ಚಾಮರಾಜನಗರ: ತಾಲೂಕಿನ ನಾಗವಳ್ಳಿ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ 25ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಮಹೋತ್ಸವವು ಗುರುಗಳ ಸಮ್ಮುಖದಲ್ಲಿ ಭಕ್ತಿಪೂರಕವಾಗಿ ಜರುಗಿತು.

ಗ್ರಾಮದ ಬಡಾವಣೆಗಳಲ್ಲಿ ಸತ್ತಿಗೆ-ಸುರಪಾನಿ ವಾದ್ಯಗೋಷ್ಠಿಗಳೊಂದಿಗೆ ಕಂಡಾಯ ಮೆರವಣಿಗೆ ವಿಜೃಂಭಣೆÉಯಿಂದ ಸಾಗಿತು. 101 ಹೆಣ್ಣು ಮಕ್ಕಳು ಹಾಲರವೆ ಉತ್ಸವದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.ಗ್ರಾಮದ ಪ್ರಮುಖ ಬೀದಿಗಳು ತಳಿರು-ತೋರಣಗಳಿಂದ ಅಲಂಕೃತಗೊಂಡು ಕಂಡಾಯ ಮೆರವಣಿಗೆ ಉದ್ದಕ್ಕೂ ರಂಗೋಲಿ ಹಾಕಿ ಮೆರವಣಿಗೆಗೆ ಪೂರ್ಣಕುಂಭ ಸ್ವಾಗತವನ್ನು ಭಕ್ತಾಧಿಗಳು ಕೋರಿದರು. ಶ್ರೀ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ವತಿಯಿಂದ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಮಾಡಿದರು.
ಅಯ್ಯಪ್ಪಸ್ವಾಮಿ ಭಕ್ತರು, ಉಪ್ಪಾರ ಸಮುದಾಯದ ಯಜಮಾನರುಗಳು, ಕುಲಸ್ಥರು ಪಾಲ್ಗೊಂಡಿದ್ದರು.