ಸನಾತನ ಹಿಂದೂ ಧರ್ಮದ ಬಗ್ಗೆ ಯುವಜನಾಂಗ ಜಾಗೃತರಾಗಬೇಕು : ಶ್ರೀಕಂಠಸ್ವಾಮೀಜಿ

ಚಾಮರಾಜನಗರ: ಸನಾತನ ಹಿಂದೂ ಧರ್ಮದ ಬಗ್ಗೆ ಯುವಕ, ಯುವತಿಯಲ್ಲಿ ಹೆಚ್ಚು ಜಾಗೃತಿಯನ್ನು ಮೂಡಿಸಬೇಕಾಗಿದೆ. ಅವರಲ್ಲಿ ಹಿಂದು ಧರ್ಮ ಆಚಾರವಿಚಾರಗಳ ಬಗ್ಗೆ ಅರಿವು ಮೂಡಿಸುವ ಮೂಲಕ ನಮ್ಮ ಧರ್ಮವನ್ನು ಕಾಪಾಡಿಕೊಳ್ಳೋಣ ಎಂದು ಮುಡಿಗುಂಡದ ಶ್ರೀಕಂಠಸ್ವಾಮೀಜಿ ತಿಳಿಸಿದರು.

ವಿಶ್ವ ಹಿಂದೂ ಪರಿಷತ್, ಬಜರಂಗ ದಳದಿಂದ ನಡೆಯುತ್ತಿರುವ ಶೌರ್ಯ ಜಾಗರಣ ರಥಯಾತ್ರೆ ಬುಧವಾgನಗರದ ಶ್ರೀ ಆದಿಶಕ್ತಿ ದೇವಸ್ಥಾನ ಮುಂಭಾಗಕ್ಕೆ ಆಗಮಿಸುತ್ತಿದ್ದಂತೆ À ಭವ್ಯ ಸ್ವಾಗತ ಕೋರಲಾಯಿತು. ನಂತರ ಚಾಮರಾಜೇಶ್ವರ ದೇವಸ್ಥಾನ ಮಂಭಾಗ ನಡೆದ ಸಮಾವೇಶವನ್ನು ಉದ್ಗಾಟಿಸಿ ಅವರು ಮಾತನಾಡಿದರು.

ನಮ್ಮ ಹಿಂದೂ ಧರ್ಮವನ್ನು ನಾವು ಎಂದಿಗೂ ಮರೆಯಬಾರದು, ನಮ್ಮ ಧರ್ಮದ ಬಗ್ಗೆ ಯುವ ಜನರಲಿ ಇನ್ನೂ ಹೆಚ್ಚು ತಿಳುವಳಿಕೆ ಮೂಡಿಸಬೇಕು. ಧರ್ಮ ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತದೆ. ದೇಶ ಚೆನ್ನಾಗಿರಬೇಕೆಂದರೆ ಜನರು ಚೆನ್ನಾಗಿರಬೇಕು, ಜನರಲ್ಲಿ ಸಾಮರಸ್ಯತೆ ಇರಬೇಕು ಎಂದು ಹೇಳಿದರು.

ಎಲ್ಲರಲ್ಲೂ ನಮ್ಮ ಸನಾತನ ಧರ್ಮದ ಬಗ್ಗೆ ಅರಿವು ಉಂಟಾಗಬೇಕು ನಮ್ಮ ಧರ್ಮವನ್ನು ಕಾಪಾಡಿಕೊಳ್ಳಲು ನಾವು ಪ್ರಯತ್ನ ಮಾಡೋಣ, ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಹೊರಟಿರುವ ಈ ರಥ ದಿಗ್ವಿಜಯ ಸಾಧಿಸಲಿ, ನಿರ್ವಿಘ್ನವಾಗಿ ಸಾಗಲಿ ಎಂದು ಶ್ರೀಗಳು ಶುಭ ಹಾರೈಸಿದರು.
ಬಜರಂಗದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ ಮಾತನಾಡಿ, ಕಳೆದ 75 ವರ್ಷಗಳಿಂದ ಹಿಂದೂಗಳಿಗೆ ಸ್ವಾತಂತ್ಯ ಸಿಕ್ಕಿಲ್ಲ, ಸ್ವಾತಂತ್ರವನ್ನು ಅವರು ಅನುಭವಿಸಲಿಲ್ಲ. ಬದಲಾಗಿ ಹಿಂದೂಗಳ ತ್ಯಾಗದ ಫಲವಾಗಿ ಸಿಕ್ಕಿರುವ ಸ್ವಾತಂತ್ರವನ್ನು ಹಿಂದುಗಳೇತರರು ಚೆನ್ನಾಗಿ ಅನುಭವಿಸುತ್ತಿದ್ದಾರೆ. ಹಿಂದುಗಳು ಎಚ್ಚೆತ್ತುಕೊಳ್ಳದಿದ್ದರೆ ಭಾರತವನ್ನು ಐದು ಪಾಕಿಸ್ತಾನಗಳನ್ನಾಗಿ ಮಾಡಿಬಿಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಪ್ರಧಾನಮಂತ್ರಿ ನರೇಂದ್ರಯವರು ಮುಗಿದರೆ ಇಡೀ ಭಾರತವನ್ನು, ಹಿಂದು ಧರ್ಮವನ್ನು ನಾಶ ಮಾಡಬಹುದು ಎಂದುಕೊಂಡಿದ್ದಾರೆ. ಆದರೆ ಮಹಮದ್ ಘೋರಿ, ಔರಂಗಜೇಬ ಸೇರಿದಂತೆ ಹಲವಾರು ಮಂದಿ ಈ ದೇಶ, ಹಿಂದು ಧರ್ಮದ ಮೇಲೆ ಆಕ್ರಮಣ ಮಾಡಿದ್ದಾರೆ, ಲೂಟಿ ಮಾಡಿದ್ದಾರೆ, ಆದರೂ ಹಿಂದೂ ಧರ್ಮವನ್ನು ನಾಶ ಮಾಡಲು ಸಾಧ್ಯವಾಗಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಗಿದರೆ ಭಾರತ, ಹಿಂದೂ ಧರ್ಮ ಮುಗಿಸಿದಂತೆ ಎಂದುಕೊಂಡಿದ್ದಾರೆ. ಆದರೆ ಭಾರತ ಮಾತೆ ಬಂಜೆಯಲ್ಲ, ಲಕ್ಷಾಂತರ ಮಂದಿ ನರೇಂದ್ರಮೋದಿಯಂತಹವರು ಹುಟ್ಟಿ ಬರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ಕೆ. ಬಾಲಸುಬ್ರಮಣ್ಯ, ಪ್ರಾಂತ್ಯೀಯ ಸೇವಾ ಪ್ರಮುಖ ರಾ. ಸತೀಶ್, ಜಿಲ್ಲಾ ಕಾರ್ಯಧರ್ಶಿ ಮಂಜುನಾಥ್, ಭಜರಂಗದಳದ ವಿಭಾಗೀಯ ಸಂಚಾಲಕ ಬಾಲು, ಎಸ್. ಬಾಲಸುಬ್ರಮಣ್ಯ, ಪ್ರಥ್ವಿರಾಜ್, ಸಂಜಯ್, ರಮೇಶ್ ನಾಯಕ, ಶ್ರೀನಿವಾಸ್, ನಿರ್ಮಲ, ರಾಧಿಕಾ, ನಗರಸಭಾ ಸದಸ್ಯರಾದ ಮಮತಾ, ಗಾಯತ್ರಿ, ರಾಘವೇಂದ್ರ ಮೊದಲಾಧವರು ಇದ್ದರು.

Leave a Reply

Your email address will not be published. Required fields are marked *