ಗ್ರಾಹಕರಿಗೆ ಗೃಹ ಬಳಕೆ ಹಾಗೂ ದಿನಸಿ ಸಾಮಾಗ್ರಿಗಳ ಮಳಿಗೆ ಆರಂಭ
ಚಾಮರಾಜನಗರ: ನಗರದ ಡಿವಿಯೇಷನ್ ರಸ್ತೆಯಲ್ಲಿರುವ ಭಾರತ್ ಗ್ಯಾಸ್ ಕಂಪನಿಯ ಮಹೇಶ್ ಗ್ಯಾಸ್ ಸರ್ವೀಸ್ ನಿಂದ ನೂತನವಾಗಿ ಗ್ರಾಹಕರಿಗೆÀ ಇನ್ ಅಂಡ್ ಔಟ್ ಸ್ಟೋರ್ ಅನ್ನು ಆರಂಭಿಸಿದ್ದು, ಭಾರತ್ ಗ್ಯಾಸ್ ಕಂಪನಿಯ ಮ್ಯಾನೇಜರ್ ಶಂಕರ್ ಎನ್. ಕರಜಕಿ ಅವರು ಉದ್ಘಾಟನೆ ಮಾಡಿದರು.

ಕಳೆದ 1982 ರಲ್ಲಿ ಆರಂಭವಾದ ಮಹೇಶ್ ಗ್ಯಾಸ್ ಎಜೆನ್ಸಿ ನಿರಂತರವಾಗಿ ತಾಲೂಕಿನ ಗ್ರಾಹಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, 39 ಸಾವಿರ ಎಲ್‍ಪಿಜಿ ಗ್ರಾಹಕರನ್ನು ಹೊಂದಿದೆ. ಭಾರತ್ ಗ್ಯಾಸ್ ಮತ್ತೋಂದು ಕೊಡುಗೆಯಾಗಿ ದಿನಸಿ ಹಾಗೂ ಗೃಹ ಪಯೋಗಿ ವಸ್ತುಗಳ ರಿಯಾಯಿತಿ ಮಾರಾಟ ಮಳಿಗೆಗೆಯನ್ನು ಆರಂಭಿಸಿದ್ದು, ಕರ್ನಾಟಕದಲ್ಲಿ ಇಂದು 5 ಮಳಿಗೆಯನ್ನು ಕಂಪನಿಯ ಪ್ರಮುಖರು ಉದ್ಗಾಟಿಸಿದರು.
ಕಂಪನಿ ಮ್ಯಾನೇಜರ್ ಶಂಕರ್ ಮಾತನಾಡಿ, ದೈನದಿಂನ ಬಳಕೆಯ ವಸ್ತುಗಳು, ಗೃಹಪಯೋಗಿ ವಸ್ತುಗಳ ಸಂಪೂರ್ಣ ಮಳಿಗೆ ಇದ್ದಾಗಿದ್ದು, ಭಾರತ್ ಪೆಟ್ರೋಲಿಯಂ ಉತ್ಪನ್ನಗಳ ಜೊತೆಗೆ ಅವರ ದೈನಂದಿನ ದಿನ ಬಳಕೆಯ ವಸ್ತುಗಳನ್ನು ಸಹ ನೀಡುವ ಉದ್ದೇಶ ಹಾಗೂ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ, ದಿನಸಿ ಪದಾರ್ಥಗಳನ್ನು ನೀಡುವ ಆಲೋಚನೆಯೊಂದಿಗೆ ಕಂಪನಿಯಿಂದ 5ನೇ ಮಳಿಗೆಯನ್ನು ಆರಂಭಿಸಿದ್ದೇವೆ. ಗ್ರಾಹಕರು ಎಂದಿನಂತೆ ಮಹೇಶ್ ಗ್ಯಾಸ್ ಗ್ರೂಪ್‍ಗೆ ಸಹಕಾರ ನೀಡಬೇಕು. ಮಹೇಶ್ ಗ್ಯಾಸ್ ಕಳೆದ 40 ವರ್ಷಗಳಿಂದ ನಿಮ್ಮೆಲ್ಲರಿಗೆ ಗ್ಯಾಸ್ ಸಿಲೆಂಡರ್ ಪೊರೈಕೆ ಮಾಡುತ್ತಿದ್ದರು. ಈಗ ಉತ್ತಮ ಆರೋಗ್ಯಕ್ಕಾಗಿ ಗುಣಮಟ್ಟದ ದಿನಸಿ ಪದಾರ್ಥಗಳನ್ನು ನೀಡುವ ಮೂಲಕ ನಿಮ್ಮ ಸೇವೆಗೆ ಬದ್ದವಾಗಿದೆ. ಇದನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಸಲು ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಭಾರತ್ ಗ್ಯಾಸ್ ಕಂಪನಿಯು ಇನ್ನು ಮುಂದೆ ಹೋಗಿ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರ ಹಾಗೂ ಗ್ರಾಮಗಳಲ್ಲಿ ಉಜ್ಜಾದೇವಿಗಳನ್ನು ನೇಮಕ ಮಾಡಿಕೊಂಡು ಸಮರ್ಪಕವಾಗಿ ಗ್ಯಾಸ್ ಸಿಲೆಂಡರ್ ಜೊತೆಗೆ ಇಂಧನ ಹಾಗೂ ದಿನಸಿ ಪದಾರ್ಥಗಳು ನಿಮ್ಮ ಗ್ರಾಮದಲ್ಲಿಯೇ ದೊರೆಯುತ್ತವೆ ಮಾಡುತ್ತಿದ್ದೇವೆ. ಇದಕ್ಕಾಗಿ ನಿರುದ್ಯೋಗಿ ಮಹಿಳೆಯರನ್ನು ನೇಮಕ ಮಾಡಿಕೊಂಡು ಅವರು ವಾಸಿಸುವ ಪ್ರದೇಶದಲ್ಲಿಯೇ ಮಳಿಗೆಯನ್ನು ಆರಂಬಿಸಿ, ಸಿಲೆಂಡರ್ ಖಾಲಿಯ ತಕ್ಷಣ ಆ ಗ್ರಾಮದಲ್ಲಿ ಸಿಲಿಂಡರ್ ಪಡೆದುಕೊಳ್ಳಲು ಅನುಕೂಲವಾಗುವಂತೆ 6 ಸಿಲೆಂಡರ್ ನೀಡಲಾಗುತ್ತದೆ. ಅದರೊಟ್ಟಿಗೆ ಅವರು ಆ ಗ್ರಾಮದ ಸಂಪೂರ್ಣ ವಿವರಗಳನ್ನು ಪಡೆದುಕೊಂಡು ವಾಹನಗಳಿಗೆ ಡಿಸೆಲ್, ಪೆಟ್ರೋಲ್, ಅಯಿಲ್ ಸೇರಿದಂತೆ ನಮ್ಮ ಕಂಪನಿಯಿಂದ ದೊರೆಯುವ ಎಲ್ಲವನ್ನು ನಿಮಗೆ ನೀಡುವ ಮೂಲಕ ನಿಮ್ಮ ಸೇವೆಗೆ ನಮ್ಮ ಕಂಪನಿ ಸದಾ ಸಿದ್ದವಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಲ್‍ಪಿಜಿ ಕರ್ನಾಟಕ ಮುಖ್ಯಸ್ಥ ರಾಜೇಶ್ ಕುಂಬಾರೆ, ಮಂಗಳೂರು ಎಲ್‍ಪಿಜಿ ಮ್ಯಾನೇಜರ್ ಬಿವಸ್ ಸಿ. ಮಂದಲ್, ಪ್ರಾದೇಶಿಕ ಮುಖ್ಯಸ್ಥ ಮಹೇಂದ್ರ ಡ್ರೋನಾ, ವಿಭಾಗೀಯ ಸಿನೀಯರ್ ಮ್ಯಾನೇಜರ್ ನಿತನ್ ಥಾಮಸ್, ನಗರಸಭೆ ಮಾಜಿ ಅಧ್ಯಕ್ಷ ನಂಜುಂಡಸ್ವಾಮಿ, ಮಹೇಶ್‍ಕುದರ್, ಉಮೇಶ್ ಕುದರ್, ಶ್ರೀನಿಧಿ ಕುದರ್, ದಿಲೀಪ್ ಕುದರ್, ಪುರುಷೋತ್ತ ಕುದರ್, ನೀಲಾದೇವಿ, ಆರ್.ಎನ್. ರಾಮು, ಗೋವಿಂದಶೆಟ್ಟಿ, ಮಹೇಶ್, ಸ್ವಾಮಿ, ಬಿ.ಕೆ. ರವಿಕುಮಾರ್, ಎಸ್. ರಾಜು,ಸೋಮೇಶ್ವರ್, ಯ.ಮಾಧು, ಕುಟುಂಬಸ್ಥರು ಹಾಗೂ ಮುಖಂಡರು ಇದ್ದರು.