ಮಹರ್ಷಿ ವಾಲ್ಮೀಕಿ ರಾಮಾಯಣ ಉದಾತ್ತ ಮೌಲ್ಯಗಳಿಂದ ಕೂಡಿದ ಮಹಾಕಾವ್ಯ : ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ: ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣವು ಮಾತೃ, ಪಿತೃ, ತ್ಯಾಗ ಪರಿಪಾಲನೆಯಂತಹ ಉದಾತ್ತ ಮೌಲ್ಯವುಳ್ಳ ಮಹಾಕಾವ್ಯವಾಗಿದೆ ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲಾ ಅವರಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಡೀ ಪ್ರಪಂಚವೇ ಮೆಚ್ಚುವಂತಹ ವಾಲ್ಮೀಕಿ ಅವರ ರಾಮಾಯಣದಲ್ಲಿ ಅನೇಕ ಉತ್ತಮ ವಿಚಾರಗಳಿವೆ. ಪ್ರಜಾಪ್ರಭುತ್ವದ ಬುನಾದಿ ಒಳಗೊಂಡ ಅಂಶಗಳು ಇವೆ. ತಂದೆ-ತಾಯಿ, ಸಹೋದರರ ಪ್ರೀತಿ, ಬಾಂಧವ್ಯ ಸೇರಿದಂತೆ ಇನ್ನೂ ಹಲವು ಮಹತ್ತರ ವಿಷಯಗಳನ್ನು ಒಳಗೊಂಡಂತೆ ಮಹಾಕಾವ್ಯ ರಾಮಾಯಣದಲ್ಲಿದೆ ಎಂದರು.

ಸಮಾಜದ ಅಂಕುಡೊಂಕು ತಿದ್ದಿ ಸರಿದಾರಿಯಲ್ಲಿ ನಡೆಸಲು ಮಹಾನ್ ಪುರುಷರ, ದಾರ್ಶನಿಕರ, ಸಂತರ ಜಯಂತಿ ಆಚರಣೆ ಮಾಡಲಾಗುತ್ತಿದೆ. ಇಡೀ ಮನುಕುಲದ ಒಳಿತಿಗಾಗಿ ಶ್ರಮಿಸಿದ ಮೇರುವ್ಯಕ್ತಿಗಳ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನೆಡೆಯಬೇಕಿದೆ ಎಂದು ಶಾಸಕರು ತಿಳಿಸಿದರು.

ಕೋವಿಡ್ ಇನ್ನಿತರ ಕಾರಣಗಳಿಂದ ಕಳೆದ ಮೂರು ವರ್ಷಗಳಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ಕಾರ್ಯಕ್ರಮ ನಡೆದಿದೆ. ಅರ್ಥಪೂರ್ಣವೂ ಆಗಿದೆ. ವಾಲ್ಮೀಕಿಯವರ ಬಗ್ಗೆಸಾಕಷ್ಟು ವಿಚಾರಗಳನ್ನು ತಿಳಿಯಲು ಅವಕಾಶವಾಗಿದೆ ಎಂದು ಶಾಸಕರಾದ ಪುಟ್ಟರಂಗಶೆಟ್ಟಿ ಅವರು ಹೇಳಿದರು.

ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಮಾತನಾಡಿ ಇಂದು ತಂತ್ರಜ್ಞಾನ ಮುಂದುವರೆಯುತ್ತಿದೆ. ಈ ಮಧ್ಯೆ ನಮ್ಮ ಸಂಸ್ಕøತಿ, ಪರಂಪರೆ ಮರೆಯಬಾರದು. ಮೇರು ಸಾಧಕರ, ವ್ಯಕ್ತಿಗಳ ವಿಚಾರಗಳನ್ನು ಮನನ ಮಾಡಿಕೊಂಡು ಅವರು ತೋರಿದ ಮಾರ್ಗದರ್ಶನದಲ್ಲಿ ನಡೆದುಕೊಂಡರೆ ಬದುಕು ಸಾರ್ಥಕವಾಗುತ್ತದೆ. ಸಮುದಾಯದವರು ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ರಾಮಾಯಣ ಪ್ರೀತಿ, ತ್ಯಾಗ, ತಪಸ್ಸು ಒಳಗೊಂಡ ಶ್ರೇಷ್ಠ ಗ್ರಂಥವಾಗಿದೆ. ರಾಮಾಯಣದ ಪಾತ್ರಗಳು ಮನುಷ್ಯ ಪ್ರೀತಿ, ಮಾನವತೆಯನ್ನು ಬಿಂಬಿಸುತ್ತವೆ. ನಡೆ, ನುಡಿಗಳಲ್ಲಿ ರಾಮಾಯಣವನ್ನು ರೂಢಿಸಿಕೊಳ್ಳಬೇಕಿದೆ. ಸತ್ಯ, ಸದಾಚಾರ ಹಾದಿಯಲ್ಲಿ ಮುನ್ನೆಡೆದು ಸಾರ್ಥಕತೆ ಜೀವನ ನಡೆಸಬೇಕು ಎಂದರು.

ಮುಖ್ಯ ಭಾಷಣ ಮಾಡಿದ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರಾದ ಡಾ. ನೀಲಗಿರಿ ತಳವಾರ ಅವರು ಮಹರ್ಷಿ ವಾಲ್ಮೀಕಿ ಅವರ ತಪಸ್ಸಿನ ಫ¯ವಾಗಿ ರಾಮಾಯಣ ಮಹಾಕಾವ್ಯ ಬರೆಯಲು ಸಾಧ್ಯವಾಯಿತು. ವಾಲ್ಮೀಕಿಯವರು ಪರಿವರ್ತನೆಯ ಸಂಕೇತವಾಗಿದ್ದಾರೆ. ಎಲ್ಲಿಯವರೆಗೆ ಪರಿವರ್ತನೆಗೆ ನಾವು ಒಡ್ಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸಮಗ್ರ ಬದುಕು ಸಾಧ್ಯವಾಗುವುದಿಲ್ಲ ಎಂದರು.

ಇದೇ ವೇಳೆ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಕೊಳ್ಳೇಗಾಲ ಪಟ್ಟಣದ ಕೆ. ಪಲ್ಲವಿ ಅವರಿಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 1 ಲಕ್ಷ ರೂ. ನೀಡಿ ಗೌರವಿಸಲಾಯಿತು. ಅತೀ ಹೆಚ್ಚು ಅಂಕ ಪಡೆದ ಗುಂಡ್ಲುಪೇಟೆಯ ಸಂಜನಾ ಎನ್, ಕೆ.ವಿ. ಲಿಖಿತ್ ಕುಮಾರ್, ಟಿ.ಎಂ. ಐಶ್ವರ್ಯ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.
ದ್ವಿತೀಯ ಪಿ.ಯು.ಸಿ. ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಹರ್ಷಿತಾ ಎಂ. ನಂದಿತಾ ಎಸ್.ಕೆ, ವರ್ಷಿತಾ ಪಿ, ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಹಿರಿಯ ಕಲಾವಿದರಾದ ಘಟಂ ಕೃಷ್ಣ, ಸುರೇಶ್ ನಾಗ್, ಪತ್ರಕರ್ತರಾದ ಶ್ರೀನಿವಾಸ ನಾಯಕ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್, ಡಾ. ಪುಟ್ಟರಾಜು ಟಿ.ಎನ್ ಹಾಗೂ ಕೃಷ್ಣನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಗರಸಭಾ ಸದಸ್ಯರಾದ ಕಲಾವತಿ, ಸುರೇಶ್, ಶಿವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ರ ಪ್ರಕಾಶ್ ಮೀನಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ. ಮಂಜುಳ, ಮುಖಂಡರಾದ ಪು. ಶ್ರೀನಿವಾಸ ನಾಯಕ, ಕೆಲ್ಲಂಬಳ್ಳಿ ಸೋಮನಾಯಕ, ಸುರೇಶ್ ನಾಯಕ, ಅರಕಲವಾಡಿ ಸೋಮನಾಯಕ, ಎಚ್.ವಿ. ಚಂದ್ರು, ರಾಮಸಮುದ್ರ ನಾಗರಾಜು, ಚಾ.ಸಿ. ಸೋಮನಾಯಕ, ರಾಚಪ್ಪ, ಮಹದೇವನಾಯಕ, ಜಯಶೀಲ, ಚಂದ್ರಶೇಖರ್, ಸುರೇಶ್, ಶಿವು, ಚಂಗುಮಣಿ, ಜಯಸುಂದರ, ಪರಶಿವಮೂರ್ತಿ, ಕಪನಿ ನಾಯಕ, ನಾಗೇಂದ್ರ, ಶಿವಮೂರ್ತಿ, ರಾಜು ನಾಯಕ, ರಮೇಶ್, ಸೇರಿದಂತೆ ಇತರ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪ್ರವಾಸಿ ಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಲನೆ ನೀಡಿದರು. ಇತರೆ ಗಣ್ಯರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *