

ಚಾಮರಾಜನಗರ: ಶ್ರೀ ವಿದ್ಯಾ ಗಣಪತಿಯ ಮಂಡಳಿಯಿಂದ ಕೂರಿಸಲಾಗಿದ್ದ ಶ್ರೀ ಸುದರ್ಶನ ಗಣಪತಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಜನಪದ ಕಲಾ ತಂಡಗಳಾದ ಮಂಗಳವಾದ್ಯ, ಗೊರವನ ಕುಣಿತ, ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ನಂದಿ ಕಂಬ, ಬ್ಯಾಂಡ್ಸೆಟ್, ಗಾರುಡಿ ಗೊಂಬೆ, ಪೂಜಾ ಕುಣಿತ, ಮಹಿಳಾ ವೀರಗಾಸೆ, ನಾಸಿಕ್ ಡೊಳ್ಳು, ಸೋಮನ ಕುಣಿತ, ಹುಲಿ ವೇಷ, ಮಂಗಳೂರು ಯಕ್ಷಗಾನ ಗೊಂಬೆ, ನಗಾರಿ, ತಮಟೆ ಹಾಗೂ ಇತರೆ ಕಲಾ ತಂಡಗಳೊಡನೆ ವಿಜೃಂಭಣೆಯಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಶ್ರೀ ಗುರುನಂಜಶೆಟ್ಟರ ಛತ್ರದ ಮುಂಭಾಗದಿಂದ ಹೊರಟು ಖಡಕ್ಪುರ ಮೊಹಲ್ಲಾ, ಡಾ. ಬಿ.ಆರ್. ಅಂಬೇಡ್ಕರ್ ಬೀದಿ, ಡೀವಿಯೇಷನ್ ರಸ್ತೆ, ದೇವಾಂಗ 3ನೇ ಬೀದಿ, ನಾಗಪ್ಪಶೆಟ್ಟರ ಚೌಕ, ದೊಡ್ಡ ಅಂಗಡಿ ಬೀದಿ, ಗಾಡಿಪೇಟೆ ಚೌಕ, ಮೇಗಲ ನಾಯಕರ ಬೀದಿ, ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ, ನಾಗಪ್ಪ ಶೆಟ್ಟರ ಚೌಕ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇ ಮರಹಳ್ಳಿ ವೃತ್ತ, ವೀರ ಮದಕರಿ ನಾಯಕರ ಬೀದಿ, ಶ್ರೀ ಭಗೀರಥ ಉಪ್ಪಾರ ಬಡಾವಣೆ, ಶ್ರೀ ಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭಮರಾಂಬ 2ನೇ ಕ್ರಾಸ್, ಭಮರಾಂಬ 1 ನೇ ಕ್ರಾಸ್, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ನಗರಸಭಾ ಕಛೇರಿ ರಸ್ತೆ, ಚಮಾಲ್ ಬೀದಿ, ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜೈನರ ಬೀದಿ, ಕೊಳದ ಬೀದಿ ಮುಖಾಂತರ ಹೊರಟು ಶ್ರೀ ದೊಡ್ಡರಸನ ಕೊಳದಲ್ಲಿ ಬಾಣ ಬಿರುಸುಗಳ ಕಾರ್ಯಕ್ರಮಗಳೊಂದಿಗೆ ಶ್ರೀ ವಿದ್ಯಾ ಗಣಪತಿಯನ್ನು ಮಧ್ಯರಾತ್ರಿ ಗಂಟೆಗೆ ವಿಸರ್ಜಿಸಲಾಗುವುದು. ಸಾವಿರಕ್ಕೂ ಹೆಚ್ಚು ಪೆÇಲೀಸರು ಶ್ರೀ ಮೆರವಣಿಗೆಯಲ್ಲಿ ಭಾಗವಹಿಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ಶಿಲ್ಪನಾಗ್, ಅಪಾರ ಜಿಲ್ಲಾಧಿಕಾರಿ ಗೀತಾ ಹುಡದ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ, ಡಿವೈಎಸ್ಪಿ ಲಕ್ಷ್ಮಯ್ಯ, ಅನ್ಸರ್ಅಲಿ, ಸೋಮಣ್ಣ. ಗಣಪತಿ ಮಂಡಳಿ ಅಧ್ಯಕ್ಷ ಕೃಷ್ಣ ಕುಮಾರ್, ಕಾರ್ಯದರ್ಶಿ ವಿರಾಟ್ ಶಿವು, ಎಸ್.ಬಾಲಸುಬ್ರಹ್ಮಣ್ಯಂ. ಸುರೇಶ್ ನಾಯ್ಕ, ಗಣೇಶ ದೀಕ್ಷಿತ್, ನಂದೀಶ್, ಮಾದೇವ, ಸುದರ್ಶನ್ ಗೌಡ, ನಾಯಕ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಜಿ ಬಂಗಾರು, ಅಜಿತ್ ಸೇರಿದಂತೆ ಗಣಪತಿ ಮಂಡಳಿ ಸದ್ಯಸರು ಹಾಜರಿದ್ದರು.


