ರಾಮ ಮಂತ್ರಾಕ್ಷತೆಯು ಅಭಿವೃದ್ಧಿ ಸಂಕೇತ :  ಎಂ.ರಾಮಚಂದ್ರ

ರಾಮಸಮುದ್ರದಲ್ಲಿ  ಅಯೋಧ್ಯೆ ಮಂತ್ರಾಕ್ಷತೆ ವಿತರಣೆಗೆ ಚಾಲನೆ
ಚಾಮರಾಜನಗರ: ರಾಮಸಮುದ್ರದ ಕೋಟೆಬೀದಿಯಲ್ಲಿರುವ ಶ್ರೀ ರಾಮಮಂದಿರದಲ್ಲಿ ವಿಶೇಷಪೂಜೆ ಸಲ್ಲಿಸಿ  ಜೈ ಶ್ರೀರಾಮು ಘೋಷಣೆ ಕೂಗಿ ಅಯೋಧ್ಯೆ ಮಂತ್ರಾಕ್ಷತೆ ವಿತರಣೆಗೆ ಚಾಲನೆ ನೀಡಲಾಯಿತು. ನಂತರ ಬಿಜೆಪಿ ಮುಖಂಡರು ಮನೆಮನೆಗೆ ತೆರಳಿ ಮಂತ್ರಾಕ್ಷತೆ ವಿತರಿಸಿದರು

ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಕಾರ್ಯಕ್ರಮಕ್ಕೆ ಚಾಲನೆ  ಮಾತನಾಡಿ, ಇತಿಹಾಸಯುಳ್ಳ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಹಿಂದೂಗಳ ಬಹುದಿನದ ದಿನ ಕನಸು ನನಸಾಗಿದ ರಾಮಮಂದಿರವನ್ನು ಜ.22 ರಂದು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಾಗುತ್ತಿದೆ. ಅಂದು ಇಡೀ ದೇಶವೇ ಹಬ್ಬದ ವಾತಾವರಣದಲ್ಲಿ ಕೂಡಿರುತ್ತದೆ. ಅಂದು ಮನೆಗಳ ಮುಂದೆ ದೀಪ ಬೆಳಗಿಸುವಂತೆ ಕರೆ ನೀಡಿದ್ದಾರೆ. ರಾಮ ಶಕ್ತಿ,ದೇಶಶಕ್ತಿಯಾಗಿದ್ದು, ಅಯೋಧ್ಯಯಿಂದ ಆಗಮಿಸಿರುವ ರಾಮ ಮಂತ್ರಾಕ್ಷತೆಯನ್ನು ರಾಮಸಮುದ್ರ ಪ್ರತೀ ಹಿಂದೂಗಳ ಮನೆಗೆ ತಲುಪಿ,  ಅಯೋಧ್ಯೆಯ ಶ್ರೀ ರಾಮ ಜನ್ಮಸ್ಥಾನ ದಲ್ಲಿ ಜ.22 ರಂದು ಪ್ರಾಣಪ್ರತಿಸ್ಠಾಪನೆ ನಡೆಯಲಿದೆ ಅಲ್ಲಿಯ ತನಕ ಮಂತ್ರಾಕ್ಷತೆ ಗೆ  ಪೂಜಿಸಿ ಅಂದು ಮನೆಗಳ ಮುಂದೆ ದೀಪ ಬೆಳಗಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದರು.

ಈ ಮಂತ್ರಾಕ್ಷತೆ ಯಲ್ಲಿ ರಾಮನಲ್ಲಿದ್ದಂತಹ 16 ಸಾತ್ವಿಕ ಗುಣಗಳು ಪ್ರತೀ ಹಿಂದೂವಿನಲ್ಲಿ ಬರುವಂತಾಗಲಿ ಅನ್ನೋ ಆಶಯವೂ ಇದೆ. ಜೊತೆಗೆ ರಾಮ ಮಂತ್ರಾಕ್ಷತೆಯು ಸುಖ, ನೆಮ್ಮದಿ ಹಾಗೂ ಅಭಿವೃದ್ಧಿಯ ಸಂಕೇತವೂ ಆಗಿದೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಅರ್.ಪುಟ್ಟಮಲ್ಲಪ್ಪ, ಆರ್.ವಿ.ಮಹದೇವಸ್ವಾಮಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಶಿವು,   ಟೌನ್ ಕಾರ್ಯದರ್ಶಿ ಭೃಂಗೇಶ್,  ರಂಗಸ್ವಾಮಿ,  ಪಿಎಸಿಸಿ ಬ್ಯಾಂಕ್ ಅಧ್ಯಕ್ಷ  ಆರ್.ಡಿ.ಮಹೇಶ್, ನಾಗೇಶ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *