ಚಾಮರಾಜನಗರ: ತಾಲೂಕಿನಲ್ಲಿ ತೆಂಗು ಬೆಳೆಯುತ್ತಿರುವ ರೈತರಿಂದ ಸ್ಪರ್ಧಾತ್ಮಕ ಬೆಲೆಗೆ ತೆಂಗಿನ ಕಾಯಿ ಖರೀದಿಸುವ ಜೊತೆಗೆ ಮುಂದಿನ ದಿನಗಳಲ್ಲಿ ಸಂಸ್ಕರಣ ಘಟಕದಲ್ಲಿ 12ಕ್ಕು ಹೆಚ್ಚು ಯೋಜನೆಗಳನ್ನು ಜಾರಿ ಮಾಡಿ ಸಂಘವನ್ನು ಲಾಭದತ್ತ ಕೊಂಡೊಯ್ಯುವ ಜವಾಬ್ದಾರಿ ನಮ್ಮದಾಗಿದೆ ಎಂದು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎ.ಎಂ. ಮಹೇಶ್ಪ್ರಭು ತಿಳಿಸಿದರು.

ನಗರದ ಹೊರ ವಲದಯಲ್ಲಿರುವ ಕಾಳನಹುಂಡಿ ರಸ್ತೆಯ ಮುಣಚನಹಳ್ಳಿ ಸಂಘದ ಸಂಸ್ಕರಣದ ಘಟಕದ ಅವರಣದಲ್ಲಿ ಇಂದು ನಡೆದ ಸಂಘದ 22ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೆಂಗು ಬೆಳೆಗಾರರ ಸಹಕಾರ ಸಂಘವು ಉಳಿಯಬೇಕು. ರೈತರು ಸಹ ಅಭಿವೃದ್ದಿಯತ್ತ ಸಾಗುವ ನಿಟ್ಟಿನಲ್ಲಿ ತೆಂಗಿನ ಕಾಯಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಸಂಘದಿಂದ ನೀಡಲಾಗುತ್ತಿದೆ. ಕಳೆದ 21 ವರ್ಷಗಳಿಂದ ಸಂಘವು ಬಹಳ ಪಾರದರ್ಶಕತೆಯಿಂದ ನಡೆದುಕೊಂಡು ಬರುವ ಜೊತೆಗೆ ಜಿಲ್ಲೆಯಲ್ಲಿಯೇ ಉನ್ನತವಾದ ತೆಂಗು ಸಂಸ್ಕರಣ ಘಟಕವನ್ನು ಆರಂಭಿಸಿದೆ. ಬಹಳ ವ್ಯವಸ್ಥಿತವಾಗಿ ಗುಣಮಟ್ಟದ ತೆಂಗಿನ ಪುಡಿಯನ್ನು ತಯಾರು ಮಾಡಿ, ಮಾರಾಟ ಮಾಡಲಾಗುತ್ತಿದೆ. ಘಟಕ ಆರಂಭವಾಗಿ ತೆಂಗು ಖರೀದಿಸಲು ಆರಂಭಿಸದ ಬಳಿಕ ಎಲ್ಲಾ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದೆ. ಈ ನಿಟ್ಟಿನಲ್ಲಿ ರೈತರು ಸಹಕರಿಸಬೇಕು. ಘಟಕಕ್ಕೆ ಹೆಚ್ಚಿನ ರೀತಿಯಲ್ಲಿ ತೆಂಗಿನಕಾಯಿ ಸರಬರಾಜು ಮಾಡಬೇಕು ಎಂದು ಮನವಿ ಮಾಡಿದರು.
