ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೆ.೨೭ ರಂದು ಬುಧವಾರ ನಗರಕ್ಕೆ ಭೇಟಿ ನೀಡುವ ಹಿನ್ನಲೆಯಲ್ಲಿ ನಗರಸಭಾ ವತಿಯಿಂದ ಸ್ವಚ್ಚತಾ ಕಾರ್ಯ ಆರಂಭಗೊ0ಡಿದ್ದು, ನಗರದಲ್ಲಿ ಧೂಳು ಸ್ವಚ್ಚ ಮಾಡುವ ವಾಹನ ನಡೆಯುತ್ತಿರುವ ಸ್ವಚ್ಚತಾ ಕಾರ್ಯವನ್ನು ನಗರಸಭಾ ಪೌರಾಯುಕ್ತ ರಾಮದಾಸ್ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ರಾಮದಾಸ್ ಮಾತನಾಡಿ, ಸೆ. 17 ರಂದು ಬುಧವಾರ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ನೀಡುವ ಹಿನ್ನಲೆಯಲ್ಲಿ ನಂಜನಗೂಡು ನಗರಸಭೆ ವತಿಯಿಂದ ಧೂಳು ಸ್ವಚ್ಚಗೊಳಿಸುವ ವಾಹನವನ್ನು ತರಿಸಿ ನಗರದೆಲ್ಲೆಡೆ ರಸ್ತೆಯಲ್ಲಿರುವ ಧೂಳು, ಕಸವನ್ನು ಸ್ವಚ್ಚಗೊಳಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಸುಷ್ಮಾ, ಸಿಬ್ಬಂದಿ ಹಾಜರಿದ್ದರು.