ಅ.16 ರಿಂದ 22 ವರೆಗೆ ದಸರಾ ಚಲನಚಿತ್ರೋತ್ಸವ

ಮಾಲ್ ಆಫ್ ಮೈಸೂರ್ ನಲ್ಲಿರುವ ಐನಾಕ್ಸ್ ಗೆ ದಸರಾ ಚಲನಚಿತ್ರೋತ್ಸವ ಉಪ ಸಮಿತಿ ಭೇಟಿ, ಸ್ಥಳ ಪರಿಶೀಲನೆ
ಮೈಸೂರು: 2023 ರ ದಸರಾ ಚಲನಚಿತ್ರೋತ್ಸವವನ್ನು ಅಕ್ಟೋಬರ್ 16 ರಿಂದ 22 ರವರೆಗೆ ನಗರದ ಮಾಲ್ ಆಫ್ ಮೈಸೂರಿನಲ್ಲಿರುವ ಐನಾಕ್ಸ್ ನಲ್ಲಿ ಹಮ್ಮಿಕೊಳ್ಳಲ್ಲಿದ್ದು, ಇಂದು ಸದರಿ ಸ್ಥಳಕ್ಕೆ ದಸರಾ ಚಲನಚಿತ್ರೋತ್ಸವ ಉಪ ಸಮಿತಿಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಐನಾಕ್ಸ್ ಮ್ಯಾನೇಜ್ ಮೆಂಟ್ ಜೊತೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಐನಾಕ್ಸ್ ಚಿತ್ರಮಂದಿರದಲ್ಲಿ ಆಸನಗಳ ವ್ಯವಸ್ಥೆ, ಚಲನ ಚಿತ್ರಗಳ ವೇಳಾಪಟ್ಟಿ ಹಾಗೂ ಟಿಕೆಟ್ ವಿತರಣೆಯ ಸಂಬoಧ ಹೊಸ ಸಾಫ್ಟ್ ವೇರ್ ಆಪ್ ಅನ್ನು ಅಭಿವೃದ್ಧಿಪಡಿಸಿ ಸಿನಿಮಾ ಪ್ರಿಯರನ್ನು ಆಕರ್ಷಿಸಲು ಆನ್ಲೈನ್ ಟಿಕೆಟ್ ವ್ಯವಸ್ಥೆ ಬಗ್ಗೆ ಹಾಗೂ ಅಗತ್ಯ ಸಿದ್ಧತೆಗಳ ಪರಿಶೀಲನೆ ಮಾಡಲಾಯಿತು.

ಈ ಸಂದರ್ಭದಲ್ಲಿ ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸವಿತಾ ಎಂ.ಕೆ, ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಕೆ.ಐ.ಎ.ಡಿ.ಬಿ ವಿಶೇಷ ಭೂ ಸ್ವಾಧೀನಾಧಿಕಾರಿಯಾದ ವಿ.ಪ್ರಿಯದರ್ಶಿನಿ, ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆ ಉಪ ನಿರ್ದೇಶಕರಾದ ಅಶೋಕ್ ಕುಮಾರ್, ಸಹ ಕಾರ್ಯದರ್ಶಿ ಹಾಗೂ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹರೀಶ್ ಟಿ.ಕೆ. , ಐನಾಕ್ಸ್ ಚಿತ್ರ ಮಂದಿರದ ಮ್ಯಾನೇಜರ್ ನಿಖಿಲ್ ಹಾಗೂ ಶ್ರೇಯಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *