ಕೋಡಿಮೋಳೆ ಗ್ರಾಮದಲ್ಲಿ ಭಗತ್‍ಸಿಂಗ್ ಯುವಸೇನೆ ವತಿಯಿಂದ ಎರಡನೇ ವರ್ಷದ ಅಪ್ಪು ಪುಣ್ಯ ಸ್ಮರಣೆ : ಅನ್ನ ಸಂತರ್ಪಣೆ

ಚಾಮರಾಜನಗರ: ತಾಲ್ಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಭಗತ್ ಸಿಂಗ್ ಯುವಸೇನೆ ಹಾಗೂ ಪುನಿತ್ ರಾಜಕುಮಾರ್ ಅಭಿಮಾನಿಗಳ ಬಳಗದವರು ವತಿಯಿಂದ ಏರ್ಪಡಿಸಿದ ದಿ, ಪವರ್ ಸ್ಟಾರ್ ಪುನೀತ್‍ರಾಜಕುಮಾರ್ ರವರ ಎರಡನೇ ವರ್ಷದ ಪುಣ್ಯ ಸ್ಮರಣೆ ಮಾಡಿ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಿದರು.

ಕೋಡಿಮೋಳೆ ಗ್ರಾಮದ ಪುನೀತ್ ರಾಜ್‍ಕುಮಾರ್ ರವರ ವೃತ್ತದಲ್ಲಿ ಏರ್ಪಡಿಸಿದ ಎಡಡನೇವರ್ಷದ ದಿ,ಪುನೀತ್ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಕಲಾವಿದ ಗಾಳೀಪುರ ಮಂಜು ಉದ್ಘಾಟಿಸಿ ಮಾತನಾಡಿ ಪುನೀತ್ ರಾಜಕುಮಾರ್ ನಿಧನ ಕುರುನಾಡಿಗೆ ತುಂಬ ಲಾರದ £,Àಷ್ಟವಾಗಿದೆ. ಯುವ ಸಮುದಾಯದ ನೆಚ್ಚಿನ ನಟರಾಗಿದ್ದ ಪುನೀತ್ ಅವರ ತತ್ವ ಅದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಅಭಿಮಾನಿಯಾಗಿ ಅವರಂತೆ ಸದಾ ಕ್ರಿಯಾಶೀಲರಾಗಿ ದುಡಿಯುವ ಜೊತೆಗೆ ಸಮಾಜದ ಅಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗಬೇಕು. ಪುನೀತ್ ಅಶಯವನ್ನು ಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರು ಮುನ್ನಡೆಯೋಣ ಎಂದರು
ಪರಿಸg ಪ್ರೇಮಿ ಹಾಗೂ ಈಶ್ವರಿಸ್ಕೂಲ್‍ಆಫ್‍ಮ್ಯೂಸಿಕಲ್ ಸಂಸ್ಥೆಯ ಸಿ,ಎಂ ವೆಂಕಟೇಶ್ ಅಪ್ಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಯುವಕ ಕಣ್ಮಣಿ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಯುವ ಸಮುದಾಯಕ್ಕೆ ಭಾರಿ ನೋವು ಉಂಟು ಮಾಡಿದೆ.

ಡಾ. ರಾಜಕುಮಾರ್ ಅವರ ಕಿರಿಯ ಪುತ್ರನಾಗಿದ್ದ ಪುನೀತ್ ತಂದೆಯನ್ನು ಮೀರಿಸುವಷ್ಟು ಮಟ್ಟಕ್ಕೆ ಚಿತ್ರರಂಗದಲ್ಲಿ ಬೆಳೆದಿದ್ದರು. ಜೊತೆಗೆ ಸಮಾಜ ಸೇವೆಯ ಮಾಡುವÀ ಮೂಲಕ ಸಮಾಜದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿರ್ಗತಿಕರು, ವೃದ್ದರು, ಹಾಗೂ ಅನಾಥ ಮಕ್ಕಳಿಗೆ ನೆರವು ನೀಡಿ ಅಭಿವೃದ್ದಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.

ಇದೇ ವೇಳೆ ಪರಿಸರ ಪ್ರೇಮಿ ಹಾಗೂ ಈಶ್ವರಿಸ್ಕೂಲ್‍ಆಫ್‍ಮ್ಯೂಸಿಕಲ್ ಸಂಸ್ಥೆಯ ಸಿ,ಎಂ ವೆಂಕಟೇಶ್ ಹಾಗೂ ಕಲಾವಿದ ಗಾಳೀಪುರ ಮಂಜು, ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಭಗತ್ ಯುವ ಸೇನೆ ಅಧ್ಯಕ್ಷ ಕಾತರಾಜ್, ಡೈರಿ ಅಧ್ಯಕ್ಷ ಕೋಡಿಮೋಳೆ ಗೋವಿಂದಶೆಟ್ಟಿ, ಗ್ರಾ,ಪಂಅಧ್ಯಕ್ಷ ನಟರಾಜು, ಗ್ರಾ,ಪಂ ಸದಸ್ಯ ಮಹದೇವಶೆಟ್ಟಿ, ನಾಗೇಶ್‍ಅಪ್ಪು, ರಾಮ, ಲಕ್ಷ್ಮಣ, ಮನು, ಅಭಿಷೇಕ್, ಶ್ರೀನಿವಾಸ್,ಸೊಹನ್, ದೇವರಾಜು, ಪ್ರೀತಮ್,ರಘು, ಪ್ರಕಾಶ್, ಸೇರಿದಂತೆ ಪುನೀತ್ ಅಭಿಮಾನಿ ಬಳಗ ಹಾಗೂ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *