನೀಡಲಿದ್ದು, ಇದನ್ನು ಪೋಷಣೆ ಮಾಡುವ ಜವಬ್ದಾರಿಯನ್ನು ಓಂಶಾಂತಿ ಬಳಗದವರು ವಹಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೌರಿಶಂಕರ್, ಆರ್.ಎಸ್. ಲಿಂಗರಾಜು, ಸಿ.ಎಸ್. ಮಹೇಂದ್ರ, ಎಸ್.ಪಿ. ಬಾಲಸುಬ್ರಮಣ್ಯ ಅಭಿಮಾನಿ ಬಳಗದ ಗೌರವ ಅಧ್ಯಕ್ಷ ಎಸ್. ಸುರೇಶ್ ಗೌಡ, ಹಿರಿಯ ಲೆಕ್ಕಪರಿಶೋಧಕ ಶೈಲೇಂದ್ರ, ಸತೀಶ್, ಕಾರ್ಯದರ್ಶಿ ಎಂ. ಮಹದೇವ್ ಇತರರು ಇದ್ದರು.

Leave a Reply

Your email address will not be published. Required fields are marked *