ಅಮಚವಾಡಿ ಪಿಎಸಿಸಿ ಬ್ಯಾಂಕ್‍ಗೆ 1.10 ಲಕ್ಷ ರೂ. ನಿವ್ವಳ ಲಾಭ

ರೈತರಿಗೆ 3.18 ಕೋಟಿ ರೂ. ಸಾಲ ವಿತರಣೆ : ಸೋಮಶಂಕರ ಮೂರ್ತಿ
ಚಾಮರಾಜನಗರ: ತಾಲೂಕಿನ ಅಮಚವಾಡಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಪ್ರಸಕ್ತ ವರ್ಷದಲ್ಲಿ 1.10 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸೋಮಶಂಕರ ಮೂರ್ತಿ ತಿಳಿಸಿದರು.

ಗ್ರಾಮದ ಪ್ರಾಥಮಿಕ ಶಾಲೆಯ ಅವರಣದಲ್ಲಿ ನಡೆದ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ವರ್ಷ 326 ಮಂದಿಗೆ ರೈತರಿಗೆ 3.18 ಲಕ್ಷ ರೂಗಳ ಕೃಷಿ ಸಾಲವನ್ನು ನೀಡಲಾಗಿದೆ. ಇದುವರೆಗೆ 280ಕ್ಕು ಹೆಚ್ಚು ಸದಸ್ಯರಿಗೆ 4.57 ಕೋಟಿ ರೂ.ಗಳ ಸಾಲ ನೀಡಲಾಗುತ್ತಿದೆ. ಪಡಿತರವನ್ನು ಸಮರ್ಪಕವಾಗಿ ಪಡಿತರರಿಗೆ ವಿತರಣೆ ಮಾಡುವ ಮೂಲಕ ಚನ್ನಪ್ಪನಪುರ, ಅಮಚವಾಡಿ ಗ್ರಾಮಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.ಸಂಘ ಸದಸ್ಯರು ಸರ್ಕಾರ ಸಾಲ ಸೌಲಭ್ಯವನ್ನು ಪಡೆದುಕೊಂಡು ಶೂನ್ಯ ಬಡ್ಡಿ ದರದಲ್ಲಿ ಸಕಾದಲ್ಲಿ ಸಾಲ ಮರು ಪಾವತಿ ಮಾಡಬೇಕು ಎಂದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರು ಹಾಗೂ ಸಂಘದ ನಿರ್ದೇಶಕ ನಾಗಸುಂದರ್ ಮಾತನಾಡಿ, ಗ್ರಾಮದಲ್ಲಿ ಸಹಕಾರ ರಚನೆಯಾಗಿರುವ ಕಾರಣದಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ದೊರೆಯುತ್ತಿದೆ. ಪಡಿತರ ಪದಾರ್ಥಗಳನ್ನು ಸಂಘದ ಕೆಲಸದ ಅವಧಿಯಲ್ಲಿ ಎಲ್ಲರು ಪಡೆದುಕೊಳ್ಳಲು ಅವಕಾಶವಿದೆ. ಇನ್ನು ಸರ್ಕಾರ ಯಶಸ್ವಿ ಸೌಲಭ್ಯಗಳನ್ನು ಪಡೆದುಕೊಂಡು ರೈತರು ಆರ್ಥಿಕ ಅಭಿವೃದ್ದಿಯನ್ನು ಹೊಂದಬೇಕು ಎಂದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಎಚ್. ಜೋಷಿ ಅವರು ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆಯನ್ನು ಪಡೆದುಕೊಂಡರು. ಹೆಚ್ಚುವರಿ ಸೇರಿ 500 ರೂ. ಕಟ್ಟಿ ಸಂಘದ ಸದಸ್ಯತ್ವವನ್ನು ನವೀಕರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಹಾಸಭೆ ಅಹ್ವಾನ ಪತ್ರಿಕೆ ತಲುಪದಿರುವ ಬಗ್ಗೆ ಸದಸ್ಯರು ಅಕ್ಷೇಪ ವ್ಯಕ್ತಪಡಿಸಿದರು. ಪಡಿತರ ವಿತರಣೆಯಲ್ಲಿ ಕೆಲವು ಲೋಪವಾಗುತ್ತಿದೆ. ಸಂಬಂಧಪಟ್ಟವರು ಸರಿಯಾಗಿ ವಿತರಣೆಯಾಗಬೇಕು. ನ್ಯಾಯಬೆಲೆ ಅಂಗಡಿಗೆ ಸೇರ್ಪಡೆಯಾಗಿರುವ 70 ಕಾರ್ಡುಗಳನ್ನು ಸೊಸೈಟಿಗೆ ಸೇರ್ಪಡೆ ಮಾಡಿಕೊಂಡು ಸಮರ್ಪಕವಾಗಿ ವಾರದ ಎಲ್ಲಾ ದಿನಗಳು ಸಹ ಕಚೇರಿ ವೇಳೆಯಲ್ಲಿ ಪಡಿತರ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಇಂದ್ರೇಶ್ ಕುಮಾರ್, ನಿರ್ದೇಶಕರಾz ನಾಗಸುಂದರ್, ಟಿ.ಬಿ. ಬಸವರಾಜು, ಎ.ಎನ್. ಸತೀಶ್, ಕತ್ತಿನಾಯಕ, ದೊಡ್ಡಶೆಟ್ಟಿ, ಎ.ಎಂ. ಮಣಿ, ನಂಜುಂಡಸ್ವಾಮಿ, ಕೆಂಪರಾಜೇ ಅರಸು, ಮಲ್ಲಾಜಮ್ಮ, ನೌಕರರಾದ ನಾಗಾಜು, ಎ.ಎಸ್. ನಾಗೇಶ್, ಎ.ಜಿ. ಕುಮಾರಸ್ವಾಮಿ, ಎಸ್. ರವಿಕುಮಾರ್ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *