ಚಾಮರಾಜನಗರ: ನಗರಸಭೆ ವ್ಯಾಪ್ತಿಗೆ ಬರುವ ರಾಮಸಮುದ್ರದ ಅಂಬೇಡ್ಕರ್ ಬೀದಿ, ನಾಯಕರ ಬೀದಿ, ಲಿಂಗಾಯಿತರ ಬೀದಿ, ಉಪ್ಪಾರ ಬೀದಿಗಳಿಗೆ ನಗರಸಭೆ ಅಯುಕ್ತ ರಾಮದಾಸ್ ಅವರು ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳನ್ನು ಪರಿಶೀಲಿಸಿದರು.
ಪ್ರತಿ ಮನೆ ಮನೆಗೆ ಭೇಟಿ ನೀಡುವ ಮೂಲಕ ಸಾರ್ವಜನಿಕರ ಕುಂದು ಕೊರತೆ ಪರಿಶೀಲನೆ ಮಾಡಿದರು. ಹಲವು ಬೀದಿಗಳು ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿದೆ ಹೀಗೆ ಹಲವಾರು ದೂರುಗಳು ಕೇಳಿಬಂದವು.
ನಗರಸಭೆ ಆಯುಕ್ತ ರಾಮದಾಸ್ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ದಿನನಿತ್ಯ ಒಂದೊಂದು ವಾರ್ಡ್ಗಳಿಗೆ ಭೇಟಿ ನೀಡಿ ಅಲ್ಲಿನ ಸದಸ್ಯರೊಂದಿಗೆ ಅಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಸ್ಥಳದಲ್ಲಿ ಅಧಿಕಾರಿಗಳಿಗೆ ಕಸ ನಿರ್ವಹಣೆ ಸಂಬಂಧ ವಿಲೇವಾರಿಗೆ ಸೂಚನೆ ನೀಡಿದರು. ಕೂಡಲೇ ಟ್ಯಾಕ್ಟರ್ ಮೂಲಕ ಬಿದ್ದಿದ್ದ ಕಸವನ್ನು ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸುರೇಶ್, ಆರೋಗ್ಯಧಿಕಾರಿ ನಾರಾಯಣಸ್ವಾಮಿ, ಜಯಂತ್, ಸ್ವಾಮಿ, ಊರಿನ ಮುಖಂಡರಾದ ಜಿ.ಬಂಗಾರು, ಲಿಂಗರಾಜನಾಯ್ಕ, ನಾಗರಾಜು, ರಮೇಶ್ ಇತರರು ಹಾಜರಿದ್ದರು.