ಅನ್ವೇಷಣಾ ಶಿಕ್ಷಣ ಸಂಸ್ಥೆಯಲ್ಲಿ ಕುವೆಂಪು ಸಂಭ್ರಮಾಚರಣೆ
ಬಿಳಿಗೆರೆ : ನಿಜವಾಗಿಯೂ ಕುವೆಂಪು ಜಯಂತಿಯ ಆಚರಣೆಗೆ ಇಲ್ಲಿ ಒಂದು ಅರ್ಥ ದೊರೆತಿದೆ ಎಂದು ಉಪನ್ಯಾಸಕ ಹಾಗೂ ಕವಿ ಹೇಮಚಂದ್ರ ದಾಳಗೌಡನಹಳ್ಳಿ ಅಭಿಪ್ರಾಯಪಟ್ಟರು.
ಹುಣಸೂರು ತಾಲ್ಲೂಕಿನ ಬಿಳಿಗೆರೆ ಗ್ರಾಮದಲ್ಲಿರುವ ಅನ್ವೇಷಣಾ ಶಿಕ್ಷಣ ಸಂಸ್ಥೆ ಏರ್ಪಡಿಸಿದ್ದ ಕುವೆಂಪು ಜಯಂತಿ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಕುವೆಂಪು ಜಯಂತಿ ಅಂಗವಾಗಿ ಸಂಸ್ಥೆ ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನನಗೆ ಮಕ್ಕಳು ಕುವೆಂಪು ಅವರ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಿದ್ದುದನ್ನು ನೋಡಿದಾಗ ನಿಜಕ್ಕೂ ಇಂದಿನ ದಿನಕ್ಕೆ ಒಂದು ಅರ್ಥ ಸಿಕ್ಕಿದೆಯೆನಿಸಿತು ಎಂದರು.

ವ್ಯಕ್ತಿಯ ಹುಟ್ಟಿದ ದಿನವನ್ನು ಯವ ದಿನವೆಂದು ಆಚರಿಸುತ್ತೇವೆ ಎಂಬುದರ ಔನ್ನತ್ಯದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಧರಿಸಲಾಗುತ್ತದೆ. ಇಂದಿನ ದಿನವನ್ನು ವಿಶ್ವಮಾನವ ದಿನವೆಂದು ಆಚರಿಸುತ್ತಿರುವುದು ಕುವೆಂಪು ಅವರ ಔನತ್ಯವನ್ನು ತೋರಿಸುತ್ತದೆ. ಪ್ರಸ್ತುತ ಸಮಾಜದಲ್ಲಿ ಕುವೆಂಪು ಅವರ ಆದರ್ಶಗಳು ಪ್ರಸ್ತುತವಾಗಿರುವುದರಿಂದ ಅವರನ್ನು ನಾವಿಂದಿನ ದಿನಗಳಲ್ಲಿ ನೆನೆಯಲೇ ಬೇಕಿದೆ ಎಂದರು.
ಶಿಕ್ಷಣ ಸಂಸ್ಥೆಯು ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸ್ಥೆಯ ಮುಖ್ಯಸ್ಥರಾದ ಹೆಚ್ ಕೆ ಚಂದ್ರಮೋಹನ್ ಅವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಕುವೆಂಪು ಅವರ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಪುಸ್ತಕವನ್ನು ಓದಿ. ಕುವೆಂಪು ಅವರ ಆದರ್ಶಗಳ ಪಾಲನೆಯಾಗಲಿ ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಪ್ರಾಂಶುಪಾಲರಾದ ಗಿರೀಶ್ ಹೆಚ್ ಎನ್ ಮಾತನಾಡುತ್ತಾ ಇಂದು ನಮ್ಮ ವಿದ್ಯಾರ್ಥಿಗಳು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಉತ್ತರಿಸುತ್ತದ್ದ ಪರಿಯನ್ನು ನೋಡಿದರೆ ನಿಜಕ್ಕೂ ಇಂದಿನ ಆಚರಣೆಗೆ ಮಹತ್ವ ದೊರೆತಂತ್ತಾಗಿದೆ ಎಂದರು.
ಕುವೆಂಪು ಜಯಂತಿ ಆಂಗವಾಗಿ ಸಂಸ್ಥೆಯು ಕುವೆಂಪು ಕುರಿತ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಕುವೆಂಪು ಪೋಸ್ಟರ್ ಮೇಕಿಂಕ್, ಕುವೆಂಪು ಕವನ ವಾಚನ ಸ್ಪರ್ಧೆಗಳನ್ನು ಆಯೊಜಿಸಿತ್ತು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಆಶಾನಂದೀಶ್, ಉಪನ್ಯಾಸಕರುಗಳಾದ ಆಶಾರಾಣಿ, ರೂಹಿಅಫ್ಸಾನ, ಖುತೇಜ, ವಸೀಂ ಪಾಷಾ, ಸುಬ್ಬುಕೃಷ್ಣ, ಕಾವ್ಯ, ಶ್ವೇತ, ವಿಷ್ಣು, ಪೂಜಾ, ರವಿಚಂದ್ರ, ರಘುನಂದನ್, ವೆಂಕಟೇಶ, ರಶ್ಮಿ ಇನ್ನಿತರರು ಹಾಜರಿದ್ದರು.