ಚಾಮರಾಜನಗರ: ನಗರದ ಲಾರಿನಿಲ್ದಾಣದ ಬಳಿ ನಗರೋತ್ಥಾನ ಮೂರನೇ ಹಂತದ ಅನುದಾನ ೨.೫೦ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಓವರ್ ಹೆಡ್ ಟ್ಯಾಂಕ್, ಹಾಗೂ ೩ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡ ಅಭಿವೃದ್ದಿ ಕಾಮಗಾರಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ವಾರ್ಡ್ ಸದಸ್ಯರು, ನಗರಸಭೆ ಎಂಜಿನಿಯರ್ ಜತೆ ತೆರಳಿ ಪರಿಶೀಲಿಸಿದರು.

ಮೊದಲಿಗೆ ಲಾರಿನಿಲ್ದಾಣದ ಬಳಿ ನಗರೋತ್ಥಾನ ಮೂರನೇ ಹಂತದ ಅನುದಾನದಡಿ ನಿರ್ಮಾಣವಾಗುತ್ತಿರುವ ೧೫ ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಕಾಮಗಾರಿಯನ್ನು ವೀಕ್ಷಿಸಿದ ಶಾಸಕರು’ ನಗರದ ನಾನಾವಾರ್ಡ್ಗಳಿಗೆ ತ್ವರಿತವಾಗಿ ನೀರುಸರಬರಾಜು ಮಾಡುವ ಸಂಬಂಧ ಗುತ್ತಿಗೆದಾರರು ಆಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಸಮೀಪದಲ್ಲೇ ಗ್ರಂಥಾಲಯ ಅಭಿವೃದ್ದಿ ಪ್ರಾಧಿಕಾರದಿಂದ ೧, ನಿರ್ಮಿತಿ ಕೇಂದ್ರದ ೨ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡದ ಕಾಮಗಾರಿ ವೀಕ್ಷಿಸಿದ ಶಾಸಕರು’ ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರು ನೀಡಬೇಕು. ಓದುಗರಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸಿಕೊಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರ ಆರಂಭಕ್ಕೂ ಒತ್ತು ನೀಡಬೇಕಿದೆ ಎಂದರು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಆಟೋನಿಲ್ದಾಣ, ಬಸ್ ತಂಗುದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕರು ಪರಿಶೀಲಿಸಿದರು.
ನಗರಸಭೆ ಸದಸ್ಯ ಎಂ.ಮಹೇಶ್, ನಗರಸಭೆ ಎಇಇ ನಟರಾಜು, ಜೆಇ ಶಿವಶಂಕರ ಆರಾಧ್ಯ, hಂgU ಕೇಶವಮೂರ್ತಿ ಗುತ್ತಿಗೆದಾರರು ಹಾಜರಿದ್ದರು.