ಗಡಿಯಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಹೆಚ್ಚಿನ ಅದ್ಯತೆ ನೀಡೋಣ : ಗಣೇಶ್ ಪ್ರಸಾದ್

ಚಾಮರಾಜನಗರ: ಗಡಿಯಲ್ಲಿರುವ ಜಿಲ್ಲೆಯ ಕನ್ನಡಿಗರಾದ ನಾವು ಕನ್ನಡತನವನ್ನು ಬಿಟ್ಟು ಕೊಡದೇ ಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ವರ್ಷಪೂರ್ತಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುವ ಜೊತೆಗೆ ಕನ್ನಡಿಗೆ ಪ್ರಥಮ ಅಧ್ಯತೆ ನಮ್ಮದಾಗಬೇಕು ಎಂದು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್‍ಪ್ರಸಾದ್ ತಿಳಿಸಿದರು.

ತಾಲೂಕಿನ ಹರವೆ ಶ್ರೀ ಚನ್ನಬಸವೇಶ್ವರ ವಿದ್ಯಾ ಸಂಸ್ತೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಮನೆಯೇ ಮೊದಲ ಪಾಠ ಶಾಲೆ ಎಂಬಂತೆ, ಮಕ್ಕಳಲ್ಲಿ ಕನ್ನಡದ ಬಗ್ಗೆ ಪೋಷಕರು ಹೆಚ್ಚಿನ ಆಸಕ್ತಿ ಮೂಡಿಸಬೇಕು. ನಾವು ಯಾವುದೇ ಭಾಷೆಯನ್ನು ಕಲಿಯೋಣ. ಆದರೆ, ನಮ್ಮ ಹಾಡು ಭಾಷೆ ಕನ್ನಡವಾಗಿರಲಿ. ತಮಿಳುನಾಡು ಹಾಗೂ ಕೇರಳ ಗಡಿಯಲ್ಲಿರುವ ನಮ್ಮಗೆ ಪರ ಭಾಷಿಕರ ಆಕರ್ಷಣೆ ಹೆಚ್ಚು. ಈ ಹಂತದಲ್ಲಿಯು ನಮ್ಮ ಕನ್ನಡವನ್ನು ಉಳಿಸುವ ಬೆಳೆಸುವ ಬಹು ದೊಡ್ಡ ಜವಾಬ್ದಾರಿ ನಮ್ಮದಾಗಿದೆ. ವಿದ್ಯಾರ್ಥಿಗಳು ಇತರೇ ಭಾಷೆಗಳನ್ನು ವ್ಯವಹಾರ ಹಾಗೂ ಕಲಿಕೆಗಾಗ ಸಂವಹನ, ಜ್ಞಾನ ವಿಸಕನಕ್ಕಾಗಿ ಕಳುಹಿಸಬೇಕು. ನಮ್ಮ ಮಾತೃಭಾಷೆ ಕನ್ನಡವಾಗಿರಬೇಕು ಎಂದು ಗಣೇಶ್ ಪ್ರಸಾದ್ ತಿಳಿಸಿದರು.

ಶ್ರೀ ಚನ್ನಬಸವೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ಸರ್ಪಭೂಷಣಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯನ್ನು ಬೆಳೆಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಆಂಗ್ಲ ಹಾಗೂ ಇತರೇ ಭಾಷೆಗಳ ವ್ಯಾಮೋಹದಿಂದ ಕನ್ನಡ ಭಾಷೆ ಬಳಕೆ ಕಡಿಮೆಯಾಗುತ್ತದೆ. ನಾವೆಲ್ಲರು ಯಾವುದೇ ಪದವಿಗೆ ಹೋದರು ಸಹ ಕನ್ನಡ ಮಾತನಾಡುವ, ಬರೆಯುವ ಹಾಗು ಕನ್ನಡದಲ್ಲಿ ಹೆಚ್ಚು ವ್ಯವಹರಿಸುವುದನ್ನು ರೂಡಿಸಿಕೊಳ್ಳಬೇಕು. ಮಾತೃ ಭಾಷೆ ಕನ್ನಡವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮವ ಬಹಳ ಪ್ರೇರಕ್ಷರ ಮನಸೊರೆಗೊಂಡಿತ್ತು.

ಕಾರ್ಯಕ್ರಮದಲ್ಲಿ ಮಲೆಯೂರು ಕನಕಗಿರಿ ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಭವನಕೀರ್ತಿ ಭಟ್ಟಾರಕ ಸ್ವಾಮೀಜಿ, ಜಿ.ಪಂ. ಮಾಜಿ ಸದಸ್ಯ ಕಬ್ಬಹಳ್ಳೀ ಮಹೇಶ್, ಜಿಲ್ಲಾ ಉಪ ಯೋಜನಾ ಸಮಾನ್ವಾಧಿಕಾರಿ ಲಕ್ಷ್ಮೀಪತಿ, ಸಂಸ್ಥೆಯ ಕಾರ್ಯದರ್ಶಿ ಗಿರೀಶ್, ಮುಖ್ಯ ಶಿಕ್ಷಕ ರಾಜು, ಸಹ ಶಿಕ್ಷಕ ಲೋಕೇಶ್, ಹೀರಿಬೇಗೂರು ಗುರುಸ್ವಾಮಿ, ಗಿರೀಶ್ ಹಾಗೂ ಪೋಷಕರು, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *