ಕಡಿಮೆ ಸಂಖ್ಯೆಯ ಸಮುದಾಯಗಳ ಕಡೆಗಣನೆ : ವಿ.ಆರ್. ಸುದರ್ಶನ್ ವಿಷಾಧ

ಜ್ಯೋತಿಪಣ ಗಾಣಿಗರ ಸಂಘದ ಗುರುವಂದನಾ ಕಾರ್ಯಕ್ರಮ
ಚಾಮರಾಜನಗರ: ಜನಸಂಖ್ಯೆಯಲ್ಲಿ ಕಡಿಮೆ ಇರುವ ಸಣ್ಣ ಪುಟ್ಟ ಸಮುದಾಯಗಳು ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿಯಲು ಸರ್ಕಾರಗಳ ದ್ವಿಮುಖ ನೀತಿಗಳು ಕಾರಣವಾಗಿದೆ ಎಂದು ವಿಧಾನ ಪರಿ?ತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಬೇಸರ ವ್ಯಕ್ತಪಡಿಸಿದರು.

ನಗರದ ನಂದಿ ಭವನದಲ್ಲಿ ಚಾಮರಾಜನಗರ ಜಿಲ್ಲಾ ಜ್ಯೋತಿಪಣ ಗಾಣಿಗರ ಸಂಘದ ವತಿಯಿಂದ ಶನಿವಾರ ನಡೆದ ಗುರುವಂದನಾ ಕಾರ್ಯಕ್ರಮ, ಜಿಲ್ಲಾ ಗಾಣಿಗರ ಸಮಾವೇಶ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಿವ ಜ್ಯೋತಿ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಸಮುದಾಯಕ್ಕೆ ಸಂಘಟನೆ, ಜಾಗೃತಿ, ಹೋರಾಟ, ಶಿಕ್ಷಣ ಬಹಳ ಮುಖ್ಯ. ಆದರೆ ಕೆಲ ಹಿಂದುಳಿದ ಸಮಾಜಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಹಿನ್ನಡೆ ಉಂಟಾಗಿದೆ ಇವತ್ತಿನ ಸಂವಿಧಾನ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆ ಇಲ್ಲದಿದ್ದರೂ ವಸ್ತುಸ್ಥಿತಿಯಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿದೆ. ಇದನ್ನು ಹೋಗಲಾಡಿಸಲು ಮತ್ತು ಸಮ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.

ಗಾಣಿಗ ಸಮಾಜ ತುಂಬಾ ಹಿಂದುಳಿದ ಸಮಾಜ ವಾಗಿದೆ. ಈ ಸಮಾಜದ ಜನರಿಗೆ ಶಿಕ್ಷಣ, ಆರೋಗ್ಯ, ರಾಜಕೀಯವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಹಾಯ ಸಿಗುತ್ತಿಲ್ಲ. ಚುನಾವಣಾ ವ್ಯವಸ್ಥೆಯಲ್ಲಿ ವೋಟಿಗಾಗಿ ನೋಟು ಈ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಸರ್ಕಾರ ಈ ಬೆಳವಣಿಗೆ ಕುರಿತು ಗಂಭೀರ ಚಿಂತನೆ ಮಾಡಿ ಚುನಾವಣೆಗೆ ಸುಧಾರಣೆ ತರಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಗಾಣಿಗ ಸಮಾಜದ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಶಾಸಕರು ಗೈರು ಹಾಜರಾಗಿದ್ದು, ಸಮಾಜಕ್ಕೆ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಇಂತಹ ನಡವಳಿಕೆಯನ್ನು ತಿದ್ದಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು. ಸಮುದಾಯದಲ್ಲಿ ಅನೇಕ ಉಪ ಪಂಗಡಗಳಿದ್ದು ೨ಎ ಪ್ರವರ್ಗದಲ್ಲಿ ಕೆಲವು ಉಪ ಪಂಗಡಗಳನ್ನು ಕೈ ಬಿಡಲಾಗಿದೆ ಅದನ್ನು ಸೇರ್ಪಡೆ ಮಾಡಿ ಪ್ರಾತಿನಿಧ್ಯ ಕಲ್ಪಿಸಲು ಸರ್ಕಾರ ಗಮನ ಹರಿಸಬೇಕು. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳ ಜನರು ಆಡಳಿತದಲ್ಲಿ ಭಾಗಿಯಾಗಲು ಆಕಾಶ ನೀಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಶ್ರೀ ಕ್ಷೇತ್ರ ಮಹಾಸಂಸ್ಥಾನ ಮಠದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿಗಳು ತಮ್ಮ ರಾಜಕೀಯ ಅಧಿಕಾರವನ್ನು ತ್ಯಜಿಸಿ ಸಮಾಜದ ಏಳಿಗೆಗಾಗಿ ಮಠ ಸ್ಥಾಪಿಸಿ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಪ್ರಶಂಸಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಗಾಣಿಗರ ಮಹಾ ಸಂಸ್ಥಾನ ಮಠದ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿ ಮಾತನಾಡಿ, ಸಂಪುಟ ದರ್ಜೆ ಸ್ಥಾನಮಾನದಲ್ಲಿದ್ದ ನಾನು ರಾಜೀನಾಮೆ ನೀಡಿ ಸಾಂಸಾರಿಕ ಜೀವನವನ್ನು ತ್ಯಜಿಸಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಆಶ್ರಮ ಮಾಡಿದ್ದೇನೆ. ಈ ಮೂಲಕ ನಮ್ಮ ಸಮಾಜಕ್ಕೆ ಗುರುಪೀಠ ಸ್ಥಾಪಿಸಿ ಅವರಿಗೆ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹಾಗೂ ದಾಸೋಹ ಪರಂಪರೆಯನನು ಪರಿಚಯಿಸುವ ಹೆಜ್ಜೆಯನ್ನು ಇಟ್ಟಿದ್ದೇನೆ. ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಹಕಾರದಿಂದ ಎಂಟು ಎಕರೆ ಜಮೀನು ಪಡೆದು ಗುರುಪೀಠ, ಕಲ್ಯಾಣಮಂಟಪ, ಶಾಲೆ ಮತ್ತು ವಸತಿ ನಿಲಯಗಳನ್ನು ತೆರೆಯಲಾಗಿದೆ. ಸಮಾಜದ ಬಂಧುಗಳು ಇವುಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಸಮಾಜದ ಪ್ರತಿಯೊಬ್ಬರು ನ್ಯಾಯ ನೀತಿ ಧರ್ಮವನ್ನು ಪಾಲಿಸುವ ಮೂಲಕ ಕರ್ಮದಲ್ಲಿ ನಿ?ಯನ್ನು ಹೊಂದಿದರೆ ಮಾತ್ರ ಎಲ್ಲರಿಗೂ ಶ್ರೇಯಸ್ಸು ಉಂಟಾಗಲಿದೆ ಎಂದು ಆಶೀರ್ವಚನ ನೀಡಿದರು.

ಮೀಸಲಾತಿ ಪಡೆದುಕೊಂಡರೆ ಮತ್ತೇ ಮತ್ತೇ ಮೀಸಲಾತಿ ಸೌಲಭ್ಯಕ್ಕಾಗಿ ಮುಂದಾಗುತ್ತಿದ್ದಾರೆ. ಇದರಿಂದ ಅರ್ಹರಿಗೆ ಸೌಲಭ್ಯಗಳು ತಲುಪುತ್ತಿಲ್ಲ. ಇದೇ ರೀತಿ ಮುಂದುವರಿದರೆ, ಗುಲಾಮಗಿರಿಗೆ ಬರುವ ಪರಿಸ್ಥಿತಿ ಎದುರಾಗಲಿದೆ. ಆಡಳಿತ ನಡೆಸುತ್ತಿರುವವರು ಪ್ರವರ್ಗ ೨ಎ ಗೆ ಹೋರಾಟ ನಡೆಸುತ್ತಿರುವುದು ದುರದೃ?ಕರ. ನಾವು ಪ್ರವರ್ಗ ೨ ಎ ಉಳಿಸಿಕೊಳ್ಳಲು ಹೋರಾಟ ಮಾಡಬೇಕೆಂದು ಎಚ್ಚರಿಸಿದರು.

ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್ ಅವರು ಮಾತನಾಡಿ, ನಾವು ಯಾವುದೇ ಯೋಜನೆಗಳಿಗೆ ಸರ್ಕಾರಕ್ಕೆ ಅರ್ಜಿ ಹಾಕದೆ ಸೌಲಭ್ಯ ಸಿಗುವುದಿಲ್ಲ .ಈಗಿನ ಸರ್ಕಾರ ಗಾಣಿಗ ನಿಗಮಕ್ಕೆ ಸೂಕ್ತ ಅಧ್ಯಕ್ಷರನ್ನು ನೇಮಕ ಮಾಡಿ ವಾರ್ಷಿಕ ೧೦೦ ಕೋಟಿ ರೂ ಗಳನ್ನು ನೀಡಬೇಕೆಂದು ನಾನು ಹಾಗೂ ಸುದರ್ಶನ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದರು.

ಗಂಗಾ ಕಲ್ಯಾಣ, ನಿರುದ್ಯೋಗಿಗಳಿಗೆ ಸಾಲ, ವಿದೇಶದಲ್ಲಿ ವ್ಯಾಸಂಗಕ್ಕೆ ಸಾಲ ಸೌಲಭ್ಯ ಇವುಗಳೆಲ್ಲ ನಿಗಮದಿಂದ ದೊರೆಯುವಂತವು. ಹೀಗಾಗಿ ಸರ್ಕಾರ ಗಾಣಿಗ ಸಮಾಜದ ನಿಗಮಕ್ಕೆ ಹೆಚ್ಚು ಅನುದಾನ ನೀಡಿ ಪ್ರೋತ್ಸಾಹಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿವ ಜ್ಯೋತಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು ಅಲ್ಲದೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಗಣ್ಯರು ಹಾಗೂ ಸಮಾಜದ ಹಿರಿಯ ಮುಖಂಡರಿಗೆ ಶಾಲು ಓದಿಸಿ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿಗಳಿಗೆ ಪೂರ್ಣ ಕುಂಭ ಸ್ವಾಗತ ನೀಡಿ ನಂತರ ವೇದಿಕೆಯಲ್ಲಿ ಕುಲಬಾಂಧವರು ಪಾದ ಪೂಜಾ ಮಾಡಿ ಪು? ವೃಷ್ಟಿ ಮಾಡಿದರು.

ಕಾರ್ಯಕ್ರಮದಲ್ಲಿ ಜ್ಯೋತಿಪಣ ಗಾಣಿಗರ ಸಂಘದ ಜಿಲ್ಲಾ ಅಧ್ಯಕ್ಷ ಅಂಕಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯರಾಮಶೆಟ್ಟಿ, ಮುಖಂಡರಾದ ಪೂನಂ ಮಂಜುನಾಥ್, ಚಂದ್ರಮೋಹನ್, ನಾಗರಾಜ ಶೆಟ್ಟಿ, ಟಿ ರಂಗರಾಜು, ಎಂ.ಎಸ್.ಕುಮಾರ್, ಬಿ.ಕೆ. ಬಸವರಾಜು, ಜಿ.ಎನ್ ವೇಣುಗೋಪಾಲ್ ಪಿ.ಜಿ.ವಿಜಯಕುಮಾರ್,ಟಿ.ವಿ ರಾಮಕೃ?, ದೇವಶೆಟ್ಟಿ, ಡಿ.ಎಂ.ಎಸ್ ಮಹದೇವಣ್ಣ, ನರಸಿಂಹಯ್ಯ, ಶಿಕ್ಷಕ ಮಲ್ಲಶೆಟ್ಟಿ, ಉಪಾಧ್ಯಕ್ಷ ಹಂಗಳ ಎಚ್.ಎಸ್. ನಂಜಪ್ಪ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *