ಚಾಮರಾಜನಗರ: ನಗರದ ಸತ್ತಿರಸ್ತೆಯ ಸಾರಿಗೆ ಡಿಪೋನಲ್ಲಿ ಶ್ರೀವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಕೆಎಸ್ ಆರ್ ಟಿಸಿ ಜಿಲ್ಲಾಧಿಕಾರಿ ಅಶೋಕ್ ಕುಮಾರ್ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ ಮಾತನಾಡಿ, ಹಿಂದೂ ಧರ್ಮದ ಪ್ರಮುಖ ಗ್ರಂಥಗಳಲ್ಲಿ ಒಂದಾದ ರಾಮಾಯಣದ ಹಿಂದೂ ಮಹಾಕಾವ್ಯವನ್ನು ಬರೆದಿದ್ದಕ್ಕಾಗಿ ವಾಲ್ಮೀಕಿ ಅವರು ಅತ್ಯಂತ ಪ್ರಸಿದ್ಧರಾಗಿದ್ದಾರೆ.
ಇದು ಭಗವಾನ್ ವಿಷ್ಣುವಿನ ಎಂಟು ಅವತಾರಗಳ ಕಥೆಯನ್ನು ಹೇಳುತ್ತದೆ. ವಾಲ್ಮೀಕಿ ಅವರನ್ನು ಭಾರತದಲ್ಲಿ ದೇಶ ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಮೂಲತಃ ವಾಲ್ಮೀಕಿ ಬರೆದ ರಾಮಾಯಣವು 24,000 ಶ್ಲೋಕಗಳನ್ನು ಒಳಗೊಂಡಿದೆ. ರಾಮಾಯಣವು ಸುಮಾರು 480,002 ಪದಗಳಿಂದ ಕೂಡಿದೆ. ಇದು ಮಹಾಭಾರತದ ಪೂರ್ಣ ಪಠ್ಯದ ಕಾಲು ಭಾಗವಾಗಿದೆ. ವಾಲ್ಮೀಕಿಯರ ತತ್ವಾದರ್ಶಗಳ ಮೈಗೂಡಿಸಿಕೊಂಡು ಸಾಗೋಣ ಎಂದರು.
ನಿವೃತ್ತ ಪ್ರಾಂಶುಪಾಲ ಬಂಗಾರನಾಯಕ ಮಾತನಾಡಿ, ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಎಲ್ಲ ಭಾಷೆಗಳಲ್ಲೂ ತರ್ಜುಮೆಯಾಗಿದೆ ಎಂದರು.
ಸಿದ್ದಲಿಂಗಸ್ವಾಮಿ ಹೊಂಗನೂರು ಮಾತನಾಡಿ, ವಾಲ್ಮೀಕಿ ರಾಮಾಯಣ ಜಗತ್ತಿನಲ್ಲಿ ಮನ್ನಣೆ ಪಡೆದುಕೊಂಡಿರುವ ಹಿನ್ನಲೆಯಲ್ಲಿ ವಾಲ್ಮೀಕಿ ಜಯಂತಿಯನ್ನು ಭಾರತ ಸರ್ಕಾರ ಆಚರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆ.ಆರ್.ನಾಗರಾಜು ಕೆಲ್ಲಂಬಳ್ಳಿ, ರುದ್ರಮುನಿ,, ರಶ್ಮಿ, ಚಂದ್ರಕಾಂತಿ, ಚಂದ್ರಮೌಲಿ,, ಕುಮಾರನಾಯಕ, ಸೋಮಣ್ಣ, ರಾಚನಾಯಕ, ಮಹದೇವನಾಯಕ, ಜಗದೀಶ್ ಜ್ಯೋತಿಗೌಡನಪುರ ಇತರರು ಹಾಜರಿದ್ದರು.