ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಾಗಸುಂದರ ಉಪಾಧ್ಯಕ್ಷರಾಗಿ ಎ.ಎಂ. ಮಣಿ ಅವಿರೋಧವಾಗಿ ಇಂದು ಆಯ್ಕೆಯಾದರು.

ಸಂಘದ ಅಧ್ಯಕ್ಷರಾಗಿದ್ದ ಸೋಮಶಂಕರ ಮೂರ್ತಿ, ಉಪಾಧ್ಯಕ್ಷ ಇಂದ್ರೇಶಕುಮಾರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ಘೋಷಣೆಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಾಗಸುಂದರ ಉಪಾಧ್ಯಕ್ಷ ಸ್ಥಾನಕ್ಕೆ ಎ.ಎಂ. ಮಣಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ದಿ ಅಧಿಕಾರಿ ತ್ಯಾಗರಾಜು ಅವರು ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಸಂಘದ ಬಲವರ್ಧನೆ ಹಾಗೂ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲು ಬದ್ದ : ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಅಮಚವಾಡಿ ನಾಗಸುಂದರ ಅಧಿಕಾರ ವಹಿಸಿಕೊಂಡು ಮಾತನಾಡಿ, ಸಂಘದ ಎಲ್ಲಾ ನಿರ್ದೇಶಕರು ಒಮ್ಮತದಿಂದ ಅವಿರೋಧವಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಆಬಾರಿಯಾಗಿದ್ದೇನೆ. ಎಲ್ಲಾ ನಿರ್ದೇಶಕರ ಸಹಕಾರ ಮತ್ತು ವಿಶ್ವಾಸದೊಂದಿಗೆ ಬ್ಯಾಂಕ್ ಅಭಿವೃದ್ದಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಗ್ರಾಮದಲ್ಲಿ ಸಹಕಾರ ಸಂಘ ಬೆಳೆದಷ್ಟು ರೈತರು ಅಭಿವೃದ್ದಿಯಾಗಲಿದ್ದಾರೆ..ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತ ಕಲ್ಯಾಣಕ್ಕಾಗಿ ಬಿಡುಗಡೆಯಾಗುವ ಅನುದಾನವನ್ನು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳುವ ಜೊತೆಗೆ ಸಂಘದಿಂದ ಹೆಚ್ಚಿನ ರೀತಿಯಲ್ಲಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಬೆಳೆ ಸಾಲ ಸೌಲಭ್ಯ ಕೊಡಿಸುವುದು ನಮ್ಮ ಮೊದಲ ಅದ್ಯತೆಯಾಗಿದೆ.
ಸಭೆಯಲ್ಲಿ ಸಂಘದ ನಿಗರ್ಮಿತ ಅಧ್ಯಕ್ಷ ಸೋಮಶಂಕರಮೂರ್ತಿ, ಉಪಾಧ್ಯಕ್ಷ ಇಂದ್ರೇಶ್ ಕುಮಾರ್ ನಿರ್ದೇಶಕರಾದ ಕೆಂಪರಾಜೇಆರಸ್, ಬಸವರಾಜು, ಸತೀಶ್, ಕತ್ತಿ ನಾಯಕ, ದೊಡ್ಡಶೆಟ್ಟಿ, ನಂಜುಂಡಸ್ವಾಮಿ, ಮಲ್ಲಾಜಮ್ಮ, ಸರ್ವಮಂಗಳ, ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಸತೀಶ್ ಜೋಷಿ, ನೌಕರರು ಇದ್ದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಎಪಿಎಂಸಿ ಮಾಜಿ ಅಧ್ಯಕ್ಷ ಎ.ಎಸ್. ತೀರ್ಥೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ಅಮಚವಾಡಿ ಗ್ರಾ.ಪಂ. ಅಧ್ಯಕ್ಷೆ ತೇಜÀಸ್ವಿನಿ,ಗ್ರಾ.ಪಂ. ಸದಸ್ಯರಾದ ಮಹೇಶ್, ನಂಜುಂಡಸ್ವಾಮಿ, ಚನ್ನಪ್ಪನಪುರ ಪ್ರಸಾದ್, ಯರಗನಹಳ್ಳಿ ಬಸವಣ್ಣ, ಮುಖಂಡರಾದ ಎನ್.ಆರ್. ಪುರುಷೋತ್ತಮ್, ತೊರವಳ್ಳಿ ಕುಮಾರ್ ಮೊದಲಾಧವರು ಅಭಿನಂದಿಸಿದರು.