ಚಾಮರಾಜನಗರ: ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ರಾಜಕೀಯ ರಂಗದಿಂದ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. ಇಂದು ಅವರ ನಿರ್ಮಾಣದ ಅಭಿರಾಮಚಂದ್ರ ಚಲನಚಿತ್ರ ತೆರೆ ಕಂಡಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ರೈತ ಚಳವಳಿಯ ಮೂಲಕ ಪ್ರಖ್ಯಾತಿಯನ್ನು ಹೊಂದಿದ್ದ ರೈತ ಮುಖಂಡ ಮಲ್ಲೇಶ್, ನಂತರ ರಾಜಕೀಯಕ್ಕೆ ಪ್ರವೇಶ ಮಾಡಿ, ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಶಾಸಕರೆಂಬ ಕನಸುಕಟ್ಟಿಕೊಂಡು ರಾಜಕೀಯವಾಗಿ ಸಮಾಜ ಸೇವೆ, ಕ್ಷೇತ್ರದ ಜನರ ಸೇವೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ತೊಡಗಿಸಿಕೊಂಡಿದ್ದರು. ಈಗ ರಾಜಕೀಯ ದಿಂದ ಬೇಸತ್ತು ಚಲನಚಿತ್ರ ರಂಗದತ್ತ ಮುಖ ಮಾಡಿದ್ದಾರೆ.
ಪ್ರಪ್ರಥಮವಾಗಿ ಅವರ ಸ್ವಂತ ಅಣ್ಣನ ಮಗ ರಥ ಕಿರಣ್ ನಾಯಕ ನಟನಾಗಿ ಅಭಿನಯಿಸಿರುವ ಅಭಿರಾಮಚಂದ್ರ ಚಲನಚಿತ್ರಕ್ಕೆ ನಿರ್ಮಾಪಕರಾಗಿ ಚಲನಚಿತ್ರ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅ. 6 ರಂದು ನಗರದ ಸಿಂಹ ಮೂವೀಸ್ ಪ್ಯಾರಡೈಸ್ ಚಿತ್ರ ಮಂದಿರ ಸೇರಿ, ಬೆಂಗಳೂರು ಹಾಗು ಇತರೇ ಭಾಗಗಳಲ್ಲಿ ಏಕಕಾಲಕ್ಕೆ ಚಿತ್ರ ಪ್ರದರ್ಶನವಾಗುವಂತೆ ನೋಡಿಕೊಂಡಿದ್ದಾರೆ. ಅಲ್ಲದೇ ಚಿತ್ರದ ಬಗ್ಗೆ ಪೇಕ್ಷರರಲ್ಲಿ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಚಿತ್ರ ಕ್ಯಾಮಾಕ್ಸ್ ಬಹಳ ಅದ್ಬುತವಾಗಿ ಮೂಡಿ ಬಂದಿದೆ ಎಂದು ಸಿನಿ ರಸಿಕರು ಚಿತ್ರಮಂದಿರದಿಂದ ಹೊರ ಬಂತು ಹೇಳುತ್ತಿದ್ದಾರೆ.
ಚಾ.ನಗರದಲ್ಲಿ ಸಿಂಹ ಮೂವೀಸ್ ನಲ್ಲಿ ಪ್ರಥಮ ಪ್ರದರ್ಶನ ವೀಕ್ಷಿಸಿದ ಬಳಿಕ ಮಾತನಾಡಿದ ನಿರ್ಮಾಪಕ ಮಲ್ಲೇಶ್, ಚಾಮರಾಜನಗರ ಜಿಲ್ಲೆಯ ಮೇರುನಟ ಡಾ.ರಾಜಕುಮಾರ್ ಅವರನ್ನು ಕೊಟ್ಟಂತ ಜಿಲ್ಲೆಯಾಗಿದೆ. ಬಹಳಷ್ಟು ಕಲಾವಿದರು ಜಿಲ್ಲೆಯಲ್ಲಿದ್ದು, ಅವರಿಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ಬಂದಿದ್ದೇನೆ.
ಅಭಿರಾಮಚಂದ್ರ ಚಲನಚಿತ್ರ ಬಹಳ ವೈಶಿಷ್ಯ ಪೂರ್ಣವಾದ ಸದಾಭಿರುಚಿಯ ಚಿತ್ರವಾಗಿದೆ. ಮನೆ ಮಂದಿ ಎಲ್ಲರು ಒಟ್ಟಿಗೆ ಕುಳಿತು ನೋಡುವಂತೆ ಉತ್ತಮ ಚಿತ್ರ. ಈ ಕಾರಣಕ್ಕಾಗಿ ಈ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದೇನೆ. ಚಿತ್ರದ ಕ್ಯಾಮಾಕ್ಸ್ ಬಹಳ ಅದ್ಭುತವಾಗಿ ಪೇಕ್ಷಕರ ಹೃದಯವನ್ನು ಗೆದ್ದಿದೆ. ರಾಜ್ಯಾದ್ಯಂತ ಚಿತ್ರಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜಿಲ್ಲೆಯ ಜನರು ಸಹ ನಮ್ಮೂರಿನ ಯುವ ನಟ ರಥಕಿರಣ್ ನಟಿಸಿರುವ ಅಭಿರಾಮಚಂದ್ರ ಚಲನಚಿತ್ರವನ್ನು ನೋಡುವ ಮೂಲಕ ಯುವ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಮಲ್ಲೇಶ್ ಮನವಿ ಮಾಡಿದ್ದಾರೆ.