ಅಮಚವಾಡಿ ಡೇರಿ ಕೈ ವಶ : ಅಧ್ಯಕ್ಷರಾಗಿ ಶಿವಕುಮಾರಸ್ವಾಮಿ, ಉಪಾಧ್ಯಕ್ಷರಾಗಿ ಲಕ್ಷ್ಮಮ್ಮ ಆಯ್ಕೆ

ಚಾಮರಾಜನಗರ: ತಾಲೂಕಿನ ಅಮಚವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ – ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಶಿವಕುಮಾರಸ್ವಾಮಿ ಹಾಗೂ ಲಕ್ಷ್ಮಮ್ಮ ಇಂದು ಆಯ್ಕೆಯಾದರು.

ಗ್ರಾಮದ ಸಹಕಾರ ಸಂಘದ ಕಚೇರಿಯಲ್ಲಿ ಇಂದು ನಡೆದ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವಕುಮಾರಸ್ವಾಮಿ ಹಾಗೂ ಶಂಕರಶೆಟ್ಟಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಮ್ಮ ಹಾಗೂ ವಿರಾಜನಾಯಕ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ನಡೆದು ಶಿವಕುಮಾರಸ್ವಾಮಿಮತ್ತು ಲಕ್ಷ್ಮಮ್ಮ ತಲಾ ೯ ಮತಗಳನ್ನು ಪಡೆದು ಅಧ್ಯಕ್ಷ-ಉಪಾಧ್ಯಕ್ಷರಾದರೆ, ಶಂಕರಶೆಟ್ಟಿ ಮತ್ತು ವಿರಾಜನಾಯಕ ತಲಾ ೪ ಮತಗಳನ್ನು ಪಡೆದುಕೊಂಡರು. ಚುನಾವಣಾಧಿಕಾರಿಯಾಗಿದ್ದ ಎಂ.ಕೆ. ತ್ಯಾಗರಾಜ್ ಅವರು ಅಧ್ಯಕ್ಷರಾಗಿ ಶಿವಕುಮಾರಸ್ವಾಮಿ, ಉಪಾಧ್ಯಕ್ಷರಾಗಿ ಲಕ್ಷ್ಮಮ್ಮ ಅವರು ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ನೂತನ ಅಧ್ಯಕ್ಷ ಶಿವಕುಮಾರಸ್ವಾಮಿ ಮಾತನಾಡಿ, ಗ್ರಾಮದ ಮುಖಂಡರು ಹಾಗೂ ಸಂಘದ ನಿರ್ದೇಶಕರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಡೇರಿಯನ್ನು ಅಭಿವೃದ್ದಿ ಪಡಿಸುವ ಜೊತೆಗೆ ಒಕ್ಕೂಟ ಮತ್ತು ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ಕಲ್ಪಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಚಿಕ್ಕಸ್ವಾಮಿ, ಮಲ್ಲೇಗೌಡ, ಮಹದೇವೇಗೌಡ, ದುಂಡಶೆಟ್ಟಿ, ಸೆಂದಿಲ್‌ಕುಮಾರ್, ರಾಜಮ್ಮ, ಬಸವರಾಜು, ಬಸವಣ್ಣ, ನಾಗನಾಯಕ, ಸಿಇಓ ಶ್ರೀಕಾಂತರಾಜ್ ಅರಸು, ಎಪಿಎಂಸಿ ಮಾಜಿ ಅಧ್ಯಕ್ಷ ಎ.ಎಸ್. ತೀರ್ಥೇಶ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ನಾಗಸುಂದರ್, ಗ್ರಾ.ಪಂ. ಸದಸ್ಯ ಪ್ರಸಾದ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *