ಚಾಮರಾಜನಗರ: ಹೋಬಳಿ ಕೇಂದ್ರವಾಗಿರುವ ತಾಲೂಕಿನ ಹರವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್ ಹಾಗೂ ಡಿ ಗ್ರೂಪ್ ನೌಕರರು ಇಲ್ಲದೇ ರೋಗಗಳಿಗೆ ತೊಂದರೆಯಾಗಿದ್ದು. ತಕ್ಷಣವೇ ಇಬ್ಬರು ನರ್ಸ್ ಹಾಗು ಇಬ್ಬರು ಡಿ.ಗ್ರೂಪ್ ನೌಕರರನ್ನು ನೇಮಕ ಮಾಡುವಂತೆ ಹರವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀರೀಶ್ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಢಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಹರವೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆದರು.
ಹರವೆ ಪ್ರಾಥಮಿಕ ಆರೋಗ್ಯ ಕೇಂದ್ರ ೨೪*೭ ಅಸ್ಪತ್ರೆಯಾಗಿದ್ದು, ಹೀಗಾಗಿ ಪ್ರತಿನಿತ್ಯ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನರು ಅಸ್ಪತ್ರೆಗೆ ಬರುತ್ತಿದ್ದಾರೆ. ಪ್ರಸ್ತುತ ಅಸ್ಪತ್ರೆಯಲ್ಲಿ ಇಬ್ಬರು ಶುಶ್ರೂಷಕರಿರಿದ್ದರು. ಒಬ್ಬರು ಹೆರಿಗೆ ರಜಾ ಮೇಲೆ ತೆರಳಿದ್ದಾರೆ. ಒಬ್ಬರೇ ಡಿ ಗ್ರೂಪ್ ನೌಕರರಿದ್ದಾರೆ. ವೈದ್ಯರು ಕರ್ತವ್ಯ ನಿರ್ವಹಿಸುವಾಗ ನರ್ಸ್ ಹಾಗೂ ಡಿ ಗ್ರೂಪ್ ನೌಕರರ ಕೊರತೆ ಇದೆ. ಅಸ್ಪತ್ರೆಯಲ್ಲಿ ನೌಕರರ ಕೊರತೆಯಿಂದಾಗಿ ಹೆರಿಗೆ ಸೌಲಭ್ಯ ಸೇರಿದಂತೆ ನಿರಂತರ ಆರೋಗ್ಯ ಸೇವೆಯನ್ನು ನೀಡಲು ತೊಂದರೆಯಾಗುತ್ತದೆ, ಕೂಡಲೇ ಅಸ್ಪತ್ರೆಗೆ ಅಗತ್ಯ ನೌಕರರನ್ನು ನೇಮಕ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸಲ್ಲಿಸುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶಿಲ್ಪನಾಗ್ ಅವರು ಕೂಡಲೇ ನರ್ಸ್ ಹಾಗೂ ಡಿ. ಗ್ರೂಪ್ ನೌಕರರನ್ನು ನಿಯೋಜನೆ ಮಾಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಹದೇವಸ್ವಾಮಿ . ಕೇತಹಳ್ಳಿ ಮಾದಪ್ಪ. ಬಿಜೆಪಿ ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಇತರರು ಇದ್ದರು.