ಚಾಮರಾಜನಗರ: ರೋಟರಿ ಸಂಸ್ಥೆ ವತಿಯಿಂದ ಪ್ರತಿ ತಿಂಗಳ ಮೊದಲ ಭಾನುವಾರ ನಡೆಯುವ ಕಣ್ಣಿನ ಉಚಿತ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆದು ಕಣ್ಣಿನ ಪೊರೆಯುಳ್ಳ 137 ಮಂದಿಯನ್ನು ಇಂದು ಮೂರು ಬಸ್ ಮೂಲಕ ಕೊಯಮತ್ತೂರಿನ ಅರವಿಂದ್ ಕಣ್ಣಾ ಸ್ಪತ್ರೆ ಕಳುಹಿಸಿಕೊಡಲಾಯಿತು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಅರವಿಂದ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಶಿಬಿರ ನಡೆದು 430 ಮಂದಿ ಕಣ್ಣಿನ ತಪಾಸಣೆಗೆ ಒಳಪಟ್ಟು ತಜ್ಞ ವೈದ್ಯರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡರು. ಔಷಧಿಯನ್ನು ಸಹ ನೀಡಲಾಯಿತು. ಕಣ್ಣಿನ ಪೊರೆಯುಳ್ಳ 137 ಮಂದಿಯನ್ನು ಬುಧವಾರ ಬೆಳಗ್ಗೆ ರೋಟರಿ ಭವನದಿಂದ ಸುರಕ್ಷಿತವಾಗಿ ಎಲ್ಲರನ್ನು ಅಸ್ಪತ್ರೆಯ ಸಂಯೋಜನಾಧಿಕಾರಿ ವಿಜಯಕಾಂತ್ ಕರೆದೊಯ್ಯದರು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಸಿ.ಎನ್. ಚಂದ್ರಪ್ರಭ ಜೈನ್ ಮಾತನಾಡಿ, ತಾವೆಲ್ಲರುವ ಸಂಸ್ಥೆಯ ಹಾಗೂ ಅರವಿಂದ ಕಣ್ಣಾಸ್ಪತ್ರೆಯ ಸೇವೆಯನ್ನು ನೋಡಿ, ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಹೋಗುತ್ತಿದ್ದೀರಿ. ಕಣ್ಣಿನ ರಕ್ಷಣೆ ಮತ್ತು ಸುರಕ್ಷತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಎಲ್ಲರು ಸಹ ಶುಚಿತ್ವನ್ನು ಕಾಪಾಡಿಕೊಳ್ಳಿ. ವೈದ್ಯರು ನೀಡುವ ಕನ್ನಡಕವನ್ನು ಧರಿಸಿ, ಯಾವುದೇ ತೊಂದರೆಯಾದರು ತಕ್ಷಣ ಅಲ್ಲಿನ ವೈದ್ಯರು ಹಾಗೂ ನರ್ಸ್ಗಳ ಗಮನ ಬನ್ನಿ ಎಂದು ಕಿವಿಮಾತು ಹೇಳಿದರು.
ಆರ್ಥಿಕವಾಗಿ ದುರ್ಬಲರಾಗಿದ್ದು ದಿನನಿತ್ಯ ಜೀವನದಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಅನುಕೂಲ ಕಲ್ಪಿಸಲು ರೋಟರಿ ಸಂಸ್ಥೆಯು ಪ್ರತಿ ತಿಂಗಳು ಮೊದಲನೆಯ ಭಾನುವಾರ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಅಯೋಜಿಸಿದ್ದು, ಇದರ ಸದುಪಯೋಗವನ್ನು ಜಿಲ್ಲೆಯ ಜನರು ಇನ್ನು ಹೆಚ್ಚಿನ ರೀತಿಯಲ್ಲಿ ಪಡೆದುಕೊಳ್ಳಬೇಕು ಎಂದರು.
ಕೊಯಮತ್ತೂರಿಗೆ ತೆರಳಿ 137 ಮಂದಿ ರೋಗಿಗಳು ಹಾಗೂ ಸಹಾಯಕರಿಗೆ ರೋಟರಿ ಸಂಸ್ಥೆಯ ಜಿ. ಅಂಕಶೆಟ್ಟಿ, ಆರ್.ಎನ್. ರಾಮು, ಸಿ.ಎ.ನಾರಾಯಣ್, ಜಿ.ನಾಗರಾಜು ಅವರು ಮಧ್ಯಾಹ್ನದ ಉಪಹಾರ ಹಾಗೂ ಕುಡಿಯುವ ನೀರಿನ ಬಾಟಲ್ಅನ್ನು ವಿತರಿಸಿದರು.
ಶಿಬಿರದಲ್ಲಿ ರೋಟರಿ ಕಾರ್ಯದರ್ಶಿ ಅಬ್ದುಲ್ ಅಜೀಜ್ (ದಿನಾ) ರೋಟರಿಯನ್ಗಳಾದ ಕಾಗಲವಾಡಿ ಚಂದ್ರು, ರಾಮಸಮುದ್ರ ನಾಗರಾಜು, ಸಮಾಜ ಸೇವಕ ಡಾ. ಪರಮೇಶ್ವರಪ್ಪ, ಮೊದಲಾಧವರು ಇದ್ದರು.