ಮೈಸೂರು: ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ ಹಾಗೂ ಐಇಇಇ ಸಹಯೋಗದಲ್ಲಿ ಆಯೋಜನೆಗೊಂಡ ಕ್ಲೌಡ್‍ಕಂಪ್ಯೂಟಿಂಗ್ ಇನ್ ಎಮಜಿರ್ಂಗ್ ಮಾರ್ಕೆಟ್‍ನ ಕುರಿತ 12 ನೇ ಐಇಇಇ ಅಂತರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ನಡೆಯಿತು.
ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಕ್ಲೌಡ್‍ಕಂಪ್ಯೂಟಿಂಗ್‍ನ ವಿವಿಧ ಅನ್ವಯಗಳು, ಬಹುಮುಖಿ ಸಾಧ್ಯತೆಗಳ ಬಗ್ಗೆ ಈ ವಿಚಾರ ಸಂಕಿರಣವು ಮಾಹಿತಿ ಒದಗಿಸಿತು. ಹಾಗೆಯೇ ಈ ಕ್ಷೇತ್ರದ ವಿಭಿನ್ನ ಸವಾಲುಗಳನ್ನು ಗುರುತಿಸುವ ಹಾಗೂ ಅವುಗಳಲ್ಲಿನ ಸಂಶೋಧನಾ ಅವಕಾಶಗಳ ಬಗ್ಗೆ ಈ ವಿಚಾರ ಸಂಕಿರಣ ಬೆಳಕು ಚೆಲ್ಲಿತು.

ಅಂತರಾಷ್ಟ್ರೀಯ ವಿಚಾರ ಸಂಕಿರಣದ ಭಾಗವಾಗಿ ವಿವಿಧ ದಿಕ್ಸೂಚಿ ಭಾಷಣಗಳನ್ನು ಮಂಡನೆ ಮಾಡಲಾಯಿತು. ನ್ಯೂ ಸ್ಟ್ರೀಟ್ ಟೆಕ್ನಾಲಜಿಯ ಸಿಇಒ ಸೆಂಥಿಲ್‍ನಾಥನ್; ನ್ಯೂಯಾರ್ಕ್‍ನ ಸ್ಟೇಟ್‍ಯುನಿವರ್ಸಿಟಿ ಆಫ್ ನ್ಯೂಯಾರ್ಕ್, ಬಫಾಲೋನ ಪೆÇ್ರ.ರಾಮ್‍ರಮೇಶ್; ಅಕ್ಸೆಂಚರ್‍ಇಂಡಿಯಾದ ಹೈಬ್ರಿಡ್‍ಡೇಟಾ ಮತ್ತು ಎಐ ನ ಪ್ರಗ್ಯಾ ಶರ್ಮಾ; ಕಿಂಡ್ರಿಲ್‍ನಡೇಟಾ ಸೈನ್ಸ್‍ನ ನಿರ್ದೇಶಕರಾದ ಡಾ.ಶೀಲಾ ಸಿದ್ದಪ್ಪ; ದಿ ನಡ್ಜ್ ಇನ್ಸಿಟಿಟ್ಯೂಟ್‍ನ ಡಿಜಿಟಲ್ ಅಗ್ರಿಕಲ್ಚರ್‍ನ ಮ್ಯಾನೇಜಿಂಗ್ ಡೈರೆಕ್ಟರ್ ರವಿ ತ್ರಿವೇದಿ; ಸ್ಯಾನ್ ಆಂಟೋನಿಯೋನ ಯುನಿವರ್ಸಿಟಿ ಆಫ್‍ಟೆಕ್ಸಾಸ್‍ನ ಪೆÇ್ರ.ಎಚ್.ರಾಘವ್‍ರಾವ್; ಭಾರತ ಸರಕಾರದ ಗೃಹ ಸಚಿವಾಲಯದ ಇಂಡಿಯನ್ ಸೈಬರ್‍ಕ್ರೈಮ್‍ಕೋಆರ್ಡಿನೇಶನ್ ಸೆಂಟರ್‍ನ ಸೀನಿಯರ್ ಕನ್ಸಲ್ಟಂಟ್‍ರುಷಿ ಮೆಹ್ತಾ; ಮೈಕ್ರೊಸಾಫ್ಟ್‍ನ ಪ್ರಿನ್ಸಿಪಲ್‍ಇಂಜಿನಿಯರ್ ವೆಂಕಟೇಶ್ ನಾರಾಯಣನ್ ಸಂಕಿರಣದ ದಿಕ್ಸೂಚಿ ಭಾಷಣಗಳನ್ನು ಮಾಡಿದರು.
