ಚಾಮರಾಜನಗರ: ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ದೊಡ್ಡರಾಯಪೇಟೆ ಮೂರ್ತಿ ನೇಮಕಗೊಂಡಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಮರಿಸ್ವಾಮಿ ಅವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ಕೆ.ಪುಟ್ಟಸ್ವಾಮಿಗೌಡರು ಮೂರ್ತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಮಾರ್ಗದರ್ಶನದಲ್ಲಿ ಹಾಗೂ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಸ್ಥಳೀಯ ನಾಯಕರುಗಳ ಸಹಕಾರದೊಂದಿಗೆ ತಮಗೆ ವಹಿಸಲಾಗಿರುವ ಜವಾಬ್ದಾರಿಯನ್ನು ನಿಷ್ಠೆಯಿಂದ ಯಶ್ವಸಿಯಾಗಿ ನಿರ್ವಹಿಸಿ, ಪಕ್ಷದ ಸಂಘಟನೆಗೆ, ಕಾರ್ಮಿಕರ ಏಳಿಗೆಗಾಗಿ ಶ್ರಮಿಸುವಂತೆ ಸೂಚಿಸಿಲಾಗಿದೆ. ತಮಗೆ ಹೆಚ್ಚಿನ ಯಶಸ್ಸು ದೊರೆಯಲೆಂದು ಪುಟ್ಟಸ್ವಾಮಿಗೌಡರು ನೇಮಕಾತಿ ಆದೇಶಪತ್ರದಲ್ಲಿ ತಿಳಿಸಿದ್ದಾರೆ.