ರಾಜೇಂದ್ರಶ್ರೀಗಳ ಸಾಧನೆ ಅನನ್ಯ: ಷಡಕ್ಷರಿ ಸ್ವಾಮಿ ಬಣ್ಣನೆ

ಶರಣ ಸಾಹಿತ್ಯಪರಿಷತ್‍ನಿಂದ ಮಹದೇವಮ್ಮ ರುದ್ರಪ್ಪ ದತ್ತಿ ಉಪನ್ಯಾಸ
ಚಾಮರಾಜನಗರ: ರಾಜೇಂದ್ರಶ್ರೀಗಳು ಹಾಗೂ ಸಿದ್ದಗಂಗಾ ಶ್ರೀಗಳಿಬ್ಬರು ಕಾಯಕ ತಪಸ್ವಿಗಳು ಒಬ್ಬರು ಶಿಕ್ಷಣ ಮತ್ತೊಬ್ಬರು ಅನ್ನ ದಾಸೋಹಕ್ಕೆ ಹೆಚ್ಚಿನ ಮಾನ್ಯತೆಯನ್ನು ನೀಡಿ ಮಹಾಪುರುಷರಾದವರು ಎಂದು ಮುಡುಕನಪುರದ ಹಲವಾರು ಮಠಾಧ್ಯಕ್ಷರಾದ ಶ್ರೀ ಷಡಕ್ಷರಿ ದೇಶಿಕೇಂದ್ರಸ್ವಾಮೀಜಿ ಬಣ್ಣಿಸಿದರು.

ನಗರದ ಮಹಾಮನೆಯಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘÀ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಸಹಯೋಗದಲ್ಲಿ ಶರಣ ಚಿಂತನ ಸಿಂಚನ ಹಾಗೂ ಶರಣೆ ಮಹದೇವಮ್ಮ ರುದ್ರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಶಿವರಾತ್ರಿರಾಜೇಂದ್ರಸ್ವಾಮಿಗಳು ಮತ್ತು ಶ್ರೀ ಶಿವಕುಮಾರಸ್ವಾಮಿಗಳು ಇವರಿಬ್ಬರಿಗೂ ಸಹ ಒಬ್ಬರೇ ಗುರುಗಳಿದ್ದರು. ಆ ಸಂದರ್ಭದಲ್ಲಿ ಅವರ ಅದರ್ಶ ಮತ್ತು ಗುರುಪರಂಪರೆ, ಬದ್ದತೆಯನ್ನು ನೋಡಿ. ದೊಡ್ಡ ಮಹಾನ್ ಸಾಧಕರಾಗುತ್ತಾರೆ ಎಂದು ಅಂದೇ ಭವಿಷ್ಯ ನುಡಿದ್ದರು.

ವಿದ್ಯಾಭ್ಯಾಸ ಬಳಿಕ ಶ್ರೀ ರಾಜೇಂದ್ರಸ್ವಾಮಿಗಳು ಮೈಸೂರಿನಲ್ಲಿ, ಶ್ರೀ ಶಿವಕುಮಾರಸ್ವಾಮೀಜಿ ತುಮಕೂರು ಭಾಗದಲ್ಲಿ ಕ್ರಾಂತಿ ಮಾಡಿದ್ದರು. ತಮ್ಮ ಸಾಧನೆಯ ಮೂಲಕ ಜಗತ್ತಿಗೆ ಪರಿಚಿತರಾದರು. ಅವರ ಹಾದಿಯಲ್ಲಿ ಬಸವಣ್ಣನವರ ಕಾಯಕತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಶರಣ ಪರಂಪರೆಯಂತೆ ಬಾಳಿದ ಮಹದೇವಮ್ಮ ರುದ್ರಪ್ಪ ಅವರ ಬದುಕು ಸಹ ಉನ್ನತ ಮಟ್ಟದಲ್ಲಿತ್ತು. ಅವರ ಹೆಸರಿನಲ್ಲಿ ಅವರ ಮಕ್ಕಳಾದ ರತ್ನಮ್ಮ, ಬಸವರಾಜು ಹಾಗೂ ಡಾ. ಅಭಿಷೇಕ್ ಅವರು ದತ್ತಿ ಉಪನ್ಯಾಸÀ ನೀಡುವ ಮೂಲಕ ಗುರು ಪರಂಪರೆ ಮತ್ತು ಶರಣರ ವಿಚಾರ ಧಾರೆಗಳನ್ನು ತಿಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಗುಂಡ್ಲುಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೋಡಗಾಪುರದ ಪ್ರಭುಸ್ವಾಮಿ ಉಪನ್ಯಾಸ ನೀಡಿ, ಶ್ರೀರಾಜೇಂದ್ರಸ್ವಾಮಿಗಳ ಜೀವನ ಸಂದೇಶದ ಕುರಿತು ಮಾತನಾಡಿದರು.

ಸಿಮ್ಸ್‍ನ ತುರ್ತು ಚಿಕಿತ್ಸೆ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಬಿ. ಅಭಿಷೇಕ್ ಮಾತನಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ದಿನನಿತ್ಯ ಕನಿಷ್ಟ 1 ಗಂಟೆಗಳ ಕಾಲ ವಾಕಿಂಗ್ ಮಾಡುವುದು ಉತ್ತಮ. ಅದೇ ರೀತಿ ಜೀವನ ಉತ್ತಮವಾಗಿಸಿಕೊಳ್ಳಲು ಲೈಪ್ ಇನ್ಸೋರೆನ್ಸ್ಸ್, ತುರ್ತು ಚಿಕಿತ್ಸೆ ಅಪಘಾತ ವಿಮೆ ಹಾಗೂ ಭವಿಷ್ಯವಾಗಿ ಭದ್ರತಾ ಠೇವಣಿಗಳನ್ನು ಹೊಂದಿದ್ದರೆ ಉಳಿತು ಎಂದರು.

ಕಾರ್ಯಕ್ರಮದಲ್ಲಿ ಡಯಟ್ ಉಪ ನಿರ್ದೇಶಕ ಎಂ. ಕಾಶಿನಾಥ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಕಿಲಗೆರೆ ಬಸವರಾಜು, ರತ್ನಮ್ಮ ಬಸವರಾಜು, ಸಂಘ ಅಧ್ಯಕ್ಷ ಸಿದ್ದಮಲ್ಲಪ್ಪ, ಶರಣ ಸಾಹಿತ್ಯಪರಿಷತ್‍ನ ತಾಲೂಕು ಅಧ್ಯಕ್ಷ ಎಸ್. ಮಹೇಶಪ್ರಭು, ಮುಖಂಡರಾದ ಯೋಗ ಪ್ರಕಾಶ್, ಕೆ.ಎಸ್. ಮಹದೇವಸ್ವಾಮಿ, ನಾಗರಾಜಪ್ಪ, ಗಂಗಾಧರ್, ನಂಜುಂಡಸ್ವಾಮಿ, ಐಟಿಐ ಮಹದೇವಸ್ವಾಮಿ, ಅರ್ಕಪ್ಪ, ಬಸವರಾಜಪ್ಪ, ಮಲ್ಲಿಕಾರ್ಜುನಪ್ಪ, ಮೊದಲಾದವರು ಇದ್ದರು.

Leave a Reply

Your email address will not be published. Required fields are marked *