ವಿಚಾರ ಸಂಕಿರಣದಲ್ಲಿಕೃತಕ ಬುದ್ಧಿಮತ್ತೆ ಹಾಗೂ ಈ ಕ್ಷೇತ್ರದಲ್ಲಿನ ಅವಕಾಶಗಳ ಕುರಿತಂತೆ ಪ್ಯಾನೆಲ್‍ಡಿಸ್ಕಶನ್ ನಡೆಯಿತು. ಪ್ರಗ್ಯಾನ್‍ಡೇಟಾ ಲ್ಯಾಬ್ಸ್‍ನಡಾ.ಟಿ.ಎಸ್. ಮೋಹನ್ ಪ್ಯಾನೆಲ್‍ಡಿಸ್ಕಶನ್‍ನನ್ನು ನಿರ್ವಹಿಸಿದರು. ಡಾ.ಸಂಜಯ್‍ಚಿತ್ನಿಸ್, ಡಾ.ರಾಮ್‍ರಮೇಶ್, ಡಾ.ರಾಘವ್‍ರಾವ್, ಡಾ.ಶೇಖರ್ ಬಾಬು ಹಾಗೂ ರವಿ ತ್ರಿವೇದಿ ಪ್ಯಾನೆಲಿಸ್ಟ್‍ಗಳಾಗಿ ಭಾಗವಹಿಸಿದರು. ಎಐ ಹಾಗೂ ಐಒಟಿಕುರಿತಂತೆಟ್ಯುಟೋರಿಯಲ್ ನಡೆಸಲಾಯಿತು.

ಈ ವಿಚಾರ ಸಂಕಿರಣಕ್ಕೆರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ 162 ಸಂಶೋಧನ ಲೇಖನಗಳು ಬಂದಿದ್ದು, ಅದರಲ್ಲಿ 50 ಲೇಖನಗಳನ್ನು ಮಂಡನೆ ಮಾಡಲಾಯಿತು. ಇದರಜೊತೆಗೆ ವಿವಿಧ ವಿದ್ಯಾರ್ಥಿ ಯೋಜನೆಗಳು ಹಾಗೂ ಟೆಕ್ನೋ ಬ್ಯುಸಿನೆಸ್ ಪ್ಲ್ಯಾನ್‍ಗಳನ್ನು ಪ್ರಸ್ತುತಪಡಿಸಲಾಯಿತು. ಅಮೃತ ಮೈಸೂರುಕ್ಯಾಂಪಸ್‍ನ ವಿದ್ಯಾರ್ಥಿಗಳು ಸುಸ್ಥಿರ ಅಭಿವೃದ್ಧಿಕುರಿತುಎರಡು ಅಭಿಯಾನಗಳನ್ನು ನಡೆಸುತ್ತಿದ್ದು, ಇದರಕುರಿತು ವಿದ್ಯಾರ್ಥಿಗಳು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಅತ್ಯುತ್ತಮ ಸಂಶೋಧನಾ ಲೇಖನ, ಅತ್ಯುತ್ತಮ ವಿದ್ಯಾರ್ಥಿಯೋಜನೆ ಹಾಗೂ ಅತ್ಯುತ್ತಮಟೆಕ್ನೋ ಬಿಜ್ ಪ್ಲ್ಯಾನ್‍ಗೆ ಬಹುಮಾನ ನೀಡಲಾಯಿತು.