ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಅಣುಕು ಶವಯಾತ್ರೆ

ಚಾಮರಾಜನಗರ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ರಾಮ ಪಂಚಾಯಿತಿಗಳಲ್ಲಿ ನೂತನ ಮದ್ಯಂಗಡಿ ಆದೇಶ ನೀಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ನಗರದಲ್ಲಿ ರಾಜ್ಯ ಸರ್ಕಾರದ ಅಣಕು ಶವಯಾತ್ರೆ ನಡೆಸಿದರು.

ನಗರದ ಸಂತೇಮರಹಳ್ಳಿ ವೃತ್ತದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಕಮಲಮ್ಮ, ಜಿಲ್ಲಾಧ್ಯಕ್ಷ ನಾರಾಯಣ್‌ಪ್ರಸಾದ್, ಮಾಜಿ ಶಾಸಕರಾದ ಎಸ್.ಬಾಲರಾಜು, ಎನ್.ಮಹೇಶ್ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಸರ್ಕಾರ ಅಣುಕು ಶವಯಾತ್ರೆ ಹೊರಟು ಸಂತೇಮರಹಳ್ಳಿ ರಸ್ತೆಯಲ್ಲಿರುವ ರೇಷ್ಮೆ ಕಾರ್ಖಾನೆ ಸಮೀಪದಲ್ಲಿರುವ ಮೈದಾನದಲ್ಲಿ ಸರ್ಕಾರ ಅಣುಕು ಶವಯಾತ್ರೆಯನ್ನು ಸಾರಾಯಿ ಪೌಚ್‌ಗಳಿಂದ ಸುಟ್ಟು ಅಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀಪ್ರತಾಪ್ ಮಾತನಾಡಿ, ಜನರ ಹಿತ, ಸಮಾಜದ ಸ್ವಾಸ್ತö್ಯ ಕಾಪಾಡಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ ನೂತನ ಮದ್ಯಂಗಡಿಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ತೆರೆಯಲು ಆದೇಶ ಕೊಡುವ ಮೂಲಕ ಜನತೆಗೆ ತೊಂದರೆ ಉಂಟು ಮಾಡಲು ಸಮಾಜದ ಸ್ವಾಸ್ತö್ಯ ಹಾಳು ಮಾಡುವ ಕೆಲಸ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೂಡೀಕರಿಸಲು ಸಾರಾಯಿ ಅಂಗಡಿಗಳ ಮೂಲಕ ಹೊರಟಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಕೂಡಲೇ ನೂತನ ಮದ್ಯಂಗಡಿಗಳಿಗೆ ಕೊಟ್ಟಿರುವ ಆದೇಶವನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರ ವಿರುದ್ದ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಎಂ.ಶೈಲಾ, ಉಪಾಧ್ಯಕ್ಷರಾದ ಸರೋಜಸಿದ್ದರಾಜು, ಕಲಾವತಿ, ಖಜಾಂಚಿ ವನಜಾಕ್ಷಿ, ದಾಕ್ಷಾಯಿಣಿ, ಮಹೇಶ್ಚರಿ, ಮಂಡಲ ಮೋರ್ಚಾದ ಪದಾಧಿಕಾರಿಗಳು, ಮುಖಂಡರಾರ ನೂರೊಂದುಶೆಟ್ಟಿ, ನಗರ ಮಂಡಲ ಅಧ್ಯಕ್ಷ ನಾಗರಾಜು, ಅಗರರಾಜು, ಜಿಲ್ಲಾ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡ್ನಾಕೂಡುಪ್ರಕಾಶ್, ಮಂಡಲ ಅಧ್ಯಕ್ಷ ಮುತ್ತಿಗೆಮೂರ್ತಿ, ಹೊಂನೂರು ಮಹದೇವಸ್ವಾಮಿ. ಕೂಸಣ್ಣ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *