ಕಾಂಗ್ರೆಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಚಾಮರಾಜನಗರ: ಮಹರ್ಷಿ ವಾಲ್ಮೀಕಿ ಅವರ ಕಲ್ಪನೆಯಲ್ಲಿ ಮೂಡಿ ಬಂದ ರಾಮಾಯಣ ಮಹಾಕಾವ್ಯ ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದೆ. ಅವರ ಅದರ್ಶ ಜೀವನ ಸ್ಪೂರ್ತಿಯಾಗಿದೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಶ್ರೀ ವಾಲ್ಮೀಕಿ ಮಹರ್ಷಿಗಳ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ವಾಲ್ಮೀಕಿ ಬೇಡರ ಕುಲದಲ್ಲಿ ಹುಟ್ಟಿ, ನಾರದ ಮುನಿಗಳ ಮಾರ್ಗದರ್ಶನದಲ್ಲಿ , ತಪಸ್ಸು ಮಾಡಿ, ದಿವ್ಯ ಶಕ್ತಿಯನ್ನು ಪಡೆದು, ಜಗತ್ತು ಮೆಚ್ಚುವಂತಹ ರಾಮಾಯಣ ಮಹಾಕಾವ್ಯವನ್ನು ರಚನೆ ಮಾಡಿದರು. ಅವರು ಸೃಷ್ಟಿ ಮಾಡಿದ ಪ್ರತಿಯೊಂದು ಪಾತ್ರವು ಸಹ ಉತ್ಕøಷ್ಟವಾಗಿದೆ. ನಮ್ಮ ಜೀವನಕ್ಕೆ ಹತ್ತಿರವಾಗಿದೆ. ರಾಮಾಯಣ ಮಹಾಕಾವ್ಯದ ನಂತರ ಬಹಳಷ್ಟು ಕಾವ್ಯಗಳು ರಚನೆಯಾದರು ವಾಲ್ಮೀಕಿ ರಾಮಾಯಾಣಕ್ಕೆ ಸಾಟಿಯಾಗಲಿಲ್ಲ. ಇಂಥ ಮಹಾಪುರುಷರು ನಮ್ಮ ನಾಡಿನಲ್ಲಿ ಇದ್ದರು ಎಂಬುವುದೇ ನಮಗೆ ಹೆಮ್ಮೆಯಾಗಿದೆ ಎಂದರು.

ವಾಲ್ಮೀಕಿ ಮಹರ್ಷಿಗಳು ಓರ್ವ ಸಂತರು. ತಮ್ಮ ತಪಸ್ಸ್ ಶಕ್ತಿಯಿಂದ ಪರಮಾತ್ಮನನ್ನು ಓಲೈಸಿಕೊಟ್ಟರು. ಬೇಡ ಕುಲದಲ್ಲಿ ಹುಟ್ಟಿ ಹಿಂಸೆಯನ್ನು ತ್ಯಜಿಸಿ ಅಹಿಂಸೆ ಕಡೆ ಬಂದು ಮನುಕುಲದ ಉದ್ದಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು. ಇಂಥ ಮಹಾನ್ ಸಂತರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಅವರ ತತ್ವ ಅದರ್ಶಗಳನ್ನು ನಾವೆಲ್ಲರು ಮೈಗೂಡಿಸಿಕೊಳ್ಳೋಣ ಎಂದರು.

ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಜಗತ್ತಿಗೆ ಅದ್ಬುತವಾದ ರಾಮಾಯಣ ಮಹಾ ಕಾವ್ಯವನ್ನು ಸೃಷ್ಟಿಸಿ ಕೊಟ್ಟ ಮಹರ್ಷಿ ವಾಲ್ಮೀಕಿ ನಮ್ಮೆಲ್ಲರಿಗೂ ಅದರ್ಶವಾಗಿದ್ದಾರೆ. ಬೇಡ ಕುಲದಲ್ಲಿ ಹುಟ್ಟಿದ ವಾಲ್ಮಿಕಿ ತಪಸ್ಸು ಶಕ್ತಿಯನ್ನು ಹೊಂದಿ, ಸಮಾಜದ ಅಭಿವೃದ್ದಿಗಾಗಿ ತಮ್ಮನ್ನು ಅರ್ಪಣೆ ಮಾಡಿಕೊಂಡರು. ಇಂಥ ಮಹಾಪುರುಷರ ಜಯಂತಿಯನ್ನು ಆಚರಣೆ ಮಾಡುತ್ತಿರುವ ನಾವೆಲ್ಲರು ಪುಣ್ಯವಂತರು ಅವರ ತತ್ವ ಅದರ್ಶವನ್ನು ಮೈಗೂಡಿಸಿಕೊಳ್ಳೋಣ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ್, ಆರ್. ಮಹದೇವ್, ಬ್ಲಾಕ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಹೊಂಗನೂರು ಚಂದ್ರು, ರಾಜ್ಯ ಎಸ್ಟಿ ಘಟಕದ ಕಾರ್ಯದರ್ಶಿ ಪು. ಶ್ರೀನಿವಾಸನಾಯಕ,ಎಸ್ಸಿ ಘಟಕದ ಅಧ್ಯಕ್ಷ ನಲ್ಲೂರು ಸೋಮೇಶ್ವರ್, ಜಿಲ್ಲಾ ವಕ್ತಾರ ಕೆರಹಳ್ಳಿ ನವೀನ್, ಜಿ.ಪಂ. ಮಾಜಿ ಸದಸ್ಯರಾದ ಅರಕಲವಾಡಿ ಸೋಮನಾಯಕ, ರಮೇಶ್, ಸೇವಾ ದಳದ ಅಧ್ಯಕ್ಷ ಹೊಂಗನೂರು ಜಯರಾಜ್, ಮುಖಂಡರಾದ ಸುಹೇಲ್ ಆಲಿ ಖಾನ್, ಎಎಚ್‍ಎನ್ ಖಾನ್, ಅಯೂಬ್‍ಖಾನ್, ನಗರಸಭೆ ಸದಸ್ಯೆ ಚಿನ್ನಮ್ಮ, ಹೆಗ್ಗೋಠಾರ ಮಹದೇವಸ್ವಾಮಿ, ಬಿಸಲವಾಡಿ ರವಿ, ಚಂಗುಮಣಿ, ಮಹೇಶ್, ಸೋಮಣ್ಣ, ಕಾಗಲವಾಡಿ ಚಂದ್ರು, ವೀರಭದ್ರಸ್ವಾಮಿ, ಪುಟ್ಟಸ್ವಾಮಿ, ಮುತ್ತಿಗೆ ದೊರೆ, ಸ್ವಾಮಿ ಕರಿನಂಜನಪುರ, ಇಮ್ರಾನ್ ಅಹಮದ್, ಜಾವಿದ್ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *