ಚಾಮರಾಜನಗರ: ಒಕ್ಕಲಿಗ ಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಕೆ.ಎಸ್. ಪ್ರೊ. ಭಗವಾನ್ ಅವರನ್ನು ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ತಾಲೂಕು ಒಕ್ಕಲಿಗ ಸಮುದಾಯದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ತಾಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷ ಪುಟ್ಟಸ್ವಾಮಿಗೌಡ ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆತಡೆ ಭಗವಾನ್ ಭಾವಚಿತ್ರ ಹರಿದು ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆ.ಪುಟ್ಟಸ್ವಾಮಿಗೌಡ ಮಾತನಾಡಿ, ದೇಶಕ್ಕೆ ಒಕ್ಕಲಿಗರ ಕೊಡುಗೆ ಅಪಾರ. ಕುಲಕಸುಬು ಪಶುಪಾಲನೆ, ಕೃಷಿ ಹೈನುಗಾರಿಕೆ ಮಾಡಿ ನಾಡನ್ನು ಕಟ್ಟಿದ್ದಾರೆ. ಶ್ರೇಷ್ಠಕುಲ ಒಕ್ಕಲಿಗರದ್ದು ಗಂಗರು, ಚೋಳರು ಆಡಳಿತ ಮಾಡಿ ನಾಡಿನ ಸಂಸ್ಕೃತಿಗೆ ಬಹುದೊಡ್ಡ ಕೊಡಿಗೆ ನೀಡಿದ್ದಾರೆ ಎಂದರು. . ನಾಡಪ್ರಭು ಕೆಂಪೇಗೌಡರು ನಾಡಿನ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಿದ್ದಾರೆ. ಶ್ರೀಕೃಷ್ಣದೇವರಾಯ ಸಾರ್ವಭೌಮತ್ವ ಪಡೆಯಲು ಒಕ್ಕಲಿಗರ ಕೊಡುಗೆ ನೀಡಿದ್ದಾರೆ. ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಭಗವಾನ್ ಅವರ ಹೇಳಿಕೆ ಅಸಂಬದ್ದವಾಗಿದೆ. ಇದೊಂದು ಸಮಾಜ ಒಡೆಯುವ ಹೇಳಿಕೆಯಾಗಿದೆ. ಇಂತಹ ಹೇಳಿಕೆಯಿಂದ ಒಕ್ಕಲಿಗ ಸಮಾಜಕ್ಕೆ ಅಗೌರವ ಉಂಟಾಗಿದೆ. ಸರ್ಕಾರ ತಕ್ಷಣವೇ ಭಗವಾನ್ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ ,ಒಕ್ಕಲಿಗ ಸಂಸ್ಕೃತಿ, ಪರಂಪರೆ ಅತ್ಯಂತ ಗೌರವಯುತವಾದದ್ದು, ರಾಷ್ಟ್ರಕುವೆಂಪು ಅವರು ಸರ್ವಜನಾಂಗದ ತೋಟ ಅಂಥಾ ಹೇಳಿದ್ದರು. ಭಗವಾನ್ ಅವರು ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಹೇಳಿಕೆ ನೀಡುವ ಮೂಲಕ ಸಮಾಜದ ಸಾಮರಸ್ಯ ಕದಡುವಂತಹ ಹೇಳಿಕೆ ನೀಡಿದ್ದಾರೆ. ಸರ್ಕಾರ ಅವರನ್ನು ಬಂಧಿಸಿ ಮೊಕದ್ದಮೆ ಹೂಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಪಣ್ಯದಹುಂಡಿರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗೇಂದ್ರಗೌಡ, ಕರಿಯನಕಟ್ಟೆ ಚಿನ್ನುಮುತ್ತು, ಲೋಕೇಶ್, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ರಾಜೇಗೌಡ, ದಾಸನಹುಂಡಿ ಬಾಬು, ಮಹೇಶಗೌಡ, ಕರಿಯನಕಟ್ಟೆ ರಘು, ಎಲ್ ಐಸಿ ರಾಜು, ಗೋವಿಂದೇಗೌಡ, ಮಹೇಶ್, ಅರುಣಕುಮಾರ್ ಗೌಡ, .ಎಂ.ರಾಜು, ದೇವರಾಜು, ಸತೀಶ್, ಮಂಜುನಾಥ್ ಗಂಗಾಧರಗೌಡ, ಇತರರು ಭಾಗವಹಿಸಿದ್ದರು.