ಚಾಮರಾಜನಗರ: ಸರ್ಕಾರಿ ವಕೀಲರಾಗಿ ನೇಮಕಗೊಂಡ ಅರುಣ್ ಕುಮಾರ್ ಅವರನ್ನು ಸ್ವಗ್ರಾಮವಾದ ತಾಲೂಕಿನ ದೊಡ್ಡರಾಯಪೇಟೆ ಗ್ರಾಮಸ್ಥರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು..

ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ಮಾತನಾಡಿದ ಅವರು, ವಿದ್ಯಾರ್ಥಿ ಸಂಘಟನೆಯಲ್ಲಿದ್ದ ನನ್ನನ್ನು ದಿವಗಂತ ಮಾಜಿ ಸಂಸದ ಆರ್.ಧ್ರುವನಾರಾಯಣ್ ಅವರು ರಾಜಕಾರಣಿ ಕರೆತಂದು ಈ ಮಟ್ಟಕ್ಕೆ ಬೆಳೆಸಿದರು ಎಂದು ಸ್ಮರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಕಳೆದ 15 ವರ್ಷಗಳಿಂದಲ್ಲೂ ಪ್ರಾಮಾಣಿಕವಾಗಿ ದುಡಿದ ನನ್ನನ್ನು ಪಕ್ಷ ಗುರುತಿಸಿ ಇಂದು ಸರ್ಕಾರಿ ವಕೀಲರನ್ನಾಗಿಸಿ ನೇಮಿಸಿದೆ. ನನ್ನ ಆಯ್ಕೆಗೆ ಕಾರಣರಾದ ಶಾಸಕರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಹಾಗೂ ಗ್ರಾಮದ ಮೂರ್ತಿ, ರವಿಗೌಡ ಹಾಗೂ ಪಕ್ಷದ ಅವರಿಗೆಲ್ಲ ಈ ಮೂಲಕ ಕೃತಜ್ಞತೆ ಸಲ್ಲಿಸಲಾಗುವುದು ಎಂದರು.

ಸ್ವಗ್ರಾಮ ಗ್ರಾಮಸ್ಥರು ನನ್ನನ್ನು ಸನ್ಮಾನಿಸುವ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚು ಮಾಡಿದ್ದಾರೆ.. ನನ್ನ ಅಧಿಕಾರದ ಅವಧಿಯಲ್ಲಿ ಗ್ರಾಮದ ಅಭಿವೃದ್ದಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಗ್ರಾ.ಪಂ.ಮಾಜಿ ಬಸವರಾಜು ಮಾತನಾಡಿ, ನಮ್ಮೂರಿನ ಅರುಣ್ ಕುಮಾರ್ ತುಂಬಾ ಕಷ್ಟದಿಂದ ಗ್ರಾಮದ ಶಾಲೆಯಲ್ಲಿ ವಿದ್ಯಾಭ್ಯಾಸ ಎಲ್ ಎಲ್ ಬಿ ಪದವಿ ಮಾಡಿದ್ದು ಇಂದು ಸರ್ಕಾರ ಅವರನ್ನು ಸರ್ಕಾರಿ ವಕೀಲರಾಗಿ ನೇಮಿಸಿರುವುದು ತುಂಬಾ ಖುಷಿ ತಂದಿದೆ. ಅವರು ಗ್ರಾಮದ ಯುವಕರಿಗೆ ಮಾದರಿಯಾಗಿದ್ದರು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ ಎಂದರು ಗ್ರಾಮದ ಯುವಕರು ವೈದ್ಯರು, ಸಬ್ ಇನ್ಪೆಕ್ಟರ್. ಸರ್ಕಾರಿ ವಕೀಲರು ಸೇರಿದಂತೆ ಇನ್ನಿತರ ಸರ್ಕಾರಿ ಕೆಲಸ ಸೇರಿದ್ದಾರೆ. ಒಳ್ಳೆಯ ಸ್ಥಾನಕ್ಕೆ ಹೋಗಿರುವ ನಿವೆಲ್ಲರೂ ಗ್ರಾಮದ ಅಭಿವೃದ್ಧಿ ಒತ್ತು ನೀಡಬೇಕು ಎಂದರು.

ಗ್ರಾ.ಪಂ. ಸದಸ್ಯ ಸಿದ್ದರಾಜು ಮಾತನಾಡಿ, ಅರುಣ್ ಕುಮಾರ್ ವಿದ್ಯಾರ್ಥಿ ದೆಸೆಯಲ್ಲಿ ನಾಯಕತ್ವ ಗುಣ ಹೊಂದಿದ್ದರು. ಇಂದು ಅವರು ಸರ್ಕಾರಿ ವಕೀಲರಾಗಿ ನೇಮಕಗೊಂಡಿರುವುದು ಗ್ರಾಮದ ಕೀರ್ತಿ ತಂದಿದೆ. ಅವರ ತಂದೆಯ ಹಾದಿಯಲ್ಲಿ ಸಾಗಿ ಗ್ರಾಮದ ಹೆಸರನ್ನು ಬೆಳಗುವಂತೆ ಮಾಡಿದ್ದಾರೆ. ಅವರಿಗೆ ನಾವೆಲ್ಲರೂ ಚಿರ ಋಣಿಯಾಗಿರೋಣ ಎಂದರು.
ಗ್ರಾ.ಪಂ.ಮಾಜಿ ಸದಸ್ಯ ಮೂರ್ತಿ ಮಾತನಾಡಿ, ಅರುಣ್ ಕುಮಾರ್ ಅವರ ತಂದೆ ರಂಗಸ್ವಾಮಿಯವರು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯಾಗಲು ಕಾರಣಿಭೂತರಾಗಿದ್ದರು ತಂದೆಯವರು ಹಾದಿಯಲ್ಲಿ ಅರುಣ್ ಕುಮಾರ್ ಗ್ರಾಮದಲ್ಲಿ ಅಭಿವೃದ್ಧಿ ಒತ್ತು ನೀಡಿ ಸಮಾಜಮುಖಿ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಈಗ ಸರ್ಕಾರಿ ವಕೀಲರಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸವನ್ನು ಮಾಡುವ ಮೂಲಕ ಇನ್ನು ಉನ್ನತ ಮಟ್ಟದಲ್ಲಿ ಬೆಳೆಯುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಯಜಮಾನರಾದ ರಾಜಣ್ಣ, ಮಹದೇವಸ್ವಾಮಿ,ಮಹದೇವಯ್ಯ, ಮೇಸ್ತ್ರಿ ಮಹದೇವಯ್ಯ, ಅಶೋಕ, ಗ್ರಾ.ಪಂ.ಮಾಜಿ ಸದಸ್ಯ ಮರ್ತಿ, ಮಾಜಿ ಅಧ್ಯಕ್ಷ ಬಸವರಾಜು, ರವಿಗೌಡ, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.