ಚಾಮರಾಜನಗರ: ಮಾಜಿ ಪ್ರಧಾನಿ ದಿವಂಗತ ರಾಜೀವ್ಗಾಂಧಿ ಹಾಗೂ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರು ನಾಡು ಕಂಡ ಶ್ರೇಷ್ಟ ರಾಜಕಾರಣಿಗಳು, ಅಭಿವೃದ್ದಿ ಹರಿಕಾರರು ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಬಣ್ಣಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ಗಾಂಧಿ ಹಾಗೂ ಹಿಂದುಳಿದ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಅವರು ಮಾತನಾಡಿದರು.

ಮಾಜಿ ಪ್ರಧಾನಿಗಳಾದ ರಾಜೀವ್ಗಾಂಧಿ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ರಾಜಕಾರಣಕ್ಕೆ ಬಂದವರು. ಉತ್ತಮ ಆಡಳಿತವನ್ನು ನೀಡುವ ಜನಮನ್ನಣೆಯನ್ನು ಗಳಿಸಿದ್ದರು. ಮಾಹಿತಿ ತಂತ್ರಜ್ಞಾನದ ಬೆಳೆವಣಿಗೆ ಅದ್ಯತೆ ನೀಡಿದ ಪರಿಣಾಮ ಇಂದು ದೇಶ ಅಭಿವೃದ್ದಿ ಹೊಂದಲು ಪ್ರಮುಖ ಕಾರಣಕರ್ತರು, ಅವರು ಅಂದು ತೆಗೆದುಕೊಂಡು ದಿಟ್ಟ ನಿರ್ಧಾರಗಳು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯತ್ತಿವೆ ಎಂದರು.
ಯುವಕರು ಈ ದೇಶದ ಆಸ್ತಿ. ಅವರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿ, ಯುವಶಕ್ತಿಯನ್ನು ದೇಶದ ಅಭಿವೃದ್ದಿಗಾಗಿ ತೊಡಗಿಸಿಕೊಂಡ ಮಹಾನ್ ಚೇತನ್, ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ ರಾಜೀವ್ ಗಾಂಧಿ, ನೆಹರು ಕುಟುಂಬದ ಮಗನಾಗಿ ಅವರ ಹಾದಿಯಲ್ಲಿ ಹಾದಿಯಲ್ಲಿಯೇ ಸಾಗಿ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದರು ಎಂದರು.
ಅದೇ ಮೈಸೂರು ಭಾಗದ ದಿ. ದೇವರಾಜ ಅರಸು ಅವರು ಇಂದಿರಾಗಾಂಧಿ ಅವರ ಕಟ್ಟಾ ಬೆಂಬಲಿಗರಾಗಿದ್ದರು. ರಾಜ್ಯ ಮುಖ್ಯಮಂತ್ರಿಗಳಾಗಿ ಉತ್ತಮ ಯೋಜನೆಯನ್ನು ನೀಡಿದರು. ಉಳುವವನಿಗೆ ಭೂಮಿ ಕಾಯ್ದೆಯಿಂದ ಬಹಳಷ್ಟು ಮಂದಿ ದೀನ ದಲಿತರು ಹಾಗೂ ಬಡವರು ಭೂ ಒಡೆತನ ಹೊಂದಲು ಸಾಧ್ಯವಾಯಿತು. ಹಾವನೂರು ವರದಿಯನ್ನು ಜಾರಿ ಮಾಡಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸಿಕೊಟ್ಟರು ಎಂದು ಅವರ ಆಡಳಿತ ವೈಖರಿಯನ್ನು ಗುಣಗಾನ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಪ್ರಧಾನಿ ದಿ. ರಾಜೀವ್ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರು ದೇಶ ಕಂಡ ಮಹಾನ್ ನಾಯಕರು. ದೇಶದ ಹಾಗೂ ರಾಜ್ಯದ ಅಭಿವೃದ್ದಿಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂಥಹ ನಾಯಕರ ಜಯಂತಿಯನ್ನು ಆಚರಣೆ ಮಾಡುವುದೇ ಪುಣ್ಯ ಕೆಲಸ. ರಾಜೀವ್ ಗಾಂಧಿ ಅವರು ಮಾಹಿತಿ ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮ ಇಂದು ಮೊಬೈಲ್ ಕಾಂತ್ರಿಯಾಗಿ. ಪ್ರತಿಯೊಬ್ಬರು ಮೊಬೈಲ್ ಉಪಯೋಗಿಸುವಂತಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷ ಮಹಮದ್ ಅಸ್ಗರ್, ಜಿ.ಪಂ. ಮಾಜಿ ಸದಸ್ಯರಾದ ಸಿ.ಎ. ಮಹದೇವಶೆಟ್ಟಿ, ರಾಜ್ಯ ಎಸ್ಟಿ ಘಟಕದ ಕಾರ್ಯದರ್ಶಿ ಪು. ಶ್ರೀನಿವಾಸನಾಯಕ, ಜಿ.ಪಂ. ಮಾಜಿ ಸದಸ್ಯ ರಮೇಶ್, ಚುಡಾ ಮಾಜಿ ಅಧ್ಯಕ್ಷ ಸುಹೇಲ್ ಖಾನ್, ತಾ.ಪಂ. ಮಾಜಿ ಸದಸ್ಯರಾದ ಎಸ್.ರಾಜು, ಕಾಗಲವಾಡಿ ಶಿವಸ್ವಾಮಿ, ಮುಖಂಡರಾದ ಶಿವಮೂರ್ತಿ, ಎ.ಎಚ್.ಎನ್.ಖಾನ್, ಕರಿನಂಜನಪುರ ಸ್ವಾಮಿ, ಪುಟ್ಟಸ್ವಾಮಿ, ಮಹದೇವ್, ಮೋಹನ್ ನಾಗೇಂದ್ರ, ಶಿವಕುಮಾರ್ ಮೊದಲಾದವರು ಇದ್ದರು.