ಬ್ರಾಹ್ಮಿ ಮಹಿಳಾ ಸಂಘ  ಆಶ್ರಯದಲ್ಲಿ ನವಕನ್ನಿಕ ಪೂಜೆ, ಲಲಿತಾ ಸಹಸ್ರನಾಮ, ,ಭಜನೆ ಕಾರ್ಯಕ್ರಮ

ಚಾಮರಾಜನಗರ: ದಸರಾ ನವರಾತ್ರಿ ಸಂಭ್ರಮದ ಅಂಗವಾಗಿ ಬ್ರಾಹ್ಮಿ ಮಹಿಳಾ ಸಂಘ  ಆಶ್ರಯದಲ್ಲಿ ನವಕನ್ನಿಕ ಪೂಜೆ, ಲಲಿತಾ ಸಹಸ್ರನಾಮ ,ಭಜನೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ದಸರಾ ವೈಶಿಷ್ಟದ ವಿಶೇಷ ಕಾರ್ಯಕ್ರಮವನ್ನು ನಗರದ ಋಗ್ವೇದಿ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ನವ ದುರ್ಗ ಸ್ವರೂಪದಲ್ಲೇ ಒಂಬತ್ತು ಮಕ್ಕಳನ್ನು ವಿಶೇಷ ಅಲಂಕಾರ ಮಾಡಿ  ಸ್ವಾಗತ ಕೋರಿ, ಪಾದ ತೊಳೆದು ಅವರನ್ನು ದೇವಿ ಸ್ವರೂಪದಲ್ಲಿ ಪೂಜಿಸಿ, ಸಕಲ ವಸ್ತುಗಳನ್ನು ನೀಡಿ ಪೂಜೆ ಸಲ್ಲಿಸಲಾಯಿತು.

ಬ್ರಾಹ್ಮಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ರಾಧಾ ಮಾತನಾಡಿ, ಪ್ರತಿ ವರ್ಷ ಬ್ರಾಹ್ಮಿ ಮಹಿಳಾ ಸಂಘ ದಸರಾ ಸಂಭ್ರಮದಲ್ಲಿ ನವ ಕನ್ನಿಕಾ ಪೂಜೆಯನ್ನು ಋಗ್ವೇದಿ ಕುಟೀರದಲ್ಲಿ ನೆರವೇರಿಸಿಕೊಂಡು ಬರುತ್ತಿದ್ದೇವೆ. ಮಕ್ಕಳು ದೇವರ ಸ್ವರೂಪ. ಮಕ್ಕಳನ್ನು ನವ ದುರ್ಗೆಯ ರೂಪದಲ್ಲಿ ಪೂಜಿಸಿ ಅವರ ಶಕ್ತಿಯನ್ನು ಮತ್ತು ಆಶೀರ್ವಾದವನ್ನು ಸರ್ವರು ಸ್ವೀಕರಿಸುವುದು ನಮ್ಮ ಪದ್ಧತಿಯಾಗಿದೆ ಎಂದರು.

ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕರಾದ  ಕುಸುಮ ಋಗ್ವೇದಿ ನಾಡಿನ ಪ್ರಸಿದ್ಧ ಲಲಿತ ಉಪಾಸಕರಾದ ಡಾ. ವಿಮಲ ಗೋಪಾಲ್ ರಚಿತ ಲಲಿತಾ ಸಹಸ್ರನಾಮ ಪುಸ್ತಕವನ್ನು ನೀಡಿ ಪ್ರತಿಯೊಬ್ಬರು ಪ್ರತಿನಿತ್ಯ ಲಲಿತ ಸಹಸ್ರನಾಮವನ್ನು ಪಠಿಸಿದಾಗ ಮನಸ್ಸು ಅತ್ಯಂತ ಪ್ರಸನ್ನಗೊಳ್ಳಲಿದೆ. ಆಯಸ್ಸು ಆರೋಗ್ಯ, ಐಶ್ವರ್ಯ ವೃದ್ಧಿಯಾಗಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಲಲಿತಾ ಸಹಸ್ರನಾಮದಲ್ಲಿ ಪ್ರತಿ ಶಬ್ದವು ವಿಶೇಷ ಅರ್ಥವನ್ನು, ಶಕ್ತಿಯನ್ನು ನೀಡುತ್ತದೆ ಎಂದರು.

ಬ್ರಾಹ್ಮಿ ಮಹಿಳಾ ಸಂಘದ ಸದಸ್ಯರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನವ ಕನ್ನಿಕಾ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *