ಚಾಮರಾಜನಗರ: ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಾದಕ ವ್ಯಸನ ತಡೆ, ಆರ್ಥಿಕ ವ್ಯವಹಾರ ಪಾರದರ್ಶಕತೆ, ಮಹಿಳಾ ಸಬಲೀಕರಣ, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳು ಹಾಗೂ ಆರೋಗ್ಯದ ನಿರ್ವಹಣೆ ಬಗ್ಗೆ ಬೀದಿ ನಾಟಕ ಮತ್ತು ಜಾಗೃತಿ ಹಾಡುಗಳನ್ನು ಹಾಡುವ ಮೂಲಕ ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ತಾಲೂಕಿನ ಬಸವಪುರ ಗ್ರಾಮದಲ್ಲಿ ನವೆಂಬರ್ 19 ರಂದು ಹಾಗೂ ಕೂಡ್ಲೂರು ಗ್ರಾಮದಲ್ಲಿ ನವೆಂಬರ್ 21 ರಂದು ಕಾರ್ಯಕ್ರಮ ನಡೆಯಲಿದ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನಾಭಿವೃದ್ದಿ ಟ್ರಸ್ಟ್ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಏರ್ಪಾಡಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.