ಚಾಮರಾಜನಗರ: ಚಾಮರಾಜನಗರ ವಲಯ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ದಾಖಲಿಸಲಾದ ವಿವಿಧ ಪ್ರಕರಣಗಳಲ್ಲಿ ಜಫ್ತುಪಡಿಸಿದ 487.560 ಲೀ ಮದ್ಯ ಹಾಗೂ 76.900 ಲೀ ಬಿಯರ್ ಅನ್ನು (ಅಂದಾಜು ಮೌಲ್ಯ 2,30,000 ರೂ) ಚಾಮರಾಜನಗರ ವಲಯ ಕಚೇರಿಯ ಆವರಣದಲ್ಲಿ ಚಾಮರಾಜನಗರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಎಂ.ಡಿ. ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ಇಂದು ನಾಶಪಡಿಸಲಾಯಿತು.
ಈ ಪ್ರಕ್ರಿಯೆಯಲ್ಲಿ ವಲಯ ಅಬಕಾರಿ ನಿರೀಕ್ಷಕರಾದ ಸಿ.ಎಂ. ಮಹದೇವ, ಚಾಮರಾಜನಗರ ಉಪವಿಭಾಗ ಅಬಕಾರಿ ನಿರೀಕ್ಷಕರಾದ ಎಂ.ಬಿ. ಉಮಾಶಂಕರ್, ಚಾಮರಾಜನಗರ ತಾಲೂಕು ಕಚೇರಿಯ ಗ್ರಾಮ ಆಡಳಿತ ಅಧಿಕಾರಿ ಎಸ್. ಉಜ್ವಲ್, ಕೆ.ಎಸ್.ಬಿ.ಸಿ.ಎಲ್. ಡಿಪೋ ಸಹಾಯಕ ವ್ಯವಸ್ಥಾಪಕರಾದ ಕೆ.ಎಂ. ಸಿದ್ದರಾಜು ಹಾಗೂ ಚಾಮರಾಜನಗರ ವಲಯದ ಸಿಬ್ಬಂದಿಗಳಾದ ಆರ್. ರಾಜೇಶ್, ಸಿ. ಮಣಿಕಂಠ, ಆರ್. ರಾಜು ಹಾಜರಿದ್ದರು.