ಪ್ರಸಕ್ತ ಸಾಲಿನಲ್ಲಿ 8,13,230 ಕೆಜಿ ತೆಂಗಿನ ಗಾಯಿ ಖರೀದಿಸಿ 1,57,650 ಕೆಜಿ ತೆಂಗಿನಪುಡಿ 33,987 ಕೆ.ಜಿ. ತೆಂಗಿನ ಜಿಪ್ಸ್, 1,91,780 ಕೆ.ಜಿ ತೆಂಗಿನ ಕರಟ ಮತ್ತು ಕೊಬ್ಬರಿ 7702 ಉತ್ಪಾದನೆಯಾಗುತ್ತಿದೆ. ನÀಮ್ಮಲ್ಲಿ ಉತ್ಪಾದನೆಯಾಗುತ್ತಿರುವ ತೆಂಗಿನಪುಡಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹಾಗೂ ಗುಣಮಟ್ಟವು ಸಹ ಹೆಚ್ಚಿನದಾಗಿದೆ. ಮಾರುಕಟ್ಟೆಯನ್ನು ವಿಸ್ತರಣೆ ಮಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ರೈತರು ಸಂಘದ ಕಾರ್ಯಯೋಜನೆಗಳಿಗೆ ಬೆಂಬಲ ನೀಡಬೇಕು. ಈಗಾಗಲೇ ರಾಜ್ಯ ಸರ್ಕಾರ ನೀಡಿರುವ 3 ಕೋಟಿ ಸಾಲ ವಾಪಸ್ ನೀಡುವಂತೆ ನೋಟಿಸ್ ನೀಡಿದೆ. ಇದನ್ನು ಅನುದಾನವನ್ನಾಗಿ ಪರಿವರ್ತನೆ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದು ಮಹೇಶ್ ಪ್ರಭು ತಿಳಿಸಿದರು.
ಮುಂದಿನ ದಿನಗಳಲ್ಲಿ ರೈತ ಸದಸ್ಯರ ಬೇಡಿಕೆಗಳಂತೆ ತ್ಯಾಜ್ಯ ಸಂಸ್ಕರಣ ಘಟಕ, ಅಗ್ನಿಶಾಮಕ ವ್ಯವಸ್ಥೆ, ಎಪಾಕ್ಷಿ ಪ್ಲೋರೀಂಗ್, ನೀರಾ ಸಂಸ್ಕರಣ ಘಟಕ ಸ್ಥಪನೆ, ಲೋಪ್ಯಾಟೆಡ್ ಮತ್ತು ಹೈಪ್ರೋಟಿನ್ ತೆಂಗಿನಪುಡಿ, ವರ್ಜಿನ್ ಕೊಕೊನಟ್ ಆಯಿಲ್, ರೂಪ್ ಟಾಪ್ ಸೋಲಾರ್, ವಿನೆಗರ್, ಅಂತರಿಕ ರಸ್ತೆ, ಊಟದ ಹಾಲ್, ಮೆಕ್ಯಾನಿಕಲ್ ಚಿಪ್ಸ್ ಡ್ರೈಯರ್, ಕರಟದಿಂದ ಚಾರ್ಕೊಲ್ ಮುಂತಾದ ಉತ್ಪನ್ನಗಳನ್ನು ತಯಾರಿಸಲು ಯೋಜನೆಗನ್ನು ರೂಪಿಸಲಾಗುತ್ತಿದೆ ಇವೆಲ್ಲರಕ್ಕು ಸದಸ್ಯರು ಒಪ್ಪಿಗೆ ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು ತಳವಾರ ವಾರ್ಷಿಕ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪುಟ್ಟಅರಸ್, ನಿರ್ದೇಶಕರಾದ ಜಗದೀಶ್ ಆರಾಧ್ಯ, ಎ.ಜಿ. ಲಿಂಗಣ್ಣ, ಸಿ. ಸಿದ್ದರಾಜು, ಬಿ. ಸೋಮಶೇಖರ್, ಎಸ್. ಬಸವರಾಜು, ಎಚ್.ಎನ್. ವೆಂಕಟೇಶ್,ಎಚ್.ಎಂ. ಬಸವಣ್ಣ, ಜಯಶ್ರೀ, ಪಾರ್ವತಮ್ಮ, ನಾಮ ನಿರ್ದೇಶನ ಸದಸ್ಯ ಚಿನ್ನಸ್ವಾಮಿ ಗೌಂಡರ್, ಲೆಕ್ಕಾಧಿಕಾರಿ ಶಾಂತಮಲ್ಲಪ್ಪ, ಘಟಕದ ಇಂಜಿನಿಯರ್ ಚಂದ್ರಶೇಖರ್ ಹಾಗೂ ಸರ್ವ ಸದಸ್ಯರು ಇದ್ದರು.